ಮದುವೆಯಾಗದೇ 6ನೇ ಮಗುವಿಗೆ ತಂದೆಯಾಗಲಿದ್ದಾರೆ Cristiano Ronaldo...!

Suvarna News   | Asianet News
Published : Oct 29, 2021, 12:15 PM IST

ಬೆಂಗಳೂರು: ತಂದೆಯಾಗುವ ಖುಷಿ ಎಷ್ಟು ಸಂತೃಪ್ತಿ ಕೊಡುತ್ತದೆ ಎನ್ನುವುದು ಅನುಭವಿಸಿದವರಿಗೆ ಮಾತ್ರ ಗೊತ್ತಿರುತ್ತದೆ. ಇದೀಗ ಜಗತ್ತಿನ ದಿಗ್ಗಜ ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೋ (Cristiano Ronaldo) 6ನೇ ಮಗುವನ್ನು ಸ್ವಾಗತಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಹೌದು, ಮ್ಯಾಂಚೆಸ್ಟರ್ ಯುನೈಟೆಡ್ (Manchester United) ಹಾಗೂ ಪೋರ್ಚುಗಲ್‌ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ ಸದ್ಯದಲ್ಲೇ ಆರನೇ ಮಗುವಿಗೆ ತಂದೆಯಾಗಲಿದ್ದಾರೆ. ಗುರುವಾರವಷ್ಟೇ ರೊನಾಲ್ಡೋ ತನ್ನ ಗೆಳತಿ ಜಾರ್ಜಿನಾ ರೋರ್ಡ್ರಿಗಸ್‌ (Georgina Rodriguez) ಅವರೊಂದಿಗೆ ಅವಳಿ ಮಗು ಪಡೆಯುವ ವಿಚಾರವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂ ಮೂಲಕ ಖಚಿತಪಡಿಸಿದ್ದಾರೆ. ಅಂದಹಾಗೆ ನಿಮಗೆ ಗೊತ್ತಿರಲಿ, ಜಾರ್ಜಿನಾ ರೋರ್ಡ್ರಿಗಸ್‌ ರೊನಾಲ್ಡೋ ಅವರ ಗರ್ಲ್‌ ಫ್ರೆಂಡ್‌. ಇದಕ್ಕೂ ಮೊದಲೇ ರೊನಾಲ್ಡೋ ತಮ್ಮ ಬೇರೆ ಬೇರೆ ಗರ್ಲ್‌ ಫ್ರೆಂಡ್‌ಗಳಿಂದ 4 ಮಕ್ಕಳಿಗೆ ತಂದೆಯಾಗಿದ್ದಾರೆ.

PREV
19
ಮದುವೆಯಾಗದೇ 6ನೇ ಮಗುವಿಗೆ ತಂದೆಯಾಗಲಿದ್ದಾರೆ Cristiano Ronaldo...!
ronaldo and georgina

ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೋ ಗುರುವಾರ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಗೆಳತಿ ಜಾರ್ಜಿನಾ ಜತೆ ಮಲಗಿಕೊಂಡಿರುವ ಫೋಟೋವೊಂದನ್ನು ರೊನಾಲ್ಡೋ ಹಂಚಿಕೊಂಡಿದ್ದು, ನಾವು ಆರನೇ ಮಗುವಿನ ನಿರೀಕ್ಷೆಯಲ್ಲಿದ್ದೇವೆ. ನಮ್ಮ ಹೃದಯ ಖುಷಿಯಿಂದ ತುಂಬಿತುಳುಕುತ್ತಿದೆ ಎಂದು ಬರೆದುಕೊಂಡಿದ್ದಾರೆ.

29

ಇದರ ಜತೆಗೆ ರೊನಾಲ್ಡೋ ಮತ್ತೊಂದು ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ನಾಲ್ವರು ಮಕ್ಕಳ ಜತೆ ಸ್ವಿಮ್ಮಿಂಗ್‌ಪೂಲ್‌ನಲ್ಲಿ ಎಂಜಾಯ್‌ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕೇವಲ 12 ಗಂಟೆಗಳ ಅವಧಿಯಲ್ಲಿ 23 ಕೋಟಿಗೂ ಅಧಿಕ ಮಂದಿ ರಿಯಾಕ್ಷನ್‌ ನೀಡಿದ್ದಾರೆ. 

39

ಇನ್ನು ಇಂಟ್ರೆಸ್ಟಿಂಗ್ ಸಂಗತಿಯೆಂದರೆ ಇಲ್ಲಿಯವರೆಗೂ ಕ್ರಿಸ್ಟಿಯಾನೋ ರೊನಾಲ್ಡೋ ಯಾರನ್ನೂ ವಿವಾಹವಾಗಿಲ್ಲ. ಬೇರೆ-ಬೇರೆ ಗರ್ಲ್‌ಫ್ರೆಂಡ್ ಜತೆ ರೊನಾಲ್ಡೋ 4 ಮಕ್ಕಳನ್ನು ಪಡೆದಿದ್ದಾರೆ. ಸದ್ಯ ರೊನಾಲ್ಡೋ ಜಾರ್ಜಿನಾ ರೋಡ್ರಿಗಸ್‌ ಜತೆ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಈ ಜೋಡಿಗೆ ಈಗಾಗಲೇ 3 ವರ್ಷದ ಒಬ್ಬಳು ಮಗಳಿದ್ದಾಳೆ. ಆಕೆಗೆ ಮಾರ್ಟಿನಾ ಎಂದು ಹೆಸರಿಟ್ಟಿದ್ದಾರೆ.

49

ಕ್ರಿಸ್ಟಿಯಾನೋ ರೊನಾಲ್ಡೋ 2010ರಲ್ಲಿ ಬಾಡಿಗೆ ತಾಯಿಯ ಮೂಲಕ ಕ್ರಿಸ್ಟಿಯಾನೋ ಜೂನಿಯರ್ ಎನ್ನುವ ಮಗನನ್ನು ಪಡೆದರು. ಇದಾದ 7 ವರ್ಷಗಳ ಬಳಿಕ ರೊನಾಲ್ಡೋ ಇಬ್ಬರು ಅವಳಿ ಮಕ್ಕಳಿಗೆ ತಂದೆಯಾದರು.

59

ಜಾರ್ಜಿನಾ ಓರ್ವ ಮಾಡೆಲ್ ಆಗಿದ್ದಾರೆ. 2016ರಲ್ಲಿ ಸ್ಪೇನ್‌ನಲ್ಲಿ ರೊನಾಲ್ಡೋ ಹಾಗೂ ಜಾರ್ಜಿನಾ ಮೊದಲ ಬಾರಿಗೆ ಭೇಟಿಯಾಗಿದ್ದರು. ಭೇಟಿ ಪರಿಚಯಕ್ಕೆ ತಿರುಗಿ ಆನಂತರ ಡೇಟಿಂಗ್ ನಡೆಸಲಾರಂಭಿಸಿದರು. 
 

69

ಇದಕ್ಕೂ ಮೊದಲು ರೊನಾಲ್ಡೋ ಮಾಜಿ ಮಿಸ್‌ ಸ್ಪೇನ್‌ ಜತೆ ಡೇಟಿಂಗ್ ನಡೆಸುತ್ತಿದ್ದರು. ಜಾರ್ಜಿನಾ ಪರಿಚಯದ ಬಳಿಕ ಹಳೆಯ ಗೆಳತಿಯ ಜತೆ ರೊನಾಲ್ಡೋ ಬ್ರೇಕ್ ಅಪ್ ಮಾಡಿಕೊಂಡರು. ಇದೀಗ ಜಾರ್ಜಿನಾ ಜತೆ 5 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ.
 

79

ಸದ್ಯ ಜಾರ್ಜಿನಾ ಹಾಗೂ ರೊನಾಲ್ಡೋ ಮತ್ತೊಮ್ಮೆ ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದಾರೆ. ಇದಾದ ಬಳಿಕವೂ ಮತ್ತೆ ಮಕ್ಕಳನ್ನು ಪಡೆಯುವ ಅಭಿಲಾಷೆಯನ್ನು ರೊನಾಲ್ಡೋ ಹೊಂದಿದ್ದಾರೆ. 2017ರಲ್ಲಿ ಫ್ರಾನ್ಸ್‌ ಫುಟ್ಬಾಲ್ ಟೂರ್ನಿಯ ವೇಳೆ ತಾವು 7 ಮಕ್ಕಳನ್ನು ಪಡೆಯಲು ಬಯಸಿರುವುದಾಗಿ ತಿಳಿಸಿದ್ದಾರೆ. 

89

ಇನ್ನೊಂದು ವಿಚಾರವೆಂದರೆ ರೋನಾಲ್ಡೋ ಹಾಗೂ ಮತ್ತವರ ಗರ್ಲ್‌ ಫ್ರೆಂಡ್ ಸಂಖ್ಯೆ ಸಾಕಷ್ಟು ದೊಡ್ಡದಿದೆ. ರೊನಾಲ್ಡೋ ಅವರ ಹೆಸರು ಕಿಮ್‌ ಕರ್ದಿಶಿಯಾ, ಜಯೀನಾ ಜಾಯಿನ್, ಮಿರಾಲ್‌ ಗ್ರೀಸ್‌ಲೆಸ್‌, ರೊಮ್ಯಾರಿಯಾ, ಎಲಿಸಾ ಗುಡಾವಿನಾ ಸೇರಿದಂತೆ ಹಲವರ ಜತೆ ರೊನಾಲ್ಡೋ ಹೆಸರು ತಳುಕು ಹಾಕಿ ಕೊಂಡಿತ್ತು. ಸದ್ಯ ಐದಾರು ವರ್ಷಗಳಿಂದ ಜಾರ್ಟಿನಾ ಜತೆ ರೊನಾಲ್ಡೋ ಡೇಟಿಂಗ್ ನಡೆಸುತ್ತಿದ್ದಾರೆ.

99

ಸದ್ಯ ಜಾರ್ಜಿನಾ, ರೊನಾಲ್ಡೋ ಅವರ ಎಲ್ಲಾ ಮಕ್ಕಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾರೆ. ಇದನ್ನು ರೊನಾಲ್ಡೋ ಕೂಡಾ ಒಂದು ಮಾಧ್ಯಮ ಸಂದರ್ಶನದಲ್ಲಿ ತಿಳಿಸಿದ್ದರು

Read more Photos on
click me!

Recommended Stories