ಈ ಸಂಖ್ಯೆಗಳನ್ನು ಕೈಯಲ್ಲಿ ಬರೆಯೋದ್ರಿಂದ ಕೆಲಸದಲ್ಲಿ ಯಶಸ್ಸು ಸಿಗುತ್ತಂತೆ !!

ಸಂಖ್ಯೆಗಳು ಗ್ರಹಗಳಿಗೆ ಸಂಬಂಧಿಸಿವೆ ಮತ್ತು ಸಂಖ್ಯಾಶಾಸ್ತ್ರದಲ್ಲಿ, ಸಂಖ್ಯೆಗಳು ಪ್ರತಿ ಗ್ರಹದ ದಿಕ್ಕು ಮತ್ತು ಸ್ಥಿತಿಯನ್ನು ಬದಲಾಯಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆದ್ದರಿಂದ ಯಾವ ಅಂಶಗಳು ಉದ್ಯೋಗದಲ್ಲಿ ಪ್ರಗತಿಗೆ ದಾರಿ ತೆರೆಯುತ್ತವೆ ಎಂದು ತಿಳಿಯೋಣ.    

ಜ್ಯೋತಿಷ್ಯದಲ್ಲಿ ಅನೇಕ ರೀತಿಯ ಶಾಸ್ತ್ರಗಳಿವೆ, ಅವುಗಳಲ್ಲಿ ಒಂದು ಸಂಖ್ಯಾಶಾಸ್ತ್ರ(Numerology). ಹೆಸರೇ ಸೂಚಿಸುವಂತೆ, ಸಂಖ್ಯಾಶಾಸ್ತ್ರದಲ್ಲಿ, ಪ್ರತಿಯೊಂದು ಸಂಖ್ಯೆಯು ಎಲ್ಲಾ ಒಂಬತ್ತು ಗ್ರಹಗಳೊಂದಿಗೆ ಆಳವಾದ ಸಂಬಂಧವನ್ನು ಹೊಂದಿದೆ. ಸಂಖ್ಯೆಯ ಪ್ರಕಾರ, ಗ್ರಹಗಳ ದಿಕ್ಕು ಮತ್ತು ಸ್ಥಿತಿ ಬದಲಾಗುತ್ತೆ, ಇದರಿಂದಾಗಿ ಜೀವನದಲ್ಲಿ ಶುಭ ಮತ್ತು ಅಶುಭ ಫಲಿತಾಂಶಗಳು ಬರುತ್ತವೆ. ಸಂಖ್ಯೆಗಳ ಮೂಲಕ ಜೀವನದ ಅಡೆತಡೆಗಳನ್ನು ನಿವಾರಿಸಬಹುದು. 

ಉದ್ಯೋಗ(Career) ಬೆಳವಣಿಗೆ ಮತ್ತು ಆದಾಯದ ಬೆಳವಣಿಗೆಗೆ ದಾರಿ ತೆರೆಯುವ ಸಂಖ್ಯೆಗಳ ಬಗ್ಗೆ ತಿಳಿದುಕೊಳ್ಳೋಣ. ಇದರಿಂದ ಉದ್ಯೋಗದಲ್ಲಿ ನೀವು ಪ್ರಗತಿ ಸಾಧಿಸಬಹುದು. ಕೆಲಸಕ್ಕಾಗಿ ಇರೋ ಸಂಖ್ಯೆ ಯಾವುವು? ಬನ್ನಿ ತಿಳಿಯೋಣ: 


ಸಂಖ್ಯಾಶಾಸ್ತ್ರದ ಪ್ರಕಾರ, ಅಂಗೈಯಲ್ಲಿ ಈ ನಾಲ್ಕು ಸಂಖ್ಯೆಗಳನ್ನು ಬರೆಯಬೇಕು. ಈ ನಾಲ್ಕು ಸಂಖ್ಯೆಗಳನ್ನು ಸೀಕ್ರೆಟ್ ರಹಸ್ಯ ಕೋಡ್ ಎಂದು ಕರೆಯಲಾಗುತ್ತೆ.ಈ ಸೀಕ್ರೆಟ್ ಕೋಡ್ ಕೆಲಸಕ್ಕೆ ಸಂಬಂಧಿಸಿದೆ, ಉದಾಹರಣೆಗೆ ಕೆಲಸದಲ್ಲಿ ಬಡ್ತಿ(Promotion) ಸಿಗುತ್ತೆ. ಆ ನಾಲ್ಕು  ಸಂಖ್ಯೆಗಳು  ಅಂದ್ರೆ ಎರಡು, ಒಂದು, ಒಂಬತ್ತು, ಶೂನ್ಯ. ಅಂದರೆ, 2, 1, 9 ಮತ್ತು 0. 

ಈ ಸಂಖ್ಯೆಗಳು(Numbers) ಏನು ಹೇಳುತ್ತವೆ? 
ಶೂನ್ಯ ಸಂಖ್ಯೆಯು ಪ್ರಗತಿಯ ಶಕ್ತಿಯನ್ನು ಸೂಚಿಸುತ್ತೆ. ಅಂದರೆ, ಇದನ್ನು ಅತ್ಯಂತ ಶಕ್ತಿಯುತ ಸಂಖ್ಯೆ ಎಂದು ಕರೆಯಲಾಗುತ್ತೆ. ನೀವು ಯಾವುದೇ ಅಂಕಿಯನ್ನು ಶೂನ್ಯದೊಂದಿಗೆ ಗುಣಿಸಿದರೆ, ಫಲಿತಾಂಶವು ಶೂನ್ಯವಾಗಿರುತ್ತೆ. ಶೂನ್ಯದ ಪರಿಣಾಮವೆಂದರೆ ಶೂನ್ಯವು ಇತರ ಯಾವುದೇ ಅಂಕಿಯನ್ನು ಅದಕ್ಕೆ ಅನುಗುಣವಾಗಿ ತಿರುಗಿಸುತ್ತೆ.  
 

ಸಂಖ್ಯೆ 2 ಚಂದ್ರನಿಗೆ(Moon) ಸಂಬಂಧಿಸಿದೆ. ಅಂದರೆ, ತಮಾಷೆಯ, ಭಾವನಾತ್ಮಕ (Emotional) ಮತ್ತು ಸಂತೃಪ್ತ ಸ್ವಭಾವ (Satisfactory Feeling). ಸಂಖ್ಯೆ 2 ವ್ಯಕ್ತಿಯ ಭಾವನೆಗಳನ್ನು ನಿಯಂತ್ರಿಸುತ್ತೆ ಮತ್ತು ಚಂದ್ರನನ್ನು ಬಲಪಡಿಸುತ್ತೆ.
ಸಂಖ್ಯೆ  1 ಸೂರ್ಯನಿಗೆ ಸಂಬಂಧಿಸಿದೆ. ಚಂದ್ರನಿಗೆ (Moon) ಸೂರ್ಯನ ಬೆಂಬಲ ಬೇಕು.ಸೂರ್ಯನ ಪ್ರಭಾವವು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತೆ. ವ್ಯಕ್ತಿತ್ವವೂ ಸುಧಾರಿಸುತ್ತೆ. 
ಸಂಖ್ಯೆ 9 ವ್ಯಕ್ತಿಯ ಇಚ್ಛಾಶಕ್ತಿ ಮತ್ತು ವ್ಯಕ್ತಿಯ ಶಕ್ತಿಯನ್ನು ಸೂಚಿಸುತ್ತೆ.

ಈ ನಾಲ್ಕು ಸಂಖ್ಯೆಗಳ ಪ್ರಯೋಜನವೇನು?  
ಈ ನಾಲ್ಕು ಸಂಖ್ಯೆಗಳನ್ನು ಸೇರಿಸಿದ್ರೆ, ಅದರ ಫಲಿತಾಂಶವು ಗುರುಗ್ರಹಕ್ಕೆ ಸಂಪರ್ಕ ಹೊಂದಿದ 3 ಅಂಕಿಗಳನ್ನು ಹೊರತರುತ್ತೆ. ಗುರು ಗ್ರಹವು ಜೀವನದಲ್ಲಿ ಸಂತೋಷ(Happiness) ಮತ್ತು ಸಮೃದ್ಧಿಯ ಅಂಶವೆಂದು ಪರಿಗಣಿಸಲಾಗಿದೆ.  

ಈ ನಾಲ್ಕು ಸಂಖ್ಯೆಗಳನ್ನು ಅಂಗೈಯಲ್ಲಿ ನೀಲಿ, ಕೆಂಪು ಅಥವಾ ಹಸಿರು ಪೆನ್ನಿನಿಂದ(Pen) ಒಟ್ಟಿಗೆ ಬರೆಯಬೇಕು. 2190 ಸಂಖ್ಯೆಯನ್ನು ಒಟ್ಟಿಗೆ ಬರೆಯುವ ಮೂಲಕ, ಒಬ್ಬ ವ್ಯಕ್ತಿ ಎಲ್ಲಾ ರೀತಿಯ ಸಂತೋಷವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ..

ಈ ಸಂಖ್ಯೆಯನ್ನು ಬರೆಯೋದರಿಂದ ಉದ್ಯೋಗದಲ್ಲಿ ಪ್ರಗತಿಯ ಹಾದಿ ತೆರೆಯುತ್ತೆ ಮತ್ತು ನೀವು ಜೀವನದ ತೊಂದರೆಗಳಿಂದ ಹೊರಬರುತ್ತೀರಿ. ಈ ಸಂಖ್ಯೆಗಳನ್ನು ಅಂಗೈಯಲ್ಲಿ ಬರೆಯುವ ಮೂಲಕ  ಕೆಲಸದಲ್ಲಿನ(Work)ಅಡೆತಡೆಯನ್ನು ತೆಗೆದುಹಾಕಬಹುದು ಮತ್ತು ಪ್ರಗತಿಯನ್ನು ಪಡೆಯಬಹುದು ಎಂದು ಸಂಖ್ಯಾಶಾಸ್ತ್ರ ತಿಳಿಸುತ್ತೆ. 

Latest Videos

click me!