ಕಷ್ಟಕ್ಕೆ ಆಗಬೇಕಾದ ಬಂಗಾರವೇ ಸಂಕಷ್ಟಕ್ಕೆ ಕಾರಣ.. ಈ ರಾಶಿಯವರು ಚಿನ್ನ ಧರಿಸಿದ್ರೆ ಅಷ್ಟೇ

Published : Apr 22, 2026, 05:10 PM IST

Zodiac signs and gold: ಚಿನ್ನ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ? ಆದರೆ ನಮಗೆ ಇಷ್ಟವಾದ ಆ ಬಂಗಾರವೇ ನಮ್ಮ ಕಷ್ಟಗಳಿಗೆ ಕಾರಣವಾಗಬಹುದು ಎಂದರೆ ನಂಬುತ್ತೀರಾ? ಹೌದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ 4 ರಾಶಿಯವರು ಚಿನ್ನ ಧರಿಸಿದರೆ ಆರ್ಥಿಕ ನಷ್ಟ, ಆರೋಗ್ಯ ಸಮಸ್ಯೆ ಎದುರಿಸಬೇಕಾಗಬಹುದು.   

PREV
15
ಯಾವ ರಾಶಿ?

ಬಂಗಾರ ಎಂದರೆ ಬೆಲೆಬಾಳುವ ಲೋಹ ಮಾತ್ರವಲ್ಲ, ಕೇವಲ ಅಲಂಕಾರದ ವಸ್ತುವಲ್ಲ, ಅದಕ್ಕೊಂದು ಪವಿತ್ರವಾದ ಸ್ಥಾನವಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬಂಗಾರವು ಗುರು ಗ್ರಹದ ಸಂಕೇತವಾಗಿದೆ. ಆದರೆ, ಎಲ್ಲಾ ಲೋಹಗಳು ಎಲ್ಲರಿಗೂ ಒದಗಿ ಬರುವುದಿಲ್ಲ. ಕೆಲವು ರಾಶಿಯವರಿಗೆ ಚಿನ್ನವು ಅದೃಷ್ಟ ತಂದರೆ, ಇನ್ನು ಕೆಲವರಿಗೆ ಅದು ಜೀವನದಲ್ಲಿ ಸಂಕಷ್ಟಗಳನ್ನು ತರಬಹುದು ಎಂದು ಹೇಳಲಾಗುತ್ತದೆ. ಹಾಗಾದರೆ ಯಾವ ರಾಶಿಯವರು ಬಂಗಾರ ಧರಿಸುವ ಮುನ್ನ ಯೋಚಿಸಬೇಕು? ಇಲ್ಲಿದೆ ಮಾಹಿತಿ. 

25
1. ವೃಷಭ ರಾಶಿ (Taurus)

ವೃಷಭ ರಾಶಿಯ ಅಧಿಪತಿ ಶುಕ್ರ. ಜ್ಯೋತಿಷ್ಯದ ಪ್ರಕಾರ, ಶುಕ್ರ ಮತ್ತು ಗುರು (ಬಂಗಾರದ ಅಧಿಪತಿ) ನಡುವೆ ಶತ್ರುತ್ವವಿದೆ. ಹಾಗಾಗಿ ಈ ರಾಶಿಯವರು ಚಿನ್ನ ಧರಿಸುವುದರಿಂದ ಅನಗತ್ಯ ಖರ್ಚುಗಳು ಹೆಚ್ಚಾಗಬಹುದು ಮತ್ತು ಜೀವನದ ಸುಖ-ಶಾಂತಿಗಳಿಗೆ ಅಡ್ಡಿಯಾಗಬಹುದು.

35
2. ಮಿಥುನ ರಾಶಿ (Gemini)

ಈ ರಾಶಿಯ ಅಧಿಪತಿ ಬುಧ. ಬುಧ ಮತ್ತು ಗುರು ಗ್ರಹಗಳ ನಡುವಿನ ಸಂಬಂಧ ಅಷ್ಟೊಂದು ಹಿತಕರವಾಗಿಲ್ಲ. ಮಿಥುನ ರಾಶಿಯವರು ಚಿನ್ನ ಧರಿಸಿದರೆ ವ್ಯಾಪಾರ-ವ್ಯವಹಾರದಲ್ಲಿ ನಷ್ಟ ಉಂಟಾಗುವ ಸಾಧ್ಯತೆ ಇರುತ್ತದೆ. ಯಾವುದೇ ಚಿನ್ನದ ವಸ್ತು ಧರಿಸುವ ಮುನ್ನ ತಜ್ಞರ ಸಲಹೆ ಪಡೆಯುವುದು ಉತ್ತಮ.

45
3. ಕನ್ಯಾ ರಾಶಿ (Virgo)

ಕನ್ಯಾ ರಾಶಿಯವರಿಗೆ ಬಂಗಾರ ಧರಿಸುವುದರಿಂದ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಎದುರಾಗಬಹುದು ಎಂದು ಶಾಸ್ತ್ರಗಳು ಹೇಳುತ್ತವೆ. ಅಲ್ಲದೆ ಇದು ಆರೋಗ್ಯದ ಮೇಲೂ ನಕಾರಾತ್ಮಕ ಪ್ರಭಾವ ಬೀರಬಹುದು. ಈ ರಾಶಿಯವರಿಗೆ ಬಂಗಾರಕ್ಕಿಂತ ಬೆಳ್ಳಿ ಧರಿಸುವುದು ಅತ್ಯಂತ ಶುಭಪ್ರದ.

55
4. ಕುಂಭ ರಾಶಿ (Aquarius)

ಕುಂಭ ರಾಶಿಗೆ ಶನಿದೇವ ಅಧಿಪತಿ. ಶನಿ ಮತ್ತು ಗುರು ಗ್ರಹಗಳ ನಡುವೆ ಸಮನ್ವಯ ಇರುವುದಿಲ್ಲ. ಈ ರಾಶಿಯವರು ಚಿನ್ನ ಧರಿಸುವುದರಿಂದ ಅವರ ಕೆಲಸಗಳು ನಿಧಾನವಾಗಬಹುದು ಮತ್ತು ಮಾನಸಿಕ ಒತ್ತಡ ಹೆಚ್ಚಾಗುವ ಸಂಭವವಿರುತ್ತದೆ.

ಗಮನಿಸಿ: ಈ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಶಾಸ್ತ್ರವನ್ನು ಆಧರಿಸಿದೆ. ವೈಯಕ್ತಿಕ ಜಾತಕಕ್ಕೆ ಅನುಗುಣವಾಗಿ ಫಲಿತಾಂಶಗಳು ಬದಲಾಗಬಹುದು.

Read more Photos on
click me!

Recommended Stories