Zodiac Signs: ಒಬ್ಬರು ವಿಪರೀತ ಖರ್ಚು ಮಾಡಿದರೆ, ಮತ್ತೊಬ್ಬರ ಸೋಮಾರಿಗಳು!

First Published | Apr 25, 2024, 6:16 PM IST

ರಾಶಿಚಕ್ರದ ಪ್ರಕಾರ ಒಂದೊಂದು ರಾಶಿ ಒಂದೊಂದು ಗುಣ ಸ್ವಭಾವವನ್ನು ಹೊಂದಿದ್ದಾರೆ. ನಿಮ್ಮ ರಾಶಿಯ ಪ್ರಕಾರ ನೀವು ಯಾವುದರಲ್ಲಿ ಬೆಸ್ಟ್ ಅನ್ನೋದನ್ನು ತಿಳಿಯೋಣ. 

ಮೇಷ : ಮೇಷ ರಾಶಿಯವರು ನೋಡಲು ತುಂಬಾನೆ ಸುಂದರವಾಗಿರುತ್ತಾರೆ. ನೀವು ಮೇಷರಾಶಿಯವರೇ, ಹಾಗಿದ್ರೆ ಖುಷಿ ಪಡಿ. ತುಂಬಾನೆ ಚೆಂದದ ವ್ಯಕ್ತಿ ನೀವು.
 

ವೃಷಭ :  ವೃಷಭ ರಾಶಿಯವರು ತುಂಬಾನೆ ಹಣ ಖರ್ಚು ಮಾಡುತ್ತಾರೆ. ಎಚ್ಚೆತ್ತುಕೊಳ್ಳೋದು ಬೆಸ್ಟ್ ಉಳಿತಾಯ ಮಾಡದೇ ಇದ್ರೆ ಸಮಸ್ಯೆ ಗ್ಯಾರಂಟಿ. 
 

Tap to resize

ಮಿಥುನ :  ಈ ರಾಶಿಯವರು ತುಂಬಾನೆ ಆರಾಮ ಜೀವಿ. ತಿನ್ನೋದು ಮಲಗೋದು (love sleeping and eating) ಅಂದ್ರೆ ಮಿಥುನ ರಾಶಿಯವರಿಗೆ ಬಲು ಇಷ್ಟ. 
 

ಕರ್ಕಾಟಕ :  ಕರ್ಕಾಟಕ ರಾಶಿಯವರು ಮನರಂಜನೆಯನ್ನು ತುಂಬಾನೆ ಇಷ್ಟಪಡುವವರು. ಇವರು ಹೆಚ್ಚಾಗಿ ಜೋಕ್ ಮಾಡುತ್ತಾ, ಸುತ್ತಲಿನವರನ್ನು ನಗಿಸುತ್ತಲಿರುತ್ತಾರೆ.
 

ಸಿಂಹ :  ಸಿಂಹ ರಾಶಿಯವರಿಗೆ ಕೋಪ ಜಾಸ್ತಿ (angry people), ಯಾರು ಏನೇ ಮಾತನಾಡಿದರೂ ಅವರ ಜೊತೆಗೆ ವಿವಾದ ಮಾಡುತ್ತಲೇ ಇರುತ್ತಾರೆ. 

ಕನ್ಯಾ :  ಕನ್ಯಾ ರಾಶಿಯವರು ತುಂಬಾನೆ ಸೋಮಾರಿಗಳು, ಯಾವ ಕೆಲಸ ಮಾಡೊದಕ್ಕೂ ಇವರ ಸೋಮಾರಿತನ ಬಿಡೋದೆ ಇಲ್ಲ. ಇದರಿಂದಾಗಿ ಮುಂದೊಂದು ದಿನ ಅವರಿಗೆ ಮುಳುವಾಗೋ ಚಾನ್ಸ್ ಇದೆ.
 

ತುಲಾ :  ತುಲಾ ರಾಶಿಯವರು ತುಂಬಾನೆ ಒಳ್ಳೆಯವರು ಇವರು ಇತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಇತರರಿಗೆ ಒಳ್ಳೆಯದಾಗಲಿ ಎಂದು ಬಯಸುತ್ತಾರೆ. 
 

ವೃಶ್ಚಿಕ :  ವೃಶ್ಚಿಕ ರಾಶಿಯವರಿಗೆ ಜೆಲಸ್ ಜಾಸ್ತಿ, ಇನ್ನೊಬ್ಬರಿಗೆ ಒಳ್ಳೆಯದಾಗುತ್ತದೆ ಅಂದ್ರೆ, ಇವರಿಗೆ ಹೊಟ್ಟೆ ಹುರಿ ಆರಂಭವಾಗುತ್ತೆ. 
 

 ಧನು :  ಮನೆಕೆಲಸ ಮಾಡಲು ಇಷ್ಟಪಡುವ ಧನು ರಾಶಿಯವರು ಹೆಚ್ಚಾಗಿ ಪಾತ್ರೆಗಳನ್ನು ತೊಳೆಯೋದನ್ನು (washing dishes ) ಇಷ್ಟಪಡ್ತಾರೆ. 

ಮಕರ :  ಮಕರ ರಾಶಿಯವರು ಮನಿ ಮೇಕಿಂಗ್ ಮನಸ್ಥಿತಿಯವರು. ಇವರು ಹಣ ಹೇಗೆ ಸಂಪಾದಿಸೋದು ಎನ್ನುವ ಬಗ್ಗೆ ತುಂಬಾನೆ ಯೋಚನೆ ಮಾಡ್ತಾರೆ. 
 

ಕುಂಭ :  ಕುಂಭ ರಾಶಿಯವರು ಅತಿಯಾಗಿ ಯೋಚನೆ ಮಾಡುತ್ತಾರೆ. ನಾನು ಹೀಗೆ ಮಾಡಿದ್ರೆ ಹೇಗಾಗಬಹುದು? ನಾಳೆ ಏನಾಗಬಹುದು? ಎನ್ನುವ ಯೋಚನೆಯಲ್ಲೇ ಇರುತ್ತಾರೆ. 
 

ಮೀನ :  ಮೀನಾ ರಾಶಿಯವರು ಒಂಥರಾ ಕುತಂತ್ರಿ ವ್ಯಕ್ತಿಗಳು ಎಂದೇ ಹೇಳಬಹುದು. ಅವರು ಹೆಚ್ಚಾಗಿ ಇನ್ನೊಬ್ಬರನ್ನು ಅವಮಾನ ಮಾಡೋದ್ರಲ್ಲಿ ನಿಪುಣರಾಗಿರ್ತಾರೆ. 
 

Latest Videos

click me!