ವಾಸ್ತು ಶಾಸ್ತ್ರ ಮತ್ತು ಪುರಾಣಗಳ ಪ್ರಕಾರ, ಸಸ್ಯಗಳು ನಮ್ಮ ಹಣೆಬರಹದ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ಕೆಲ ಸಸ್ಯಗಳಿಂದ ನಕಾರಾತ್ಮಕ ಶಕ್ತಿ ನಮ್ಮ ಮನೆ ಮನಸ್ಸನ್ನು ಪ್ರವೇಶ ಮಾಡುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಶ್ರೀಕೃಷ್ಣ ಸ್ವತಃ ಮನೆಯ ಶಾಂತಿಯನ್ನು ಕದಡುವ ಕೆಲವು ಮರಗಳ ಬಗ್ಗೆ ಮಾತನಾಡಿದ್ದಾನೆ.
ವಾಸ್ತು ಪ್ರಕಾರ, ಕಳ್ಳಿ ಸೇರಿದಂತೆ ಮುಳ್ಳಿನ ಸಸ್ಯಗಳನ್ನು ಮನೆಯೊಳಗೆ ಎಂದಿಗೂ ನೆಡಬಾರದು. ಶ್ರೀಕೃಷ್ಣನ ಪ್ರಕಾರ, ಈ ಸಸ್ಯಗಳು ನೋವು ಮತ್ತು ಒತ್ತಡವನ್ನು ಉಂಟುಮಾಡುತ್ತವೆ. ಮನೆಯಲ್ಲಿ ಬೆಳೆಯುವ ಈ ಸಸ್ಯಗಳು ಮನೆಯಲ್ಲಿ ಆಗಾಗ ಜಗಳಕ್ಕೆ ಕಾರಣವಾಗುತ್ತದೆ. ಮಾನಸಿಕ ಅಶಾಂತಿಗೆ ಕಾರಣವಾಗುತ್ತದೆ. ಗುಲಾಬಿಗಳನ್ನು ಹೊರತುಪಡಿಸಿ, ಇತರ ಎಲ್ಲ ಮುಳ್ಳಿನ ಸಸ್ಯಗಳು ಮನೆಯ ಸಂತೋಷ ಮತ್ತು ಸಮೃದ್ಧಿಗೆ ಅಡ್ಡಿಯಾಗುತ್ತವೆ. ಅನಗತ್ಯ ಖರ್ಚು ಹೆಚ್ಚಾಗುತ್ತದೆ.
27
ಬೋನ್ಸಾಯ್ ಸಸ್ಯಗಳು
ಇತ್ತೀಚಿನ ದಿನಗಳಲ್ಲಿ ಬೋನ್ಸಾಯ್ ಸಸ್ಯಗಳು ಇಂಟಿರಿಯರ್ ಅಲಂಕಾರಕ್ಕಾಗಿ ಸಾಕಷ್ಟು ಜನಪ್ರಿಯವಾಗಿವೆ. ವಾಸ್ತು ಪ್ರಕಾರ, ಇವುಗಳನ್ನು ಬಹಳ ಅಶುಭವೆಂದು ಪರಿಗಣಿಸಲಾಗುತ್ತದೆ. ಬೋನ್ಸಾಯ್ ಒಂದು ಸಸ್ಯವಾಗಿದ್ದು, ಅದರ ನೈಸರ್ಗಿಕ ಬೆಳವಣಿಗೆ ಕುಂಠಿತವಾಗಿದೆ. ಇದನ್ನು ಮನೆಯಲ್ಲಿ ಇಡುವುದರಿಂದ ಕುಟುಂಬದ ವೃತ್ತಿ ಪ್ರಗತಿ ಮತ್ತು ಆರ್ಥಿಕ ಪ್ರಗತಿಗೆ ಅಡ್ಡಿಯಾಗುತ್ತದೆ.
37
ಹುಣಸೆ ಮರ
ಪ್ರಾಚೀನ ನಂಬಿಕೆಗಳ ಪ್ರಕಾರ, ಹುಣಸೆ ಮರವು ನಕಾರಾತ್ಮಕ ಶಕ್ತಿಗಳನ್ನು ಹೊಂದಿದೆ. ಮನೆ ಹತ್ತಿರ ಹುಣಸೆ ಗಿಡಗಳನ್ನು ಬೆಳೆಸಬಾರದು. ಇವು ಭಯದ ವಾತಾವರಣ ಉಂಟುಮಾಡುತ್ವೆ. ಕುಟುಂಬ ಸದಸ್ಯರು ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗಲು ಇದು ಕಾರಣವಾಗುತ್ತೆ. ಈ ಮರವು ಮನೆಗೆ ಬಡತನಕ್ಕೆ ದಾರಿಮಾಡಿಕೊಡುತ್ತೆ. ಮನೆಯಲ್ಲಿರುವ ಸಂಪತ್ತು ಅನಗತ್ಯವಾಗಿ ಖಾಲಿಯಾಗುತ್ತೆ.
ನೀವು ಕೊಂಬೆ ಅಥವಾ ಎಲೆಗಳು ಮುರಿದಾಗ ಬಿಳಿ, ಕ್ಷೀರ ದ್ರವ ಹೊರ ಬರುವ ಸಸ್ಯಗಳನ್ನು ಮನೆಯಲ್ಲಿ ಎಂದಿಗೂ ಇಡಬಾರದು. ವಾಸ್ತು ಶಾಸ್ತ್ರದ ಪ್ರಕಾರ, ಈ ಸಸ್ಯಗಳು ಮನೆಯ ಸಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತವೆ. ಇವು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತವೆ. ಇವು ಆರೋಗ್ಯವನ್ನು ಹಾಳು ಮಾಡುತ್ತವೆ.
57
ಮೆಹೆಂದಿ
ಮೆಹೆಂದಿ ಸಸ್ಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇದನ್ನು ಸೌಂದರ್ಯವರ್ದಕವಾಗಿ ಬಳಸಲಾಗುತ್ತದೆ. ಆದ್ರೆ ಇದನ್ನು ಮನೆಯಲ್ಲಿ ಬೆಳೆಸುವುದು ಒಳ್ಳೆಯದಲ್ಲ.ಇದು ಕೆಟ್ಟ ಶಕ್ತಿಯನ್ನು ಆಕರ್ಷಿಸುತ್ತದೆ.
67
ಒಣಗಿದ ಸಸ್ಯ
ಮನೆಯಲ್ಲಿ ಯಾವುದೇ ಗಿಡ ಒಣಗ್ತಿದ್ದರೆ ತಕ್ಷಣ ಅದನ್ನು ಕಿತ್ತೆಸೆಯಿರಿ. ಒಣಗಿದ ಗಿಡಗಳು ದುರದೃಷ್ಟಕ್ಕೆ ಕಾರಣವಾಗುತ್ವೆ. ಇದು ನಕಾರಾತ್ಮಕತೆಯನ್ನು ಹರಡುತ್ತದೆ. ಸಂಪತ್ತಿನ ಹರಿವನ್ನು ತಡೆಯುತ್ತದೆ. ಇದ್ರಿಂದ ಮನೆಯಲ್ಲಿ ಅಭಿವೃದ್ಧಿ ಶೂನ್ಯವಾಗುತ್ತದೆ. ಬಡತನ ನಿಮ್ಮನ್ನು ಆವರಿಸುತ್ತದೆ.
77
ಇಂಥ ಗಿಡಗಳನ್ನು ಕಿತ್ತುಹಾಕೋದು ಏಕೆ ಮುಖ್ಯ?
ಸಸ್ಯಗಳಿಂದ ಹೊರಸೂಸುವ ಶಕ್ತಿ ವಾಸ್ತು ಮೇಲೆ ನೇರ ಪರಿಣಾಮ ಬೀರುತ್ತದೆ. ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಶ್ರೀ ಕೃಷ್ಣನ ಬೋಧನೆಗಳನ್ನು ಮತ್ತು ವಾಸ್ತು ನಿಯಮಗಳನ್ನು ಅನುಸರಿಸಿ, ಗಿಡಗಳನ್ನು ಬೆಳೆಸುವುದ್ರಿಂದ ಲಕ್ಷ್ಮಿ ದೇವಿ ಮನೆಗೆ ಬರ್ತಾಳೆ. ಈ ಅಶುಭ ಸಸ್ಯಗಳನ್ನು ತೆಗೆದುಹಾಕಿದಾಗ, ಮನೆಯ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಸಕಾರಾತ್ಮಕ ಆಲೋಚನೆಗಳು ಹರಡುತ್ತವೆ.