ಪೂಜಿಸುವಾಗ ಬೆಳ್ಳುಳ್ಳಿ-ಈರುಳ್ಳಿ ತಿನ್ನಬಾರದೇಕೆ?

First Published | Jun 28, 2022, 10:49 AM IST

ಹಿಂದೂ ಧರ್ಮದಲ್ಲಿ (Hindu Religion), ಬ್ರಾಹ್ಮಣರನ್ನು ಹೊರತುಪಡಿಸಿ, ಅನೇಕ ಜನರು ಬೆಳ್ಳುಳ್ಳಿ (Garlic) ಮತ್ತು ಈರುಳ್ಳಿಯನ್ನು (Onion) ಕೆಲವು ವಿಶೇಷ ದಿನಗಳಲ್ಲಿ ತಿನ್ನುವುದನ್ನು ತಪ್ಪಿಸುತ್ತಾರೆ. ನವರಾತ್ರಿ ದಿನಗಳಲ್ಲಿ, ಹಬ್ಬ ಹರಿದಿನಗಳಂದು ತಾಮಸಿಕ ಆಹಾರ ನಿಷೇಧಿಸಲಾಗಿದೆ. ದೇವರ ನೈವೇದ್ಯದಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಏಕೆ ಬಳಸೋಲ್ಲ, ಇಲ್ಲದೆ ಮಾಹಿತಿ. 

ಬ್ರಾಹ್ಮಣರನ್ನು ಹೊರತುಪಡಿಸಿ, ಉಪವಾಸ (Fasting) ಮಾಡುವ ಜನರು ಬೆಳ್ಳುಳ್ಳಿ ಮತ್ತು ಈರುಳ್ಳಿ ತಿನ್ನೋದಿಲ್ಲ ಅನ್ನೋದನ್ನು ನೀವು ಕೇಳಿರಬಹುದು. ದೇವರ ಭೋಗದಲ್ಲಿಯೂ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಸುವುದಿಲ್ಲ. ಆದರೆ ಅದರ ಹಿಂದಿನ ಕಾರಣದ ಬಗ್ಗೆ ನಿಮಗೆ ಏನು ತಿಳಿದಿದೆ? 

ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಆರೋಗ್ಯಕ್ಕೆ (Health) ಸಾಕಷ್ಟು ಉತ್ತಮವೆಂದು ಪರಿಗಣಿಸಲಾಗುತ್ತದೆ. ಇದು ಆಹಾರದ ರುಚಿ ಹೆಚ್ಚಿಸೋದರ ಜೊತೆಗೆ ಅನೇಕ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಆದರೂ, ಇದನ್ನು ಬ್ರಾಹ್ಮಣರು ಮತ್ತು ಉಪವಾಸ ಮಾಡುವ ಜನರು ಆಹಾರದಲ್ಲಿ ಬಳಸೋದಿಲ್ಲ. ಇದರ ಹಿಂದಿರುವ ಧಾರ್ಮಿಕ ಕಾರಣವೇನು ಎಂಬುದನ್ನು ತಿಳಿಯಿರಿ. 

Tap to resize

ವೇದಗಳ ಪ್ರಕಾರ, ಆಹಾರದಲ್ಲಿ ಮೂರು ವಿಧಗಳಿವೆ. ಮೊದಲ ಊಟ ಸಾತ್ವಿಕ, ಎರಡನೆಯದು ರಾಜಸಿಕ ಮತ್ತು ಮೂರನೆಯದು ತಾಮಸಿಕ (Tamasika) ಆಹಾರ. ಈ ಮೂರು ರೀತಿಯ ಆಹಾರಗಳು ಮನುಷ್ಯನ ಜೀವನದ ಮೇಲೆ ವಿಭಿನ್ನ ಪರಿಣಾಮ ಬೀರುತ್ತವೆ. ಅವುಗಳ ಬಗ್ಗೆ ತಿಳಿಯೋಣ. 

ಸಾತ್ವಿಕ ಆಹಾರ

ಸಾತ್ವಿಕ (satwika) ಆಹಾರ ಅಂದರೆ ಹಾಲು (Milk), ತುಪ್ಪ (Ghee), ಹಿಟ್ಟು, ತರಕಾರಿಗಳು, ಹಣ್ಣುಗಳು.  ಇವನ್ನು ಸೇವಿಸುವ ವ್ಯಕ್ತಿಯು ಅತ್ಯುನ್ನತ ಸತ್ವ ಗುಣಗಳನ್ನು ಹೊಂದಿರುತ್ತಾನೆ ಎಂದು ನಂಬಲಾಗಿದೆ. ಅಂತಹ ಆಹಾರವನ್ನು ತಿನ್ನುವ ಮೂಲಕ, ವ್ಯಕ್ತಿಯು ಸಾತ್ವಿಕನಾಗುತ್ತಾನೆ. ಅದರ ಬಗ್ಗೆ ಒಂದು ಶ್ಲೋಕವನ್ನೂ ಹೇಳಲಾಗಿದೆ. 

ಆಹಾರ ಶುದ್ಧೋ ಸತ್ವಶುದ್ಧಿ: ಧ್ರುವಸ್ಮೃತಿ: ಸ್ಮೃತಿಲಂಭೇ ಸರ್ವಗ್ರಂಥಿನ ವಿಪ್ರಮೋಕ್ಷ:.

ಈ ಶ್ಲೋಕದ ಅರ್ಥವೇನೆಂದರೆ, ಆಹಾರವು ಪರಿಶುದ್ಧವಾಗಿದ್ದರೆ, ಆಗ ವ್ಯಕ್ತಿಯು ಒಳಗಿನಿಂದ ಪರಿಶುದ್ಧನಾಗಿರುತ್ತಾನೆ ಮತ್ತು ಇದು ದೈವ ಭಕ್ತನಾಗಲು ಸಹಾಯ ಮಾಡುತ್ತೆ. ಜ್ಞಾಪಕಶಕ್ತಿ (Memory Power) ಕೂಡ ಹೆಚ್ಚುತ್ತೆ, ಹೃದಯದ ಪ್ರತಿಯೊಂದು ಗಡ್ಡೆಯೂ ತೆರೆದುಕೊಳ್ಳುತ್ತದೆ. ಸಾತ್ವಿಕ ಆಹಾರ ಸೇವಿಸುವ ಮೂಲಕ, ವ್ಯಕ್ತಿಯ ಮನಸ್ಸು ಶಾಂತವಾಗುತ್ತೆ. 

ರಾಜಸಿಕ ಆಹಾರ

ಧರ್ಮಗ್ರಂಥಗಳ ಪ್ರಕಾರ, ರಾಜಸಿಕ (Rajasika) ಸೇವಿಸುವ ಜನರ ಮನಸ್ಸು ಹೆಚ್ಚು ಚಂಚಲವಾಗಿರುತ್ತದೆ ಮತ್ತು ಈ ಜನರು ಜಗತ್ತಿನ ಕಡೆಗೆ ಒಲವು ತೋರುತ್ತಾರೆ ಎಂದು ತಿಳಿಸಿದೆ. ರಾಜಸಿಕ ಆಹಾರವು ಉಪ್ಪು, ಮೆಣಸು, ಮಸಾಲೆಗಳು, ಕೇಸರಿ, ಮೊಟ್ಟೆಗಳು, ಮೀನು ಇತ್ಯಾದಿಗಳನ್ನು ಒಳಗೊಂಡಿದೆ. 

ತಾಮಸಿಕ ಆಹಾರ

ವೇದ-ಶಾಸ್ತ್ರಗಳ ಪ್ರಕಾರ, ಬೆಳ್ಳುಳ್ಳಿ ಮತ್ತು ಈರುಳ್ಳಿಗಳು ತಾಮಸಿಕ (tamasika) ಆಹಾರದ ವರ್ಗಕ್ಕೆ ಸೇರುತ್ತವೆ. ಈ ಎರಡು ವಸ್ತುಗಳನ್ನು ಸೇವಿಸುವುದರಿಂದ, ವ್ಯಕ್ತಿಯೊಳಗಿನ ರಕ್ತದ ಹರಿವು ಹೆಚ್ಚಾಗುತ್ತದೆ ಅಥವಾ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. ಇದರಿಂದ, ವ್ಯಕ್ತಿಯು ಹೆಚ್ಚು ಕೋಪ, ಅಹಂಕಾರ, ಉತ್ಸಾಹ, ಐಷಾರಾಮಿಯನ್ನು ಅನುಭವಿಸುತ್ತಾನೆ. 

ಬೆಳ್ಳುಳ್ಳಿ, ಈರುಳ್ಳಿ ಸೇವಿಸುವ ವ್ಯಕ್ತಿಯು ಸೋಮಾರಿ ಮತ್ತು ಅಜ್ಞಾನಿಯಾಗುತ್ತಾನೆ. ಅದಕ್ಕಾಗಿಯೇ, ಬ್ರಾಹ್ಮಣರು ಮಾತ್ರವಲ್ಲದೇ, ಪೂಜೆ,ವ್ರತ ಮಾಡುವ ಜನರು ಅದನ್ನು ಸೇವಿಸುವುದಿಲ್ಲ. ಇದರಿಂದ ಮನಸ್ಸನ್ನು ಏಕಾಗ್ರತೆಯಿಂದ ಇಡಲು ಸಾಧ್ಯವಿಲ್ಲ ಎಂದು ನಂಬಲಾಗಿದೆ. 

ಬೆಳ್ಳುಳ್ಳಿ-ಈರುಳ್ಳಿ ಹುಟ್ಟಿಕೊಂಡ ಹಿಂದಿನ ದಂತಕಥೆ

ಸಮುದ್ರ ಮಂಥನದ ಸಮಯದಲ್ಲಿ, ಲಕ್ಷ್ಮಿಯೊಂದಿಗೆ ಅಮೃತ ಕಲಶದೊಂದಿಗೆ ಅನೇಕ ರತ್ನಗಳು ಇದ್ದವು. ಅಮೃತಕ್ಕಾಗಿ ದೇವತೆಗಳು ಮತ್ತು ಅಸುರರ ನಡುವೆ ವಿವಾದ ಉಂಟಾದಾಗ, ಭಗವಾನ್ ವಿಷ್ಣು ಮೋಹಿನಿ ರೂಪವನ್ನು ತಾಳಿ ಅಮೃತ ವಿತರಿಸಲು ಪ್ರಾರಂಭಿಸಿದನು. ಮೋಹಿನಿ ರೂಪವನ್ನು ತಳೆದ ಶ್ರೀ ವಿಷ್ಣು ದೇವತೆಗಳಿಗೆ ಮಾತ್ರ ಅಮೃತ ನೀಡಲು ಪ್ರಾರಂಭಿಸಿದ ಕೂಡಲೇ, ರಾಕ್ಷಸನು ದೇವರ ರೂಪ ತಾಳಿ ದೇವತೆಗಳ ಸಾಲಿನಲ್ಲಿ ನಿಂತನು. ಆದರೆ ಸೂರ್ಯ ಮತ್ತು ಚಂದ್ರ ದೇವರು ಆ ರಾಕ್ಷಸನನ್ನು ಗುರುತಿಸಿ ವಿಷ್ಣುವಿಗೆ ಹೇಳಿದರು. 

ಹೀಗೆ ಆದಾಗ ಭಗವಾನ್ ವಿಷ್ಣುವು ತನ್ನ ಚಕ್ರದಿಂದ ರಾಕ್ಷಸನ ತಲೆಯನ್ನು ಮುಂಡದಿಂದ ಬೇರ್ಪಡಿಸಿದನು. ಆದರೆ ಅವನು ಸ್ವಲ್ಪ ಅಮೃತ ಆಗಲೇ ಕುಡಿದಿದ್ದನು, ಅದು ಈಗ ಅವನ ಬಾಯಲ್ಲಿತ್ತು. ಶಿರಚ್ಛೇದನದಿಂದಾಗಿ ಕೆಲವು ಹನಿ ರಕ್ತ ಮತ್ತು ಅಮೃತ ನೆಲಕ್ಕೆ ಬಿದ್ದಿತು. ಇದರಿಂದಲೇ ಬೆಳ್ಳುಳ್ಳಿ ಮತ್ತು ಈರುಳ್ಳಿಗಳು ಹುಟ್ಟಿಕೊಂಡವು. 

ಭಗವಾನ್ ವಿಷ್ಣುವಿನಿಂದ ಕತ್ತರಿಸಲ್ಪಟ್ಟ ರಾಕ್ಷಸನ ರುಂಡವನ್ನು ರಾಹು ಮತ್ತು ಮುಂಡ ಕೇತು ಎಂದು ಕರೆಯಲಾಯಿತು. ರಾಕ್ಷಸನಿಂದ ಜನಿಸಿದ ಕಾರಣ, ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಸೇವಿಸಲಾಗುವುದಿಲ್ಲ ಎಂದು ನಂಬಲಾಗಿದೆ. ಇದೆಲ್ಲಾ ಪುರಾಣ ಕತೆಗಳಿಂದ ತಿಳಿದು ಬಂದಿದೆ. 

Latest Videos

click me!