ಹಿಂದೂ ಸಂಸ್ಕೃತಿಯಲ್ಲಿ ಹಬ್ಬ ಹರಿದಿನಗಳು, ಊರ ಹಬ್ಬ, ಜಾತ್ರೆ, ಸಾಮೂಹಿಕ ಸಮಾರಂಭಗಳು ಅಥವಾ ಮನೆಗಳಲ್ಲಿ ಮದುವೆ, ಮುಂಜಿ, ನಾಮಕರಣ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಸದಾ ನಡೆಯುತ್ತಲೇ ಇರುತ್ತವೆ. ಇಂಥಾ ಕಾರ್ಯಕ್ರಮವಿದ್ದಾಗ ಸಾಮಾನ್ಯವಾಗಿ ಎದ್ದು ಕಾಣುವ ಅಂಶವೆಂದರೆ ಮನೆಯ ಮುಂದೆ ರಂಗೋಲಿ ಹಾಗೂ ಬಾಗಿಲಿಗೆ ಮಾವಿನ ತಳಿರು ತೋರಣ.