ನಿಮ್ಮ ಅಂಗೈಯಲ್ಲಿರೋ ಈ ಚಿಹ್ನೆ ನೀವೆಷ್ಟು ಲಕ್ಕಿ ಅಂತ ಹೇಳುತ್ತೆ!

First Published | Jul 11, 2023, 6:03 PM IST

ನಿಮ್ಮ ಅಂಗೈಯಲ್ಲಿ ನೀವು ನೋಡಬೇಕಾದ ಕೆಲವು ಚಿಹ್ನೆಗಳಿವೆ ಯಾಕಂದ್ರೆ ಅವು ಖಂಡಿತವಾಗಿಯೂ ನಿಮಗೆ ಅದೃಷ್ಟ ತರುತ್ತವೆ, ವಿಶೇಷವಾಗಿ ನೀವು ಹಸ್ತಸಾಮುದ್ರಿಕ ಶಾಸ್ತ್ರ ನಂಬೋದಾದ್ರೆ. ಅವುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.    

ನಿಮ್ಮ ಕೈಗಳಲ್ಲಿ ಕೆಲವು ರಚನೆಯ ಅರ್ಥವೇನು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ನಿಮ್ಮ ಅಂಗೈಯಲ್ಲಿ ಕೆಲವು ಚಿಹ್ನೆಗಳು ಇದ್ದರೆ ಅದು ನಿಮಗೆ ಅದೃಷ್ಟವಾಗಬಹುದು? ಹಸ್ತಸಾಮುದ್ರಿಕ ಶಾಸ್ತ್ರದ(Palmistry)  ಪ್ರಕಾರ ಅಂಗೈಯಲ್ಲಿ ಐದು ಅದೃಷ್ಟದ ಚಿಹ್ನೆಗಳಿವೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಈ ಚಿಹ್ನೆಗಳು ವ್ಯಕ್ತಿಯ ಅಂಗೈಯಲ್ಲಿ ಕಾಣಿಸಿಕೊಂಡಾಗ, ನೆಚ್ಚಿನ ರಿಸಲ್ಟ್ಸ್ ಮತ್ತು ಸಂದರ್ಭಗಳು ಉಂಟಾಗುತ್ತೆ ಎಂದರ್ಥ. ಅಂತಹ ಕೆಲವು ಚಿಹ್ನೆಗಳ ಬಗ್ಗೆ ತಿಳಿಯೋಣ, ಅದು ನಿಮ್ಮ ಅದೃಷ್ಟ ಬದಲಾಯಿಸಬಹುದು.   

ಕಮಲ ಚಿಹ್ನೆ
ಅಂಗೈಯಲ್ಲಿ ಕಮಲವನ್ನು ಗುರುತಿಸಲು ಸಾಧ್ಯವಾದರೆ, ನೀವು ಸಾಕಷ್ಟು ಹಣವನ್ನು (Money) ಪಡೆಯುತ್ತೀರಿ ಎಂದರ್ಥ. ಹಸ್ತಸಾಮುದ್ರಿಕಶಾಸ್ತ್ರದ ಪ್ರಕಾರ, ಕಮಲ ಚಿಹ್ನೆಯು ವ್ಯಕ್ತಿಯ ಸಂಪತ್ತನ್ನು ಹೆಚ್ಚಿಸುತ್ತೆ. ಕೈಯಲ್ಲಿರುವ ಕಮಲ ಚಿಹ್ನೆಯು ಕನಿಷ್ಠ 3 ಎಲೆಗಳನ್ನು ಹೊಂದಿರಬೇಕು. 5 ಎಲೆಗಳನ್ನು ಹೊಂದಿರುವ ಕಮಲವು ಅತ್ಯಂತ ಅದೃಷ್ಟಶಾಲಿ ಆದರೆ ಎಲ್ಲಕ್ಕಿಂತ ಅಪರೂಪವಾಗಿದೆ.

Tap to resize

ಕೈಯಲ್ಲಿರುವ ಕಮಲದ ಚಿಹ್ನೆಯು ಬುಧ ಗ್ರಹದ ಮೇಲೆ ಕಂಡುಬಂದಾಗ, ಕೆಲಸ ಮತ್ತು ಕೌಶಲ್ಯಗಳಲ್ಲಿನ ಸೃಜನಶೀಲತೆಯ ಮೂಲಕ ವ್ಯವಹಾರದಿಂದ ಸಂಪತ್ತನ್ನು(Wealth) ಪಡೆಯುತ್ತೀರಿ. ಚಂದ್ರನ ಮೇಲೆ ಕಮಲದ ಚಿಹ್ನೆ ಕಂಡುಬಂದರೆ ವ್ಯಕ್ತಿಯು ಹೆಚ್ಚಿನ ಖ್ಯಾತಿಯನ್ನು ಪಡೆಯುತ್ತಾನೆ.

ಸೂರ್ಯನ ಮೇಲೆ ಕಮಲದ ಚಿಹ್ನೆ ಕಂಡುಬಂದರೆ, ಅದು ವ್ಯಕ್ತಿಯ ಯಶಸ್ಸಿಗೆ ಕಾರಣವಾಗುತ್ತೆ. ಅವರು ತಮ್ಮ ಉದ್ಯೋಗ (Job) ಅಥವಾ ವ್ಯವಹಾರದಲ್ಲಿ ಅತ್ಯುನ್ನತ ಸ್ಥಾನವನ್ನು ತಲುಪಬಹುದು, ತಮ್ಮ ಕ್ಷೇತ್ರದಲ್ಲಿ ಮಹಾನ್ ನಾಯಕರಾಗಬಹುದು ಮತ್ತು ಅವರ ಸಂಸ್ಥೆಯಲ್ಲಿ ಅತ್ಯುನ್ನತ ಅಧಿಕಾರವನ್ನು ಹೊಂದಬಹುದು. 
 

ತ್ರಿಶೂಲ ಚಿಹ್ನೆ
ತ್ರಿಶೂಲ ಚಿಹ್ನೆಯು ವ್ಯಕ್ತಿಯ ಆರೋಗ್ಯ(Health) ಮತ್ತು ಯೋಗಕ್ಷೇಮವನ್ನು ಒಳಗಿನಿಂದ ಹೆಚ್ಚಿಸುತ್ತೆ, ಕೆಲಸ ಮತ್ತು ಆರೋಗ್ಯದಲ್ಲಿ ಸಾಮರ್ಥ್ಯವನ್ನು ಹೆಚ್ಚಿಸುತ್ತೆ. ಇದೆಲ್ಲವೂ ಆಧ್ಯಾತ್ಮಿಕತೆ ಮತ್ತು ಆಂತರಿಕ ಸಂತೋಷದ ಪ್ರಜ್ಞೆಯನ್ನು ತರುತ್ತೆ.  ಇದು ಗುರುಗ್ರಹದ ಮೇಲಿದ್ದರೆ, ಅದು ಗರಿಷ್ಠ ರಿಸಲ್ಟ್ ಕೊಡುತ್ತೆ.  
 

ಮೀನಿನ ಚಿಹ್ನೆ
ಮೀನಿನ ಚಿಹ್ನೆ ದೇವರ(God) ಆಶೀರ್ವಾದವನ್ನು ಸೂಚಿಸುತ್ತೆ. ಇದು ವಿಭಿನ್ನ ಆಕಾರಗಳಲ್ಲಿ ಕಂಡುಬರಬಹುದು, ಆದರೆ ಒಂದು ನಿರ್ದಿಷ್ಟ ಆಕಾರದಲ್ಲಿ, ನಿರ್ದಿಷ್ಟ ಸ್ಥಳದಲ್ಲಿ ಕಂಡುಬರೋದು ಅಪರೂಪ ಮತ್ತು ಹೆಚ್ಚು ಪಾವಿತ್ರ್ಯತೆಯನ್ನು ಹೊಂದಿದೆ.

ನಕ್ಷತ್ರ ಚಿಹ್ನೆ
ನಕ್ಷತ್ರ ಚಿಹ್ನೆಯನ್ನು ಅನೇಕ ಸ್ಥಳಗಳಲ್ಲಿ ಗಮನಿಸಬಹುದು, ಆದರೆ ಕೆಲವು ಸ್ಥಳದಲ್ಲಿ, ಇವು ನಕಾರಾತ್ಮಕ ಪರಿಣಾಮಗಳನ್ನು(Negative effect) ಬೀರಬಹುದು. ಈ ಚಿಹ್ನೆಯು ಸೂರ್ಯನ ಮೇಲೆ ಕಂಡುಬಂದರೆ, ಅದನ್ನು ಅಪರೂಪವೆಂದು ಹೇಳಲಾಗುತ್ತೆ. 

ಕನಿಷ್ಠ 5 ರೇಖೆಗಳನ್ನು ಹೊಂದಿರುವ ನಕ್ಷತ್ರ ಚಿಹ್ನೆಯು ಅಪರೂಪ. ನಕ್ಷತ್ರ ಚಿಹ್ನೆಯನ್ನು ಹೊಂದಿರುವ ಜನರು ಅನಿರೀಕ್ಷಿತ ಹೆಸರು, ಖ್ಯಾತಿ, ಯಶಸ್ಸು(Success) ಮತ್ತು ಸಂಪತ್ತನ್ನು ಪಡೆಯುತ್ತಾರೆ. ಈ ವ್ಯಕ್ತಿಗಳು ಕಲಾತ್ಮಕ ಗುಣಗಳನ್ನು ಹೊಂದಿರುತ್ತಾರೆ ಮತ್ತು ಕಷ್ಟಪಟ್ಟು ಕೆಲಸ ಮಾಡುತ್ತಾರೆ, ಆದರೆ ಫಲಿತಾಂಶ ಸ್ವಲ್ಪ ನಿಧಾನವಾಗಿರಬಹುದು
 

ಧ್ವಜ ಚಿಹ್ನೆ
ಧ್ವಜ ಚಿಹ್ನೆ ಹೊಂದಿರುವ ವ್ಯಕ್ತಿಯು ಯಾವಾಗ್ಲೂ ಎಲ್ಲಾ ವಿಷಯಗಳಲ್ಲಿ ವಿಜೇತನಾಗಿರುತ್ತಾನೆ ಮತ್ತು ಹೆಚ್ಚು ಜ್ಞಾನ(Knowledge) ಹೊಂದಿರುವಂತವನಾಗಿರುತ್ತಾನೆ.  ಗುರು ಪರ್ವತದ ಮೇಲೆ ಈ ಚಿಹ್ನೆ ಕಂಡುಬಂದರೆ, ವಿಜ್ಞಾನ, ವೇದಗಳು ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತೀರಿ ಎಂದರ್ಥ.  ಧ್ವಜ ಚಿಹ್ನೆಯು ಶನಿ ಪರ್ವತದ ಮೇಲೆ ಇದ್ದರೆ, ಸಭ್ಯ, ಆಧ್ಯಾತ್ಮಿಕ, ದೀರ್ಘ ದೃಷ್ಟಿಯನ್ನು ಹೊಂದಿದ್ದಾರೆ ಎಂದರ್ಥ ಮತ್ತು ಅವರ ಆಸಕ್ತಿಯ ಕ್ಷೇತ್ರಗಳಲ್ಲಿ ಅವರು ನಂಬರ್ ಒನ್ ಆಗಿರುತ್ತಾರೆ ಎಂದರ್ಥ.  

ಸ್ವಸ್ತಿಕ್ ಚಿಹ್ನೆ
ಸ್ವಸ್ತಿಕ ಚಿಹ್ನೆಯನ್ನು ಯಾವುದೇ ಸ್ಥಳ ಮತ್ತು ಯಾವುದೇ ಕೋನದಲ್ಲಿ ಕಾಣಬಹುದು. ಸ್ವಸ್ತಿಕ ಚಿಹ್ನೆಯನ್ನು ಹೊಂದಿರುವ ವ್ಯಕ್ತಿಯು ರಾಜ-ಯೋಗವನ್ನು(Rajyog) ಆನಂದಿಸುತ್ತಾನೆ. ಈ ವ್ಯಕ್ತಿಯು ಯಾವುದೇ ಕ್ಷೇತ್ರದಲ್ಲಿ ಅತ್ಯಂತ ತ್ವರಿತವಾಗಿ ಯಶಸ್ಸನ್ನು ಕಾಣುತ್ತಾನೆ.
 

Latest Videos

click me!