Shani Asta 2023: ಮೇಷದಿಂದ ಕುಂಭದವರೆಗೆ 5 ರಾಶಿಗಳಿಗೆ ಶನಿ ಕಾಟ ಶುರು

First Published | Jan 29, 2023, 12:57 PM IST

ಜನವರಿ 31ಕ್ಕೆ ಶನಿ ಗ್ರಹ ಅಸ್ತವಾಗಲಿದೆ. ಹಾಗಾಗಿ, ಈ 5 ರಾಶಿಯ ಜನರು ಜಾಗರೂಕರಾಗಿರಬೇಕು. ಏಕೆಂದರೆ, ಬಿಕ್ಕಟ್ಟಿನ ಮೋಡಗಳು ಅವರ ಮೇಲೆ ಸುಳಿದಾಡಬಹುದು. ಆ 5 ರಾಶಿಗಳು ಯಾವುವು ಎಂದು ತಿಳಿಯೋಣ..

ಶನಿಯು ಪ್ರಸ್ತುತ ತನ್ನದೇ ಆದ ಕುಂಭ ರಾಶಿಯಲ್ಲಿದ್ದಾನೆ. ಜನವರಿ 17ರ ಸಂಜೆ 6 ಗಂಟೆ 4 ನಿಮಿಷಕ್ಕೆ ಕುಂಭ ರಾಶಿಗೆ ಬಂದಿದ್ದಾನೆ. ಇನ್ನು ಶನಿಯು ಜನವರಿ 31ರಂದು ಮುಂಜಾನೆ 02.46ಕ್ಕೆ ಕುಂಭ ರಾಶಿಯಲ್ಲಿ ಅಸ್ತಮಿಸಲಿದ್ದು, ಶನಿಯು 33 ದಿನಗಳ ಕಾಲ ಕುಂಭ ರಾಶಿಯಲ್ಲಿಯೇ ಅಸ್ತಮಿಸಿದ ಸ್ಥಿತಿಯಲ್ಲಿಯೇ ಇರುತ್ತಾನೆ. ಅದರ ನಂತರ ಮಾರ್ಚ್ 05ರಂದು ರಾತ್ರಿ 08.46ಕ್ಕೆ ಶನಿ ಮತ್ತೆ ಉದಯವಾಗಲಿದೆ.

ಅಂಥ ಪರಿಸ್ಥಿತಿಯಲ್ಲಿ, 12 ರಾಶಿಗಳಲ್ಲಿ ಈ 5 ರಾಶಿಗಳ ಜನರು ಶನಿಯ ಅಸ್ತದ ಕಾರಣದಿಂದ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಏಕೆಂದರೆ ಶನಿಯ ಅಸ್ತ(Shani asta 2023)ವು ಮೇಷ, ಕರ್ಕ, ಸಿಂಹ, ವೃಶ್ಚಿಕ ಮತ್ತು ಕುಂಭ ರಾಶಿಯವರ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಅದೇನೆಂದು ತಿಳಿಯೋಣ.

Tap to resize

ಮೇಷ ರಾಶಿ(Aries)
ಮೇಷ ರಾಶಿಯ ಜನರು ಶನಿಯ ಅಸ್ತದಿಂದಾಗಿ ವೃತ್ತಿ ಮತ್ತು ವೈವಾಹಿಕ ಜೀವನದ ಬಗ್ಗೆ ಜಾಗರೂಕರಾಗಿರಬೇಕು. ನಿಮ್ಮ ವೃತ್ತಿ ಜೀವನದಲ್ಲಿ ಸವಾಲುಗಳು ಹೆಚ್ಚಬಹುದು. ಹಣ ನಷ್ಟವಾಗುವ ಸಂಭವವಿದೆ. ಕಷ್ಟದ ಸಮಯವನ್ನು ಧೈರ್ಯದಿಂದ ಎದುರಿಸಿ. ಜನವರಿ 31ರಿಂದ ಮಾರ್ಚ್ 5ರವರೆಗೆ ಬಹಳ ಎಚ್ಚರಿಕೆಯಿಂದ ಹೂಡಿಕೆ ಮಾಡಿ. ಈ ಸಮಯದಲ್ಲಿ, ನಿಮ್ಮ ಗೌರವಕ್ಕೆ ಧಕ್ಕೆ ತರುವಂತಹ ಯಾವುದೇ ಕೆಲಸವನ್ನು ಮಾಡಬೇಡಿ.

ಕರ್ಕಾಟಕ ರಾಶಿ(Cancer)
ಕರ್ಕಾಟಕ ರಾಶಿಯವರ ಆರೋಗ್ಯ ಕ್ಷೀಣಿಸಬಹುದು. ಉದ್ಯೋಗ ಮತ್ತು ವ್ಯಾಪಾರ ಮಾಡುವವರಿಗೆ ಸ್ವಲ್ಪ ತೊಂದರೆಯಾಗಬಹುದು. ಅನವಶ್ಯಕ ಮಾತು ಮತ್ತು ಕಚೇರಿ ರಾಜಕೀಯದಿಂದ ದೂರವಿರಿ. ಹಿಂದಿನ ಯಾವುದೋ ಭಯವು ನಿಮ್ಮನ್ನು ಕಾಡಬಹುದು. ವ್ಯಾಪಾರದಲ್ಲಿ ನಷ್ಟ ಉಂಟಾಗಬಹುದು. ವೈವಾಹಿಕ ಜೀವನದಲ್ಲೂ ಜಾಗರೂಕರಾಗಿರಿ. ಈ ಸಮಯದಲ್ಲಿ, ಯಾವುದೇ ಹೊಸ ಕೆಲಸವನ್ನು ಮಾಡಬೇಡಿ. ಸಂಗಾತಿಯೊಂದಿಗೆ ವಾದಗಳು ಉಂಟಾಗಬಹುದು.

ಸಿಂಹ ರಾಶಿ(Leo)
ಸಿಂಹ ರಾಶಿಯವರ ಆರೋಗ್ಯದ ಮೇಲೆ ಶನಿ ಅಸ್ತವು ಕೆಟ್ಟ ಪರಿಣಾಮ ಬೀರಬಹುದು. ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ. ಸಾಧ್ಯವಾದರೆ, ಬೆಳಿಗ್ಗೆ ಬೇಗ ಎದ್ದು ವ್ಯಾಯಾಮ ಮಾಡಿ. ವೈವಾಹಿಕ ಸಂಬಂಧದಲ್ಲಿ ಕೆಲವು ಜಗಳ ಉಂಟಾಗಬಹುದು. ಈ ಸಮಯದಲ್ಲಿ ನಿಮ್ಮ ಹಣಕಾಸಿನ ಭಾಗವು ಕುಸಿಯಬಹುದು. ವ್ಯಾಪಾರಸ್ಥರಿಗೆ ನಿರೀಕ್ಷೆಗಿಂತ ಕಡಿಮೆ ಲಾಭ ದೊರೆಯಲಿದೆ. ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ.

ವೃಶ್ಚಿಕ ರಾಶಿ(Scorpio)
ಶನಿಯ ಅಸ್ತದಿಂದಾಗಿ ವೃಶ್ಚಿಕ ರಾಶಿಯವರ ಒಡಹುಟ್ಟಿದವರೊಂದಿಗಿನ ಸಂಬಂಧಗಳು ಹದಗೆಡಬಹುದು. ಕುಟುಂಬದಲ್ಲಿ ವಾಗ್ವಾದದ ಸನ್ನಿವೇಶ ಉಂಟಾಗಬಹುದು. ಆದ್ದರಿಂದ ಸಂಯಮದಿಂದ ಕೆಲಸ ಮಾಡುವುದು ಉತ್ತಮ. ನೀವು ಹೊಸ ಜಮೀನು ಖರೀದಿಸಲು ಯೋಚಿಸುತ್ತಿದ್ದರೆ, ಕೆಲವು ದಿನಗಳವರೆಗೆ ನಿಲ್ಲಿಸಿ. ನೀವು ಎಲ್ಲಿಗಾದರೂ ಹೋಗುತ್ತಿದ್ದರೆ ಎಚ್ಚರಿಕೆಯಿಂದ ಚಾಲನೆ ಮಾಡಿ. ಈಗ ವ್ಯಾಪಾರದಲ್ಲಿ ಹೊಸ ಪ್ರಯೋಗ ಮಾಡಬೇಡಿ, ಇಲ್ಲದಿದ್ದರೆ ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು. ಮಾರ್ಚ್ 5ರ ನಂತರವೇ ಹೊಸದನ್ನು ಮಾಡಲು ಪ್ರಯತ್ನಿಸಿ.

ಕುಂಭ ರಾಶಿ(Aquarius)
ಕುಂಭ ರಾಶಿಯವರು ಜಾಗರೂಕರಾಗಿರಬೇಕು. ನೀವು ಉದ್ಯೋಗವನ್ನು ಬದಲಾಯಿಸಲು ಯೋಚಿಸುತ್ತಿದ್ದರೆ, ಹಾಗೆ ಮಾಡಬೇಡಿ, ನೀವು ಎಲ್ಲಿದ್ದರೂ ಕಷ್ಟಪಟ್ಟು ಕೆಲಸ ಮಾಡಿ. ಇಲ್ಲದಿದ್ದರೆ, ಈ ಕಾರಣದಿಂದಾಗಿ ನಿಮ್ಮ ಆರ್ಥಿಕ ಸ್ಥಿತಿಯು ಹದಗೆಡಬಹುದು. ತಿನ್ನುವುದು ಮತ್ತು ಕುಡಿಯುವುದರ ಬಗ್ಗೆ ಗಮನ ಕೊಡಿ. ಈ ಸಮಯದಲ್ಲಿ, ಕುಟುಂಬ ಮತ್ತು ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರಬಹುದು. ಅದಕ್ಕಾಗಿಯೇ ನಿಮ್ಮ ಮಾತು ಮತ್ತು ನಡವಳಿಕೆ ಎರಡನ್ನೂ ನಿಯಂತ್ರಿಸಿ.

Latest Videos

click me!