ಹೃದಯ ರೇಖೆ (The heart line)
ಅಂಗೈಯಲ್ಲಿರುವ ಅತ್ಯಂತ ಪ್ರಮುಖ ಮತ್ತು ಪ್ರಸಿದ್ಧ ರೇಖೆಯಾದ ಹೃದಯ ರೇಖೆಯು ಒಬ್ಬರ ಭಾವನೆಗಳು ಮತ್ತು ಸಂಬಂಧಗಳನ್ನು ಅರ್ಥಮಾಡಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಆಳವಾದ, ಸ್ಪಷ್ಟವಾದ ಮತ್ತು ಮುರಿಯದ ಹೃದಯ ರೇಖೆಯು ಭಾವನಾತ್ಮಕವಾಗಿ ಸ್ಥಿರವಾಗಿರುವ ಮತ್ತು ಬಲವಾದ, ಶಾಶ್ವತ ಬಂಧಗಳನ್ನು ರೂಪಿಸುವ ಸಾಮರ್ಥ್ಯವನ್ನು ಹೊಂದಿರುವ ವ್ಯಕ್ತಿಯನ್ನು ಸೂಚಿಸುತ್ತದೆ. ಸೌಮ್ಯ ವಕ್ರತೆ ಮತ್ತು ಅಡೆತಡೆಗಳು ಇಲ್ಲದೇ ಇರೋದು ಸಂತೋಷದ ವಿವಾಹದ ಚಿಹ್ನೆಗಳಾಗಿವೆ.