ಪಗಡೆಯಾಟದಲ್ಲಿ ಪಾಂಡವರನ್ನು ಸೋಲಿಸಿದ ಶಕುನಿಯ ಮಾಂತ್ರಿಕ ದಾಳದ ರಹಸ್ಯವೇನು?

Published : Apr 25, 2024, 06:00 PM IST

ಶಕುನಿಯ ದಾಳದ ಬಗ್ಗೆ ಒಂದು ವರ್ಣನೆ ಇದೆ, ಅವನ ದಾಳಗಳಲ್ಲಿ ಏನೋ ಮಾಂತ್ರಿಕ ಶಕ್ತಿ ಇತ್ತು ಎನ್ನಲಾಗುತ್ತಿತ್ತು, ಈ ಕಾರಣದಿಂದಾಗಿ ದಾಳಗಳು ಶಕುನಿಯ ಮಾತನ್ನು ಮಾತ್ರ ಕೇಳುತ್ತಿದ್ದವು ಮತ್ತು ಅವನ ಮಾತುಗಳನ್ನು ಮಾತ್ರ ಅನುಸರಿಸುತ್ತಿದ್ದವು.  

PREV
15
ಪಗಡೆಯಾಟದಲ್ಲಿ ಪಾಂಡವರನ್ನು ಸೋಲಿಸಿದ ಶಕುನಿಯ ಮಾಂತ್ರಿಕ ದಾಳದ ರಹಸ್ಯವೇನು?

ಮಹಾಭಾರತಕ್ಕೆ ಸಂಬಂಧಿಸಿದ ಅನೇಕ ರಹಸ್ಯಗಳಿನ್ನೂ ಒಗಟಾಗಿ ಉಳಿದಿವೆ. ಅವುಗಳಲ್ಲಿ ಒಂದು ಶಕುನಿಯ ದಾಳಗಳ (Shakunis Dice) ರಹಸ್ಯ. ಶಕುನಿಯ ದಾಳದ ಬಗ್ಗೆ ಏನೇನೋ ಮಾಹಿತಿಗಳನ್ನು ನಾವು ಕೇಳಿದ್ದೇವೆ.  ಅವನ ದಾಳಗಳಲ್ಲಿ ಏನೋ ಮಾಂತ್ರಿಕ ಶಕ್ತಿ ಇತ್ತು, ಈ ಕಾರಣದಿಂದ ದಾಳಗಳು ಶಕುನಿ ಮಾತನ್ನು ಮಾತ್ರ ಕೇಳುತ್ತಿದ್ದವು ಮತ್ತು ಅವಳ ಮಾತುಗಳನ್ನು ಮಾತ್ರ ಅನುಸರಿಸುತ್ತಿದ್ದವು. ಶಕುನಿಯ ದಾಳಗಳ ಬಗ್ಗೆ ಸಾಕಷ್ಟು ನಿಗೂಢ ವಿಷಯಗಳನ್ನು ಹೇಳಲಾಗಿದೆ. ಅದರ ಬಗ್ಗೆ ನೀವು ತಿಳಿಯಿರಿ. 

25

ಶಕುನಿಯ ದಾಳಕ್ಕೆ ಸಂಬಂಧಿಸಿದ ರಹಸ್ಯವೇನು?
ದಂತಕಥೆಯ ಪ್ರಕಾರ, ಶಕುನಿಯ ದಾಳಗಳಲ್ಲಿ ತಾಂತ್ರಿಕ ಕಥೆಗಳು ಅಡಗಿದ್ದವು. ತನ್ನ ಸಹೋದರಿ ಗಾಂಧಾರಿ ಕುರುಡನಾದ ದೃತರಾಷ್ಟ್ರನನ್ನು (Drutarastra) ಮದುವೆಯಾಗುತ್ತಿದ್ದಾಳೆ ಎಂದು ಶಕುನಿಗೆ ತಿಳಿದಾಗ, ಶಕುನಿ ಈ ಮದುವೆಯನ್ನು ತಡೆಯಲು ಬಹಳ ಪ್ರಯತ್ನಿಸಿದನು ಆದರೆ ಈ ಮದುವೆ ನಿಲ್ಲಿಸಲು ಸಾಧ್ಯವಾಗಲಿಲ್ಲ.

35

ತನ್ನ ತಂಗಿಯ ಮದುವೆಗೆ ಆದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳಲು, ಶಕುನಿ ಹಸ್ತಿನಾಪುರಕ್ಕೆ (Hastinapura) ಬಂದು ತನ್ನ ಸೋದರಳಿಯರಿಗೆ ಅಂದರೆ ಗಾಂಧಾರಿ ಮತ್ತು ದೃತರಾಷ್ಟ್ರರ 100 ಪುತ್ರರಿಗೆ ಪಾಂಡವರ ವಿರುದ್ಧ  ವಿಷದ ಬೀಜ ಬಿತ್ತಲು ಆರಂಭಿಸಿದನು. ಶಕುನಿ ಎಷ್ಟು ವಿಷ ಹರಡಿದನು ಅಂದ್ರೆ, ಕೌರವರು ಮತ್ತು ಪಾಂಡವರು ದಾಯಾದಿಗಳಾಗಿದ್ದರೂ ಶತ್ರುಗಳಂತೆ ಜಗಳ ಮಾಡಿದರು. 
 

45

ಶಕುನಿ ತಂತ್ರ ವಿಜ್ಞಾನದಲ್ಲಿ ಪರಿಣಿತನಾಗಿದ್ದನು ಮತ್ತು ಹಾಗಾಗಿ ತನ್ನ ತಂತ್ರ ವಿದ್ಯೆಯನ್ನು ಬಳಸಿ ದಾಳಗಳನ್ನು ಮಾಡಿದನು, ಅದು ಅವನ ಮಾತು ಮತ್ತು ಅವನ ಸನ್ನೆಗಳಿಂದ ನಿಯಂತ್ರಿಸಲ್ಪಟ್ಟಿತು. ಈ ಮಾಂತ್ರಿಕ ದಾಳಗಳ ತಯಾರಿಕೆಯಲ್ಲಿ, ಕೆಟ್ಟ ಅಂಶಗಳನ್ನು ಸೇರಿಸುವ ಮೂಲಕ ಪಗಡೆಯಾಟದಲ್ಲಿ ದಾಳ ತಾನು ಹೇಳಿದಂತೆ ಬೀಳುವ ಮೂಲಕ ಮೋಸದಿಂದ ಪಾಂಡವರನ್ನು ಸೋಲಿಸಿ, ದ್ರೌಪದಿಯ ವಸ್ತ್ರಾಪಹರಣ ಮಾಡಿದರು. 
 

55

ಪಾಂಡವರು ಪಗಡೆ ಆಟವನ್ನು ಆಡಲು ಕೌರವರ ಅರಮನೆಗೆ ಬಂದಾಗ, ಅವರನ್ನು ಕೌರವರು ಸೋಲಿಸಿದರು. ಶಕುನಿ ಯಾವ ನಂಬರ್ ಹೇಳಿದರು ತಾಂತ್ರಿಕ ಶಕ್ತಿಯಿಂದ ಅದೇ ನಂಬರ್ ಬರುವಂತೆ ಮಾಡುತ್ತಾನೆ. ಇದರಿಂದಾಗಿ ಕೊನೆಗೂ ಪಾಂಡವರು ಪಗಡೆಯಲ್ಲಿ ಸೋಲುತ್ತಾರೆ. 
 

click me!

Recommended Stories