ಲಕ್ಷ್ಮಿಯನ್ನು ಓಲೈಸಿಕೊಳ್ಳಲು ಶುಕ್ರವಾರ ಹೀಗ್ ಪೂಜೆ ಮಾಡಿರಿ

First Published | Feb 19, 2021, 11:42 AM IST

ಶುಕ್ರವಾರ ಲಕ್ಷ್ಮಿಯನ್ನು ತಾಯಿಯ ರೂಪದಲ್ಲಿ ಪೂಜಿಸಲಾಗುತ್ತದೆ. ತಾಯಿ ಲಕ್ಷ್ಮಿ ಸಂತೋಷವಾಗಿದ್ದರೆ, ಆ ವ್ಯಕ್ತಿಗೆ ಹಣದ ಕೊರತೆ ಇರುವುದಿಲ್ಲ ಎಂದು ಗುರುತಿಸಲಾಗಿದೆ. ತಾಯಿ ಲಕ್ಷ್ಮಿಯನ್ನು ಒಲಿಸಿಕೊಂಡರೆ ಸಂಪತ್ತು ಮತ್ತು ಸಮೃದ್ಧಿಯ ಎಲ್ಲ ಮಾರ್ಗಗಳು ತೆರೆದುಕೊಳ್ಳುತ್ತವೆ. ಶುಕ್ರವಾರ ತಾಯಿ ಲಕ್ಷ್ಮಿಯನ್ನು ಒಲಿಸಲು ಕೆಲವು ಪೂಜಾ ಕ್ರಮಗಳನ್ನು ತಿಳಿಸಲಾಗಿದೆ. ಅವುಗಳನ್ನು ಅನುಸರಿಸಿದರೆ ಭಾಗ್ಯಲಕ್ಷ್ಮಿ ಒಲಿದು ಬರುತ್ತಾಳೆ. 

ಶುಕ್ರವಾರ ತಾಯಿ ಲಕ್ಷ್ಮಿ ಈ ರೀತಿ ಖುಷಿ ಪಡುತ್ತಾಳೆ.ಮನೆಯಲ್ಲಿ ಮಹಾಲಕ್ಷ್ಮಿ ಶಂಖವನ್ನು ನಿರಂತರವಾಗಿ ಪೂಜಿಸಿದರೆ ಲಕ್ಷ್ಮಿ ದೇವಿಯು ಸಂತೋಷವಾಗಿ ಇರುತ್ತಾಳೆ. ಇದರಿಂದ ಸಂಪತ್ತು ಮತ್ತು ಸಮೃದ್ಧಿಗೆ ದಾರಿ ತೆರೆದುಕೊಳ್ಳುತ್ತದೆ.
ಹಳದಿ ಕವಡೆಯನ್ನು ಮನೆಯಲ್ಲಿ ಇಟ್ಟುಕೊಂಡರೆ ತಾಯಿ ಲಕ್ಷ್ಮಿ ಸಂತೋಷವಾಗಿ ಧನವೃದ್ಧಿಯಾಗುತ್ತದೆ.
Tap to resize

ಲಕ್ಷ್ಮೀ ದೇವಿಯ ಶುಕ್ರವಾರದಂದು ಮಾತಾ ಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ಕಮಲದ ಹೂವನ್ನು ಅರ್ಪಿಸುವುದು ತುಂಬಾ ಉತ್ತಮ.
ಲಕ್ಷ್ಮೀ ಮಾತೆಗೆ ಕೇಸರಿ ಭಾತ್ ಅಥವಾ ಹಳದಿ ಮತ್ತು ಬಿಳಿ ಸಿಹಿ ತಿಂಡಿಗಳನ್ನು ಸಹ ನೀಡಲಾಗುತ್ತದೆ. ಇದರಿಂದ ಲಕ್ಷ್ಮಿ ದೇವಿ ಸಂತೋಷವಾಗಿರುತ್ತಾಳೆ.
ಲಕ್ಷ್ಮಿ ದೇವಿಯ ತ್ರಿಫಲಾ ತುಂಬಾ ಇಷ್ಟ, ತ್ರಿಫಲವನ್ನು ಅರ್ಪಿಸುವುದು ಶುಭ ಎನ್ನಲಾಗುತ್ತದೆ. ಇದರ ಜೊತೆಗೆ ತಾಯಿಗೆ ಖೀರ್, ಸಿಹಿ ತಿಂಡಿ, ದಾಳಿಂಬೆ, ಪಾನ್ ಮತ್ತು ಪ್ರಸಾದ ಮಾಡಿ ಸಹ ಭೋಜನವನ್ನು ನೀಡಲಾಗುತ್ತದೆ. ಇದರಿಂದ ತಾಯಿ ತುಂಬಾ ಸಂತೋಷವಾಗಿರುತ್ತಾರೆ.
ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ತರುವುದಕ್ಕಾಗಿ ಬಾಳೆಗಿಡವನ್ನು ಪೂಜಿಸಲಾಗುತ್ತದೆ. ಇದರಿಂದ ನಿತ್ಯ ತಾಯಿ ಲಕ್ಷ್ಮಿಯ ಕೃಪೆ ಭಕ್ತರ ಮೇಲೆ ಇರುತ್ತದೆ.
ತುಳಸಿ ಮಾತಾ ಮತ್ತು ಸಾಲಿಗ್ರಾಮವನ್ನು ನಿರಂತರವಾಗಿ ಪೂಜಿಸಿದರೆ ತಾಯಿ ಲಕ್ಷ್ಮಿ ಸಂತುಷ್ಟಳಾಗುತ್ತಾಳೆ.
ಮನೆಯ ಬಾಗಿಲಲ್ಲಿ ರಂಗೋಲಿಯನ್ನು ಹಾಕುವುದರಿಂದ ತಾಯಿ ಲಕ್ಷ್ಮಿಯ ಅನುಗ್ರಹವೂ ಇರುತ್ತದೆ. ಜೊತೆಗೆ ಲಕ್ಷ್ಮಿ ದೇವಿಯ ಪೂಜೆ ನಿರಂತರ ಮಾಡುತ್ತಿರಬೇಕು.
ಮನೆ ಸ್ವಚ್ಛವಾಗಿದ್ದರೆ, ಮನೆಯು ಸುಖ ಮತ್ತು ಸಮೃದ್ಧಿಯಿಂದ ಕೂಡಿರುತ್ತದೆ. ಇದರಿಂದ ಬೆಳವಣಿಗೆಯ ಎಲ್ಲಾ ಮಾರ್ಗಗಳನ್ನು ತೆರೆಯಲಾಗುತ್ತದೆ. ಗುರುವಾರ ಮತ್ತು ಶುಕ್ರವಾರ ಹಳದಿ ಬಣ್ಣದ ನಿಲುವಂಗಿಗಳನ್ನು ಧರಿಸುತ್ತಿದ್ದರೆ, ಲಕ್ಷ್ಮಿ ಮಾತಾ ಸಂತೋಷವಾಗಿರುತ್ತಾಳೆ.
ಮನೆಯಲ್ಲಿ ಯಾವುದೇ ಮಹಿಳೆಗೆ ಅವಮಾನ ಮಾಡಬಾರದು. ಅವರ ಎಲ್ಲಾ ಆಸೆಗಳು ಈಡೇರಬೇಕು. ಇದರಿಂದ ಲಕ್ಷ್ಮೀ ಮಾತಾ ಯಾವಾಗಲೂ ಸಂತೋಷವಾಗಿರುತ್ತಾರೆ.

Latest Videos

click me!