ಉತ್ತಮ ಜೀವನಕ್ಕಾಗಿ ಕೃಷ್ಣ ಪರಮಾತ್ಮನ ಈ ಮಾತು ನೆನಪಿನಲ್ಲಿರಲಿ
First Published | Feb 10, 2021, 6:51 PM ISTಆಧುನಿಕ ಜೀವನದಲ್ಲಿ ಯಶಸ್ಸು ಎಂದರೆ ಹಣ ಮತ್ತು ಸೌಕರ್ಯಗಳು. ಹೆಚ್ಚು ಹಣ ಗಳಿಸಿಕೊಂಡಷ್ಟೂ, ಜಗತ್ತು ನಿಮ್ಮನ್ನು ಹೆಚ್ಚು ಹೆಚ್ಚು ಯಶಸ್ವಿ ಮನುಷ್ಯ ಎಂದು ಕರೆಯುತ್ತದೆ, ಇದೇ ರೀತಿ ಹಣ ಗಳಿಸುವ ಓಟದಲ್ಲಿ ಯಾರೂ ಭೌತಿಕ ಜಗತ್ತಿನ ಸುಖದ ಕಾರಣದಿಂದ ಎಷ್ಟು ಪಾಪಗಳನ್ನು ಮಾಡಿದ್ದಾರೆ ಎಂದು ಯೋಚಿಸುವುದಿಲ್ಲ. ಬದಲಾಗಿ ಯಶಸ್ಸು ಸಿಕ್ಕಿದೆ, ಹಣ ಸಿಕ್ಕಿದೆ ಎಂದು ತಮ್ಮ ಪಾಪಗಳನ್ನು ಹಣದಲ್ಲೇ ಮುಚ್ಚಿ ಹಾಕುತ್ತಾರೆ. ಆದರೆ, ಅದೇ ನೈಜ ಸುಖವಲ್ಲ ಎನ್ನುವುದು ಒಂದಲ್ಲೊಂದು ದಿನ ಅರ್ಥವಾಗುತ್ತದೆ.