ಫುಟ್ಬಾಲ್ ಮಾಂತ್ರಿಕ ಕ್ರಿಸ್ಟಿಯಾನೋ ರೊನಾಲ್ಡೊ (Cristiano Ronaldo) ಹೆಸರು ಯಾರಿಗೆ ಗೊತ್ತಿಲ್ಲ. ಕ್ರಿಸ್ಟಿಯಾನೋ ರೊನಾಲ್ಡೊ ಮೈದಾನದಲ್ಲಿ ತನ್ನ ಆಟಕ್ಕೆ ಮಾತ್ರ ಪ್ರಸಿದ್ಧವಾಗಿಲ್ಲ ಅವರ ಲೈಫ್‌ಸ್ಟೈಲ್ ಕೂಡ ಅಷ್ಟೇ ಫೇಮಸ್. ಐಷರಾಮಿ ಜೀವನ ಶೈಲಿಯನ್ನು ಹೊಂದಿರುವ ಈ ಆಟಗಾರರ ಫೋಟೋವೊಂದು ವೈರಲ್ ಆಗಿದೆ. ಇದರಲ್ಲಿ ಅವರ ಗೆಳತಿ ಜೊತೆ ತಮ್ಮ ಖಾಸಗಿ ವಿಹಾರ ನೌಕೆಯಲ್ಲಿ ರಿಲ್ಯಾಕ್ಸ್ ಮಾಡುತ್ತಿದ್ದಾರೆ ಕ್ರಿಸ್ಟಿಯಾನೋ ರೊನಾಲ್ಡೊ.
ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಅವರ ಗರ್ಲ್‌ಫ್ರೆಂಡ್ ತಮ್ಮ 5.5ಮಿಲಿಯನ್ ಡಾಲರ್ ಮೌಲ್ಯದ ಐಷಾರಾಮಿ ವಿಹಾರ ನೌಕೆಯಲ್ಲಿ ವಿಶ್ರಾಂತಿ ಪಡೆಯಲು ಖಾಸಗಿ ಜೆಟ್‌ನಲ್ಲಿ ಮಜೋರ್ಕಾ ಹೋಗಿದ್ದಾರೆ.
27
ತನ್ನ ಕುಟುಂಬದೊಂದಿಗೆ ಮಜೋರ್ಕಾಗೆ ಹಾರಿದ ನಂತರ, ಕ್ರಿಸ್ಟಿಯಾನೋ ರೊನಾಲ್ಡೊ ಅವರು ವಿಹಾರ ನೌಕೆಯಲ್ಲಿ ಕುಳಿತು ರಿಲ್ಯಾಕ್ಸ್ ಮಾಡುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
37
ಐದು ಮಲಗುವ ಕೋಣೆಗಳು ಮತ್ತು ಆರು ಸ್ನಾನಗೃಹಗಳೊಂದಿಗೆ ರೊನೊಲ್ಡೋ ಅವರ ವಿಹಾರ ನೌಕೆಯಲ್ಲಿ ಆನಂದಿಸಲು ಸಾಕಷ್ಟು ಸ್ಥಳವನ್ನು ಸಹ ಹೊಂದಿದೆ. ಮಾರ್ಡನ್ ಅಡುಗೆ ಮನೆ, ಎರಡು ಕೋಣೆಗಳು, ಒಂದು ದೊಡ್ಡ ಕೋಣೆ, ಮತ್ತು ಭವ್ಯವಾದ ಊಟದ ಕೋಣೆ ಎಲ್ಲವೂ ಆನ್‌ಬೋರ್ಡ್‌ನಲ್ಲಿವೆ.
47
ಇದು 1,900 ಹಾರ್ಸ್ ಪವರ್ ಎರಡು ಎಂಜಿನ್‌ಗಳನ್ನು ಹೊಂದಿದ್ದು ಕಾರ್ಬನ್ ಫೈಬರ್‌ನಿಂದ ನಿರ್ಮಿಸಲ್ಪಟ್ಟಿದೆ ಹಾಗೂ ಈ ಕಸ್ಟಮೈಸ್ಡ್ ವಿಹಾರ ನೌಕೆ 93 ಟನ್ ತೂಕವಿದೆ.
57
ರೊನಾಲ್ಡೊ ಅವರು ತಮಗೆ ಇಷ್ಟವಾದ ಕಾರುಗಳನ್ನು ಖರೀದಿಸಲು ಹೆಸರುವಾಸಿ. ಆದರ ಜೊತೆಗೆ ಇವರು ಖಾಸಗಿ ಜೆಟ್ ಹಾಗೂ ವಿಹಾರ ನೌಕೆಯನ್ನು ಹೊಂದಿದ್ದಾರೆ.
67
ಪೋರ್ಚುಗೀಸ್ ಫುಟ್ಬಾಲ್ ಸಂವೇದನೆ ಮತ್ತು ಜಾಗತಿಕ ಐಕಾನ್ ಕ್ರಿಸ್ಟಿಯಾನೊ ರೊನಾಲ್ಡೊ ತನ್ನ ಅಸಾಧಾರಣ ಕೌಶಲ್ಯದಿಂದ ವಿಶ್ವಾದ್ಯಂತ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದ್ದಾರೆ.
77
ಅತ್ಯಂತ ಪ್ರಸಿದ್ಧ ಕ್ರೀಡಾ ತಾರೆಗಳಲ್ಲಿ ಒಬ್ಬರಾಗಿರುವ ರೊನಾಲ್ಡೊ ಅವರ ವಿಪರೀತ ಜನಪ್ರಿಯತೆಯು ಅವರನ್ನು ಕ್ರೀಡಾ ಇತಿಹಾಸದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಗೂ ಶ್ರೀಮಂತ ಆಟಗಾರನ್ನಾಗಿ ಮಾಡಿದೆ. .