Worshipping Shiva on Monday: ಇದರ ಹಿಂದಿನ ಕಾರಣವನ್ನು ತಿಳಿಯಿರಿ

First Published | Nov 8, 2021, 6:55 PM IST

ಭೋಲೆನಾಥನು ಅಂದರೆ ಶಿವನು ತನ್ನ ಭಕ್ತರ ಕಷ್ಟಗಳನ್ನು ಬೇಗ ಪರಿಹರಿಸುತ್ತಾನೆ. ಎಂತಹ ಕ್ರೂರಿಗಳು ಸಹ ಶಿವನನ್ನು ಬೇಡಿಕೊಂಡರೆ ಶಿವ ಕರಗಿ ವರ ನೀಡುತ್ತಾನೆ ಎಂದು ಹೇಳಲಾಗುತ್ತದೆ. ಆದರೆ ಸೋಮವಾರದಂದು ಶಿವನನ್ನು ಏಕೆ ಪೂಜಿಸಲಾಗುತ್ತದೆ ಗೊತ್ತಾ? ಇಲ್ಲದಿದ್ದರೆ ಸೋಮವಾರ ಶಿವನನ್ನು ಪೂಜಿಸಿದರೆ ಏನು ಪ್ರಯೋಜನ ಎಂಬುದನ್ನು ತಿಳಿಯಿರಿ.

ಶಿವ ಭಕ್ತರಿಗೆ ಸೋಮವಾರ ಬಹಳ ಮುಖ್ಯ. ಈ ದಿನ ಭಕ್ತರು ಶಿವ ದೇವಾಲಯದಲ್ಲಿ ಹಾಲು, ಬಿಲ್ವ ಪತ್ರೆ,  ಧಾತುರಾವನ್ನು ಅರ್ಪಿಸುತ್ತಾರೆ. ಶಿವನನ್ನು ಮೆಚ್ಚಿಸಲು ಅನೇಕ ಜನರು ಸೋಮವಾರದಂದು ಉಪವಾಸ (fasting) ಮಾಡುತ್ತಾರೆ. ಸೋಮವಾರದಂದು ಉಪವಾಸ ಮಾಡಿದರೆ, ವ್ಯಕ್ತಿಯ ಎಲ್ಲಾ ಆಸೆಗಳನ್ನು ಪೂರೈಸುತ್ತದೆ ಎಂದು ನಂಬಲಾಗಿದೆ. ಹಾಗಾದರೆ ಸೋಮವಾರದ ಪೂಜೆಯ ಬಗ್ಗೆ ತಿಳಿಯೋಣ. 

ಪುರಾತನ ಕಾಲದಿಂದಲೂ (ancient period) ಜನರು ಶಿವನನ್ನು ಪೂಜಿಸುತ್ತಿದ್ದಾರೆ. ಶಾಸ್ತ್ರಗಳಲ್ಲಿ, ಸೋಮವಾರ ಉಪವಾಸ ಮಾಡುವ ವ್ಯಕ್ತಿಯನ್ನು ಸೋಮೇಶ್ವರ ಎಂದು ಕರೆಯಲಾಗುತ್ತದೆ. ಈ ಪದಕ್ಕೆ ಎರಡು ಅರ್ಥಗಳಿವೆ. ಮೊದಲ ಸೋಮ ಎಂದರೆ ಚಂದ್ರ ಅಂದರೆ ಚಂದ್ರನನ್ನೇ ತನ್ನ ಈಶ್ವರ ಎಂದು ತಿಳಿದು ಆತನಿಗಾಗಿ ವ್ರತ ಮತ್ತು ಉಪವಾಸ ಮಾಡುವುದು ಎಂದರ್ಥ.  

Tap to resize

ಪುರಾಣಗಳ ಪ್ರಕಾರ, ಸೋಮನಾಥ ಎಂಬ ವ್ಯಕ್ತಿಯು ಸೋಮವಾರ (Monday) ದಿನದಂದು ಶಿವನನ್ನ ಪೂಜಿಸುತ್ತಿದ್ದನು. ಅದರ ಪರಿಣಾಮ ಸೋಮನಾಥನ ಆರೋಗ್ಯಪೂರ್ಣವಾಗಿತ್ತು ಮತ್ತು ಅವನ ಸೌಂದರ್ಯವನ್ನು ಮರಳಿ ಪಡೆದನು. ಆಗ ಶಿವನು  ಚಂದ್ರನನ್ನು ತನ್ನ ಜಟೆಯಲ್ಲಿ ಹಿಡಿದನು. ಅಂದಿನಿಂದ, ಪ್ರಾಚೀನ ಕಾಲದಿಂದಲೂ ಸೋಮವಾರದಂದು ಶಿವನನ್ನು ಪೂಜಿಸಲಾಗುತ್ತದೆ. 

ಈ ದಿನ ಚಂದ್ರ ದೇವರನ್ನು (moon god ) ಪೂಜಿಸುವುದರಿಂದ ನಿಮ್ಮ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಇದೇ ವೇಳೆ ಜಾತಕದಲ್ಲಿ ಚಂದ್ರನ ಸ್ಥಾನ ಬಲವಾಗಿದೆ. ಜ್ಯೋತಿಷ್ಯ ದಲ್ಲಿ ಚಂದ್ರನನ್ನು ಮನಸ್ಸಿನ ಅಧಿಪತಿ ಎಂದು ಪರಿಗಣಿಸಲಾಗಿದೆ. ಆದುದರಿಂದ ಸೋಮವಾರ ಚಂದ್ರನನ್ನು ಅಥವಾ ಶಿವನ ದೇಗುಲಕ್ಕೆ ತೆರಳಿ ಶಿವನನ್ನು ಪೂಜಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ. 

ಸೋಮ ಎಂದರೆ ಸೌಮ್ಯ ಎಂದರ್ಥ. ಆದ್ದರಿಂದಲೇ ಭೋಲೆನಾಥ ಶಿವನನ್ನು ಶಾಂತ ದೇವತೆ ಎಂದು ಪರಿಗಣಿಸಲಾಗಿದೆ. ಸೋಮವಾರ ಶಿವನನ್ನು ಪೂಜಿಸಿ, ಇಷ್ಟವಾದ ಹೂವುಗಳನ್ನು ಅರ್ಪಿಸಿದರೆ ಅದರಿಂದ ಶಿವ ಬೇಗ ಒಲಿಯುತ್ತಾನೆ ಎಂದು ಹೇಳಲಾಗುತ್ತದೆ. ಜೊತೆಗೆ ಶಿವನ ಅನುಗ್ರಹ ಯಾವಾಗಲೂ ನಿಮ್ಮ ಮೇಲಿರುತ್ತದೆ ಎನ್ನಲಾಗುತ್ತದೆ. 

ಸೋಮವಾರ ಏನು ಮಾಡಬೇಕು?
ಸೋಮವಾರ ಬೆಳಗ್ಗೆ ಎದ್ದು ಸ್ನಾನ ಮಾಡಿ ದೇವಸ್ಥಾನಕ್ಕೆ (temple) ಹೋಗಿ ಶಿವನ ಆರಾಧನೆ ಮಾಡಿ. ನೀವು ವ್ರತ ಹೊಂದಿದ್ದರೆ, ನೀವು ಈ ದಿನದಂದು ಉಪವಾಸ ಮಾಡಬಹುದು. ಭೋಲೆನಾಥನಿಗೆ ಈ ದಿನ ಭಸ್ಮದ ತಿಲಕವನ್ನು ನೀಡಬೇಕು, ಅದು ಅವನ ಅನುಗ್ರಹವನ್ನು ನಿಮ್ಮ ಮೇಲೆ ಇಡುತ್ತದೆ. ಸೋಮವಾರದಂದು ಚಿನ್ನ, ಬೆಳ್ಳಿ ಅಥವಾ ಮನೆ ಖರೀದಿಸುವುದು ಶುಭಕರ ಎಂದು ಸಹ ಹೇಳಲಾಗುತ್ತದೆ. 

ಶಿವನ ಪೂಜೆಯಿಂದ ಎಲ್ಲಾ ರೀತಿಯ ದುಃಖಗಳು ನಿವಾರಣೆಯಾಗುವ ಜೊತೆಗೆ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಮನುಷ್ಯನಿಗೆ ವಿಜಯವನ್ನು ನೀಡುತ್ತದೆ. ಶಿವನ ಪೂಜೆ ಮಾಡುವವರಿಗೆ ಇಂದಿಗೂ ಸೋಲು ಇರೋದಿಲ್ಲ.  ಯಾವುದೇ ರೀತಿಯ ರೋಗ ಮತ್ತು ದುಃಖ ವು ಉಂಟುಮಾಡುವುದಿಲ್ಲ. ಶಿವನ ಭಕ್ತನು (sಏhiva devotee) ಯಾವಾಗಲೂ ರೋಗಮುಕ್ತನಾಗಿರುತ್ತಾನೆ ಏಕೆಂದರೆ ಅವನು ಬೈದ್ಯನಾಥನಾಗಿದ್ದಾನೆ.

ಶಿವನು ಶಕ್ತಿಪುಂಜ ಆದ್ದರಿಂದ ಅವನನ್ನು ಪೂಜಿಸುವುದರಿಂದ ದೇಹಕ್ಕೆ ಅದ್ಭುತ ಶಕ್ತಿ ಮತ್ತು ಧೈರ್ಯವನ್ನು ನೀಡುತ್ತದೆ. ಶಿವನನ್ನು ಪೂಜಿಸುವುದರಿಂದ ಆತ್ಮಬಲ ಹೆಚ್ಚುತ್ತದೆ. ಶಿವ ಮೃತ್ಯುಂಜಯಿ. ಇಂತಹ ಪರಿಸ್ಥಿತಿಯಲ್ಲಿ ಮೃತ್ಯುಂಜಯ ದೇವರನ್ನು ಪೂಜಿಸುವಾಗ ನಾವು ಎಂದಿಗೂ ಸಾವಿಗೆ ಹೆದರುವುದಿಲ್ಲ. ಶಿವನ ಅನ್ವೇಷಕನು ಎಂದಿಗೂ ಅಕಾಲಿಕವಾಗಿ ಸಾಯುವುದಿಲ್ಲ. ಅವನು ಯಾವಾಗಲೂ ವಿವಿಧ ರೀತಿಯ ರೋಗಗಳಿಂದ (health problem) ಮುಕ್ತನಾಗಿದ್ದಾನೆ.

Latest Videos

click me!