ನಾನು 10,000 ಮಹಿಳೆಯರ ಜತೆ ಮಲಗಿದ್ದೇನೆ ಎಂದ ಈ ಫುಟ್ಬಾಲ್ ತಾರೆ..! ಯಾರು ಈ ಭೂಪ?

Published : Jul 02, 2023, 01:29 PM ISTUpdated : Jul 02, 2023, 01:33 PM IST

ಬೆಂಗಳೂರು: ಒಮ್ಮೊಮ್ಮೆ ಹಣ ಹಾಗೂ ಪ್ರಸಿದ್ದಿ ಎರಡೂ ಏಕಕಾಲದಲ್ಲಿ ಸಿಕ್ಕರೆ ಏನೆಲ್ಲಾ ಅವಘಡ ಸಂಭವಿಸಬಹುದು ಎನ್ನುವುದಕ್ಕೆ ಸಾಕ್ಷಾತ್ ಉದಾಹರಣೆ ಫ್ರೆಂಚ್ ಫುಟ್ಬಾಲಿಗ ಬೆಂಜಮಿನ್‌ ಮೆಂಡಿ. ಇದೀಗ ಅತ್ಯಾಚಾರ ಆರೋಪ ಎದುರಿಸುತ್ತಿರುವ ಮೆಂಡಿ ತಾವು 10,000 ಮಹಿಳೆಯರ ಜತೆ ಸೆಕ್ಸ್‌ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾರೆ..!

PREV
17
ನಾನು 10,000 ಮಹಿಳೆಯರ ಜತೆ ಮಲಗಿದ್ದೇನೆ ಎಂದ ಈ ಫುಟ್ಬಾಲ್ ತಾರೆ..! ಯಾರು ಈ ಭೂಪ?

ಅತ್ಯಾಚಾರ ಹಾಗೂ ಅತ್ಯಾಚಾರಕ್ಕೆ ಯತ್ನದ ಆರೋಪದಡಿ ವಿಚಾರಣೆ ಎದುರಿಸುತ್ತಿರುವ ಮ್ಯಾಂಚೆಸ್ಟರ್ ಸಿಟಿ ಕ್ಲಬ್‌ನ ಡಿಫೆಂಡರ್‌ ಬೆಂಜಮಿನ್ ಮೆಂಡಿ ಅವರನ್ನು ತಂಡದಿಂದ ಕೈಬಿಡಲಾಗಿದೆ.

27

28 ವರ್ಷದ ಫುಟ್ಬಾಲಿಗ ಬೆಂಜಮಿನ್ ಮೆಂಡಿ, 2020ರ ಅಕ್ಟೋಬರ್‌ನಲ್ಲಿ  ಇಂಗ್ಲೆಂಡ್‌ನ ಸ್ವಂತ ನಿವಾಸದಲ್ಲಿ  24 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪವಿದೆ. ಇನ್ನು 6 ವರ್ಷಗಳ ಹಿಂದೆ 29 ವರ್ಷದ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಗಂಭೀರ ಆರೋಪವೂ ಇದೆ.

37

ಈ ಎರಡು ಪ್ರಕರಣಗಳ ಕುರಿತಂತೆ ಕೋರ್ಟ್‌ನಲ್ಲಿ ಮರು ತನಿಖೆ ಏರ್ಪಟ್ಟಿರುವ ಬೆನ್ನಲ್ಲೇ ಬೆಂಜಮಿನ್ ಮೆಂಡಿ, ತಾನು ಇಲ್ಲಿಯವರೆಗೆ 10 ಸಾವಿರ ಹುಡುಗಿಯರ ಜತೆ ಸೆಕ್ಸ್ ಮಾಡಿದ್ದೇನೆ ಎನ್ನುವ ಅಚ್ಚರಿಯ ಸಂಗತಿಯನ್ನು ಬಾಯ್ಬಿಟ್ಟಿದ್ದಾರೆ.

47

ಚೆಷೈರ್‌ನಲ್ಲಿರುವ ಮೊಟ್ರಾಮ್‌ ಸೇಂಟ್ ಆಂಡ್ರ್ಯೂ ಹೆಸರಿನ ಮೆಂಡಿ ಬಂಗಲೆಯಲ್ಲಿ ಆಗಾಗ ಪಾರ್ಟಿ ನಡೆಯುವುದು ಸರ್ವೇ ಸಾಮಾನ್ಯ. ಹಲವು ಸ್ನೇಹಿತ-ಸ್ನೇಹಿತೆಯರು ಪಾರ್ಟಿ ಮಾಡಲು ಅವರ ಬಂಗಲೆಗೆ ಬರುತ್ತಾರೆ. ಮನೆಗೆ ಬಂದ ಇಬ್ಬರು ಮಹಿಳಾ ಗೆಸ್ಟ್‌ ಜತೆ ಮೆಂಡಿ ಅನುಚಿತವಾಗಿ ವರ್ತಿಸಿದ ಆರೋಪವಿದೆ.

57

ಈ ವಿಚಾರಣೆಯನ್ನು ಆಲಿಸಿದ ಬಳಿಕ ಪ್ರತಿಕ್ರಿಯೆ ನೀಡಿದ ಬೆಂಜಮಿನ್ ಮೆಂಡಿ, "ಸರಿ, ಅದರೆ ನನಗೆ ಇದೆಲ್ಲಾ ನೆನಪಿಲ್ಲ. ನಾನು 10,000 ಮಹಿಳೆಯರ ಜತೆ ಸೆಕ್ಸ್‌ ಮಾಡಿದ್ದೇನೆ. ಈ ಪೈಕಿ ಎಷ್ಟು ಜನರನ್ನು ನೆನಪಿಟ್ಟುಕೊಳ್ಳಲು ಸಾಧ್ಯ?. ಒಂದಂತೂ ಸತ್ಯ, ನಾನು ಯಾರೊಂದಿಗೂ ಬಲವಂತವಾಗಿ ಲೈಂಗಿಕ ಕ್ರಿಯೆ ಮಾಡಿಲ್ಲ ಎಂದು ಒಪ್ಪಿಕೊಂಡಿದ್ದಾರೆ.
 

67

2018ರಲ್ಲಿ ಫ್ರಾನ್ಸ್‌ ತಂಡವು ಫಿಫಾ ವಿಶ್ವಕಪ್ ಚಾಂಪಿಯನ್‌ ಆಗಿತ್ತು. ಬೆಂಜಮಿನ್ ಮೆಂಡಿ ಫಿಫಾ ವಿಜೇತ ತಂಡದ ಪ್ರಮುಖ ಸದಸ್ಯರಾಗಿದ್ದು, ಈ ಇಬ್ಬರು ಮಹಿಳೆಯರು ಮಾಡಿರುವ ಆರೋಪವನ್ನು ಅಲ್ಲಗಳೆದಿದ್ದಾರೆ.

77

ಕಳೆದ ಜನವರಿಯಲ್ಲಿ ನಡೆದ ಕೋರ್ಟ್‌ ವಿಚಾರಣೆಯ ವೇಳೆಯಲ್ಲಿ ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಕೋರ್ಟ್‌, ಇತರ ಮಹಿಳೆಯರ ಆರೋಪದಲ್ಲಿ ಮೆಂಡಿ ತಪ್ಪಿತಸ್ಥರಾಗಿ ಕಾಣಿಸುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದೆ.

Read more Photos on
click me!

Recommended Stories