ಗುಡ್ ಫ್ರೈಡೆ ಏಕೆ ಆಚರಿಸಲಾಗುತ್ತೆ? ಅದರ ಪ್ರಾಮುಖ್ಯತೆ ಏನು?

First Published | Apr 5, 2023, 2:45 PM IST

ಈ ವರ್ಷ ಗುಡ್ ಫ್ರೈಡೆ ಏಪ್ರಿಲ್ 7 ರಂದು ಆಚರಿಸಲಾಗುತ್ತೆ. ಮುಖ್ಯವಾಗಿ ಈ ಹಬ್ಬವನ್ನು ಕ್ರಿಶ್ಚಿಯನ್ ಧರ್ಮದ ಜನರು ಆಚರಿಸುತ್ತಾರೆ. ಗುಡ್ ಫ್ರೈಡೆಯನ್ನು ಏಕೆ ಆಚರಿಸಲಾಗುತ್ತದೆ, ಅದನ್ನು ಆಚರಿಸುವ ಮಹತ್ವವೇನು ಅನ್ನೋದನ್ನು ತಿಳಿಯೋಣ. 

ಕ್ರಿಶ್ಚಿಯನ್ (Christian people) ಧರ್ಮದ ಜನರು ಗುಡ್ ಫ್ರೈಡೆಯನ್ನು ಆಚರಿಸುತ್ತಾರೆ. ಗುಡ್ ಫ್ರೈಡೆಯನ್ನು ಶೋಕದ ದಿನವಾಗಿ ಆಚರಿಸಲಾಗುತ್ತದೆ. ಈ ವರ್ಷ ಗುಡ್ ಫ್ರೈಡೆ ಏಪ್ರಿಲ್ 7 ರಂದು ಬರುತ್ತೆ. ಯೆಹೂದಿ ಆಡಳಿತಗಾರರು ಎಲ್ಲಾ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ಅನುಭವಿಸಿದ ನಂತರ ಯೇಸು ಕ್ರಿಸ್ತನನ್ನು ಶಿಲುಬೆಗೇರಿಸಿದ ದಿನ ಶುಕ್ರವಾರ.

ಯೇಸು ಕ್ರಿಸ್ತನು ಮಾನವ ಕುಲಕ್ಕಾಗಿ ತನ್ನ ಜೀವನವನ್ನು ತ್ಯಾಗ ಮಾಡಿದನು, ಆದ್ದರಿಂದ ಈ ಶುಕ್ರವಾರವನ್ನು 'ಗುಡ್ ಫ್ರೈಡೆ' (Good Friday) ಎಂದು ಆಚರಿಸಲಾಗುತ್ತದೆ. ಶುಭ ಶುಕ್ರವಾರವನ್ನು ಪವಿತ್ರ ದಿನ, ಕಪ್ಪು ಶುಕ್ರವಾರ ಮತ್ತು ಗ್ರೇಟ್ ಫ್ರೈಡೆ ಎಂದೂ ಕರೆಯುತ್ತಾರೆ. ಈ ದಿನವನ್ನು ಮುಖ್ಯವಾಗಿ ಕ್ರಿಶ್ಚಿಯನ್ ಧರ್ಮದ ಜನರು ಯೇಸು ಕ್ರಿಸ್ತನ ತ್ಯಾಗದ ದಿನವಾಗಿ ಆಚರಿಸುತ್ತಾರೆ.
 

Tap to resize

ಗುಡ್ ಫ್ರೈಡೆಯನ್ನು ಏಕೆ ಆಚರಿಸಲಾಗುತ್ತೆ? 
ಬೈಬಲಿನ ಪ್ರಕಾರ, ಈ ದಿನದಂದು, ಪ್ರೀತಿ, ಜ್ಞಾನ ಮತ್ತು ಅಹಿಂಸೆಯ ಸಂದೇಶವನ್ನು ನೀಡಿದ ಕ್ರೈಸ್ತರ ಕರ್ತ ಯೇಸು ಕ್ರಿಸ್ತನು (Jesus Christ) ಮಾನವಕುಲದ ಕಲ್ಯಾಣಕ್ಕಾಗಿ ತನ್ನನ್ನೇ ತ್ಯಾಗ ಮಾಡಿದರು. ಯೆಹೂದಿ ಆಡಳಿತಗಾರರು ಯೇಸು ಕ್ರಿಸ್ತನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸಿಸಿ, ಶಿಲುಬೆಗೇರಿಸಿದರು, ಆ ದಿನ ಶುಕ್ರವಾರ.

ಕ್ರೈಸ್ತರ ಪವಿತ್ರ ಗ್ರಂಥವಾದ ಬೈಬಲ್ (Bible), ಯೇಸು ಕ್ರಿಸ್ತನನ್ನು ಸುಮಾರು 6 ಗಂಟೆಗಳ ಕಾಲ ಮೊಳೆಗಳಿಂದ ಹೊಡೆದು ನಂತರ ಗಲ್ಲಿಗೇರಿಸಲಾಯಿತು ಎಂದು ಹೇಳುತ್ತದೆ. ಇದೆಲ್ಲ ನಡೆಯುತ್ತಿದ್ದಾಗ, ಮೂರು ಗಂಟೆಗಳ ಕಾಲ, ಇಡೀ ರಾಜ್ಯದಲ್ಲಿ ಕತ್ತಲೆ ಆವರಿಸಿತ್ತು, ಮತ್ತು ಯೇಸು ಕ್ರಿಸ್ತನ ಜೀವನದ ನಂತರ, ಸಮಾಧಿಗಳು ಒಡೆಯಲು ಪ್ರಾರಂಭಿಸಿದವು ಎನ್ನಲಾಗುತ್ತದೆ.

ಕೆಲವು ನಂಬಿಕೆಗಳ ಪ್ರಕಾರ, ಯೇಸು ಕ್ರಿಸ್ತನು ಶಿಲುಬೆಗೇರಿದ ಮೂರು ದಿನಗಳ ನಂತರ ಪುನರುತ್ಥಾನಗೊಂಡನು, ಆ ದಿನ ಭಾನುವಾರವಾಗಿತ್ತು. ಈ ಸುದಿನವನ್ನು ಪ್ರಪಂಚದಾದ್ಯಂತ ಈಸ್ಟರ್ ಭಾನುವಾರವಾಗಿ (Easter Sunday) ಆಚರಿಸಲಾಗುತ್ತದೆ. ಅದು ಏಪ್ರಿಲ್ 9 ರಂದು ಬರುತ್ತೆ. 
 

ಈ ದಿನದ ಮಹತ್ವವೇನು? 
ಕ್ರಿಶ್ಚಿಯನ್ ಧರ್ಮದ ಜನರು 40 ದಿನಗಳ ಕಾಲ ಉಪವಾಸ (fasting for 40 days) ಮಾಡಿದರೆ, ಕೆಲವರು ಶುಕ್ರವಾರ ಮಾತ್ರ ಉಪವಾಸ ಮಾಡುತ್ತಾರೆ, ಇದನ್ನು ಲೆಂಟ್ ಎಂದು ಕರೆಯಲಾಗುತ್ತದೆ. ಈ ದಿನದಂದು, ಜನರು ಚರ್ಚ್‌ಗಳು ಮತ್ತು ಮನೆಗಳ ಅಲಂಕಾರ ವಸ್ತುಗಳನ್ನು ಬಟ್ಟೆಯಿಂದ ಮುಚ್ಚುತ್ತಾರೆ ಮತ್ತು ಜನರು ಚರ್ಚಿನಲ್ಲಿ ಕಪ್ಪು ಬಟ್ಟೆಗಳನ್ನು ಧರಿಸಿ ಶೋಕಿಸುತ್ತಾರೆ. ಅಲ್ಲದೆ, ಅವರ ಪಾಪಗಳ ಕ್ಷಮೆಗಾಗಿ ಪ್ರಾರ್ಥಿಸುತ್ತಾರೆ.  ಈ ದಿನದಂದು, ಜನರು ಎಲ್ಲರೊಂದಿಗೆ ಚರ್ಚಿನಲ್ಲಿ ಭಗವಾನ್ ಯೇಸುವಿನ ತ್ಯಾಗವನ್ನು ನೆನಪಿಸಿಕೊಳ್ಳುತ್ತಾರೆ. 
 

Latest Videos

click me!