ಪ್ರೀತಿ(Love) ಒಂದು ಮಾಂತ್ರಿಕ ಭಾವನೆ ಅನ್ನೋದು ನಿಜಾ. ಪುರುಷರು ಮತ್ತು ಮಹಿಳೆಯರು ಇಬ್ಬರೂ ತಮ್ಮ ಸಂಬಂಧದಲ್ಲಿ ಪ್ರೀತಿಯನ್ನು ಕಾಪಾಡಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ಮಹಿಳೆಯರು ತಮ್ಮ ಪ್ರೇಮ ಸಂಬಂಧಗಳಿಗೆ ತುಂಬಾ ಬದ್ಧರಾಗಿರುತ್ತಾರೆ. ತನ್ನ ಸಂಬಂಧದ ಮಧ್ಯದಲ್ಲಿ ಬರುವ ಎಲ್ಲಾ ತೊಂದರೆಗಳನ್ನು ನಿವಾರಿಸಲು ಅವರು ಏನು ಬೇಕಾದರೂ ಮಾಡಲು ಸಿದ್ಧಳಿರುತ್ತಾಳೆ. ಜ್ಯೋತಿಷ್ಯದ ಪ್ರಕಾರ, ರಾಶಿಚಕ್ರದಲ್ಲಿ ಒಟ್ಟು ಹನ್ನೆರಡು ರಾಶಿಗಳನ್ನು ಹೇಳಲಾಗಿದೆ. ಇಲ್ಲಿ ಅಂತಹ ಕೆಲವು ರಾಶಿಗಳ ಬಗ್ಗೆ ಹೇಳಲಾಗಿದೆ. ಅವರು ತಮ್ಮ ಸಂಗಾತಿಗೆ ತುಂಬಾ ನಿಷ್ಠರಾಗಿರುತ್ತಾರೆ. ನೀವು ಅವರಲ್ಲಿ ಒಬ್ಬರಾಗಿದ್ದೀರಾ? ನೋಡೋಣ…
ವೃಷಭ ರಾಶಿಯ(Taurus) ಮಹಿಳೆಯರು ತಮ್ಮ ಸಂಬಂಧಕ್ಕೆ ಅತ್ಯಂತ ನಿಷ್ಠರಾಗಿರುತ್ತಾರೆ. ವೃಷಭ ರಾಶಿಯ ಮಹಿಳೆಯರು ತಮ್ಮ ಪ್ರೀತಿಯನ್ನು ಸಂಪೂರ್ಣ ಸಂತೋಷ ಮತ್ತು ಪ್ರಾಮಾಣಿಕತೆಯಿಂದ ಪೂರೈಸೋದನ್ನು ನಂಬುತ್ತಾರೆ. ಈ ರಾಶಿಯ ಮಹಿಳೆಯರು ಎಂದಿಗೂ ತಮ್ಮ ಸಂಗಾತಿಗೆ ಸ್ವಲ್ಪ ನೋವನ್ನುಂಟು ಮಾಡುವ ಯಾವುದೇ ಕೆಲಸವನ್ನು ಮಾಡೋದಿಲ್ಲ.
ಕರ್ಕಾಟಕ ರಾಶಿಯ ಮಹಿಳೆಯರು(Women) ತಮ್ಮ ಸಂಬಂಧಕ್ಕೆ ಅತ್ಯಂತ ಬದ್ಧರಾಗಿರುತ್ತಾರೆ. ಅವರು ತನ್ನ ಸಂಬಂಧವನ್ನು ಉಳಿಸಿಕೊಳ್ಳಲು ಸಾಕಷ್ಟು ಹೆಣಗಾಡುತ್ತಾಳೆ. ಕರ್ಕಾಟಕ ರಾಶಿಯ ಮಹಿಳೆಯರು ತಮ್ಮ ಸಂಗಾತಿಯ ಹೃದಯವನ್ನು ಗೆಲ್ಲಲು ಏನು ಬೇಕಾದರೂ ಮಾಡಬಹುದು. ಅಷ್ಟೇ ಅಲ್ಲ ಅವರು ತನ್ನ ಸಂಗಾತಿಯ ಸಂತೋಷಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುವವರೂ ಆಗಿರುತ್ತಾರೆ.
ಸಿಂಹ ರಾಶಿಯ(Leo) ಮಹಿಳೆಯರು ತಮ್ಮ ಸಂಗಾತಿಯನ್ನು ತುಂಬಾ ರಕ್ಷಿಸುತ್ತಾರೆ. ಇವರು ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲೂ ತಮ್ಮ ಸಂಗಾತಿಯನ್ನು ಬಿಡೋದಿಲ್ಲ. ಅಲ್ಲದೇ ತಮ್ಮ ಸಂಗಾತಿಯನ್ನು ಕಳೆದುಕೊಳ್ಳುವ ನೋವನ್ನು ಸಹಿಸಲು ಸಹ ಅವರು ಅಸಮರ್ಥರಾಗುತ್ತಾರೆ ಮತ್ತು ಕೆಲವೊಮ್ಮೆ ತಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಳ್ಳುತ್ತಾರೆ.
ವೃಶ್ಚಿಕ ರಾಶಿಯ ಮಹಿಳೆಯರು ತಮ್ಮ ಭಾವನಾತ್ಮಕ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಇವರು ತಮ್ಮ ಸಂಗಾತಿಯನ್ನು(Partner) ತುಂಬಾ ಪ್ರೀತಿಸುತ್ತಾರೆ. ಅಲ್ಲದೇ ಸಂಪೂರ್ಣವಾಗಿ ತನ್ನ ಸಂಗಾತಿಗೆ ಸಮರ್ಪಿತಳಾಗಿರುತ್ತಾರೆ. ಇವರು ಸಂಗಾತಿಯನ್ನು ಸಂತೋಷಪಡಿಸಲು ಏನು ಬೇಕಾದರೂ ಮಾಡುವ ಗುಣ ಹೊಂದಿರುತ್ತಾರೆ.
ಮಕರ ರಾಶಿಯವರು(Capricorn) ತಮ್ಮ ನೈತಿಕ ಮೌಲ್ಯಗಳಿಗೆ ಹೆಸರುವಾಸಿ. ಈ ರಾಶಿಯ ಮಹಿಳೆಯರು ತಮ್ಮ ಸಂಗಾತಿಯನ್ನು ಒಂದು ಕ್ಷಣವೂ ಏಕಾಂಗಿಯಾಗಿರಲು ಬಿಡೋದಿಲ್ಲ. ಅವಳು ತನ್ನ ಸಂಗಾತಿಯ ನೆಚ್ಚಿನ ವಸ್ತುಗಳಿಂದ ಅಲಂಕರಿಸಲು ಇಷ್ಟಪಡ್ತಾರೆ. ಒಟ್ಟಾಲ್ಲಿ ಅವರು ಸಂಗಾತಿಯನ್ನು ಸಂತೋಷವಾಗಿಡಲು ಎಲ್ಲವನ್ನೂ ಮಾಡುತ್ತಾರೆ.
ಮೇಷ, ಮಿಥುನ, ಕನ್ಯಾ, ತುಲಾ, ಧನು, ಕುಂಭ(Aquarius) ಮತ್ತು ಮೀನ ರಾಶಿಯವರು ಈ ರಾಶಿಗಳ ಜನರಿಗಿಂತ ಸ್ವಲ್ಪ ಕಡಿಮೆ ನಿಷ್ಠರಾಗಿರುತ್ತಾರೆ. ಅವರು ತನ್ನ ಸಂಬಂಧಕ್ಕಿಂತ ತನ್ನ ಮೇಲೆ ಹೆಚ್ಚು ಕೇಂದ್ರೀಕರಿಸುತ್ತಾರೆ ಮತ್ತು ಈ ಕಾರಣದಿಂದಾಗಿ, ಇವರು ಆಗಾಗ್ಗೆ ತನ್ನ ಸಂಗಾತಿಯ ಅಗತ್ಯಗಳನ್ನು ನಿರ್ಲಕ್ಷಿಸುತ್ತಾರೆ.