ಗರುಡ ಪುರಾಣವು ಹಿಂದೂ ಧರ್ಮದಲ್ಲಿನ 18 ಮಹಾಪುರಾಣ ಗ್ರಂಥಗಳಲ್ಲಿ ಒಂದಾಗಿದೆ. ಗರುಡ ಪುರಾಣ ಪಠ್ಯವು ಅನೇಕ ಆವೃತ್ತಿಗಳಲ್ಲಿದ್ದು, 15000ಕ್ಕೂ ಹೆಚ್ಚು ಪದ್ಯಗಳನ್ನು ಒಳಗೊಂಡಿದೆ. ಸ್ವರ್ಗ, ನರಕ, ಜನ್ಮ, ಆತ್ಮ, ಪುನರ್ಜನ್ಮಗಳ ಸುತ್ತ ಇದರ ಪುರಾಣ ಸುತ್ತುವರಿಯುತ್ತದೆ. ಮುಖ್ಯವಾಗಿ ವಿಷ್ಣುವು ತನ್ನ ವಾಹನ ಗರುಡನಿಗೆ ಸಾವಿನ ನಂತರದ ದಿನಗಳು ಹೇಗಿರುತ್ತವೆ ಎಂಬುದನ್ನು ವಿವರಿಸುವುದನ್ನು ಈ ಪುಸ್ತಕದಲ್ಲಿ ದಾಖಲಿಸಲಾಗಿದೆ.