ನೋಡ್ರಪ್ಪಾ, ಯಾವ ರಾಶಿಯವರು ಹೇಗೆ ಹಣ ಕೂಡಿಡುತ್ತಾರೆಂದು?

First Published | Apr 2, 2020, 4:31 PM IST

ಹಣವೇ ಜೀವನ ಅಂದುಕೊಂಡು ಕೂರುವವರು ಇದ್ದಾರೆ. ಹಣವೊಂದೇ ಜೀವನದಲ್ಲಿ ಮುಖ್ಯವಲ್ಲ ಅನ್ನೋರೂ ಕಡಿಮೆ ಇಲ್ಲ ಬಿಡಿ. ಎಷ್ಟೇ ಕಷ್ಟ ಪಟ್ರೂ  ಹಣ ಸೇವ್‌ ಮಾಡೋಕೆ ಆಗೋಲ್ಲ ಎನ್ನೋರೇ ಹೆಚ್ಚು. ಹಣದ ವಿಚಾರದಲ್ಲಿ ನಿಮ್ಮ ಇಂಗ್ಲಿಷ್ ರಾಶಿ ಪ್ರಕಾರ ಏನ್‌ ಹೇಳುತ್ತದೆ ನೋಡಿ....

Aries: ಹಣ ಖರ್ಚು ಮಾಡೋಕೆ ಹೆದರದ ನೀವು ಬಿಗ್‌ ರಿಸ್ಕ್‌ಗೆ, ಬಜೆಟ್‌ಗೆ ಕೈ ಹಾಕಿ ಸಂಕಷ್ಟದಲ್ಲಿ ಸಿಲುಕಿಕೊಳ್ಳುತ್ತೀರಾ. ಆದಷ್ಟು ನಿಮ್ಮ ಹಣವನ್ನು ಡಬಲ್‌ ಆಗುವ ಕಡೆ ಇನ್ವೆಸ್ಟ್ ಮಾಡಿ.
Taurus: ಕಷ್ಟ ಪಟ್ಟು ದುಡಿದ ಹಣವನ್ನು ಸೇವ್ ಮಾಡುವ ವ್ಯಕ್ತಿ ನೀವಾಗಿದ್ದು, ದೊಡ್ಡ ಇನ್ವೆಸ್ಟ್‌ಮೆಂಟ್‌ಗೆ ಕೈ ಹಾಕಲು ಯೋಚಿಸುವಿರಿ.
Tap to resize

Gemini: ಒಂದೇ ಕೆಲಸದಲ್ಲಿ ಸ್ಥಿರವಾಗಿ ನೀವು ಕೆಲಸ ಮಾಡದ ಕಾರಣ ಹಣ ಸಂಗ್ರಹಿಸುವುದು ಕಷ್ಟ. ನಿಮಗೆ ತಿಂಗಳಿಗಿಷ್ಟು ಆದಾಯ ನೀಡುವ ಕೆಲಸ ಒಪ್ಪಿಕೊಂಡರೆ ಮಾತ್ರ ನೀವು ಸೇವ್ ಮಾಡಲು ಸಾಧ್ಯ.
Cancer: ನೀವು ದುಡಿಯುವ ಹಣವನ್ನು ಬ್ಯಾಂಕ್‌ನಲ್ಲಿ ಸೇವ್‌ ಮಾಡುತ್ತೀರಾ. ನಿಮ್ಮ ಕುಟುಂಬವನ್ನು ಆರ್ಥಿಕವಾಗಿ ಕಾಪಾಡಿಕೊಳ್ಳುವುದು ನಿಮ್ಮ ಮೊದಲ ಆದ್ಯತೆ ಆಗಿರುತ್ತದೆ.
Leo: Live the moment ಎಂಬ ಪಾಲಿಸಿ ಪಾಲೋ ಮಾಡುವವರಾಗಿದ್ದು ಹಣ ಸೇವ್‌ ಮಾಡುವುದು ನಿಮ್ಗೊಂದು ಬಿಗ್‌ ಟಾಸ್ಕ್.. ಹಣವನ್ನು ಐಷಾರಾಮಿ ಕಾರು ಅಥವಾ ಮಂದೆ ಬೆಲೆ ಕಳೆದುಕೊಳ್ಳುವ ವಸ್ತುಗಳ ಮೇಲೆ ಹಾಕುವ ಬದಲು ಚಿನ್ನ ಅಥವಾ ಬೆಳ್ಳಿ ಮೇಲೆ ಇನ್ವೆಸ್ಟ್‌ ಮಾಡಿ.
Virgo: ನೀವು ಸಂಪಾದಿಸುವ ಹಣವನ್ನು ಸಾರ್ವಜನಿಕರಿಗೆ ಸಹಾಯ ಮಾಡಲು ನೀಡುತ್ತೀರಿ. ಇದರಿಂದ ನಿಮಗೆ ಸೇವಿಂಗ್ಸ್ ಅಸಾಧ್ಯ.
Libra: ನಿಮಗೆ ಬೇಕಾದ ಐಷಾರಾಮಿ ವಸ್ತುಗಳನ್ನು ಕೊಳ್ಳುವ ಮುನ್ನ ಸೇವ್‌ ಮಾಡುವುದನ್ನು ಮರೆಯಬೇಡಿ.
Scorpio: ನೀವು ಹಣ ಸೇವ್‌ ಮಾಡುವುದರಲ್ಲಿ ಪರಿಣಿತರು. ಮನಿ ಮ್ಯಾನೇಜ್‌ಮೆಂಟ್‌ ಪಾಠ ನಿಮ್ಮಿಂದ ಕಲಿಯಬೇಕು. ನೀವು ಹಣ ಸೇವ್‌ ಮಾಡುವುದು ಖುದ್ದು ನಿಮ್ಮ ಪೋಷಕರು ಅಥವಾ ಸಂಗಾತಿಗೇ ಗೊತ್ತಿರುವುದಿಲ್ಲ.
Sagittarius: ಸ್ವತಂತ್ರ ಪ್ರವೃತ್ತಿಯವರಾದ ನೀವು ಯಾರಿಂದರೂ ಹಣ ಪಡೆಯಲು ಇಚ್ಛಿಸುವುದಿಲ್ಲ.ಆದರೆ ಕೆಲವೊಮ್ಮೆ ನಾನು ಎಂಬ ಅಹಂನಿಂದ ಹಣ ಕೆಳೆದುಕೊಳ್ಳುವಿರಿ.
Capricorn: ನೀವು ಮುಂದಿನ ಜೀವನ ಸುಖವಾಗಿರಲಿ ಎಂದು ಹಣವನ್ನು ಸೇವ್ ಮಾಡುತ್ತೀರಿ. ಆದರೆ ಸೇವ್ ಮಾಡುವ ಗುಂಗಿನಲ್ಲಿ ನಿಮ್ಮ ಕನಸುಗಳು, ಆಸೆಗಳನ್ನು ತ್ಯಾಗ ಮಾಡುತ್ತೀರಿ.
Aquarius:ಹಣ ಸೇವ್‌ ಮಾಡುವುದು ನಿಮಗೆ ಕಷ್ಟ. ಆದರೂ ಅಲ್ಲಿ, ಇಲ್ಲಿ ಕೂಡಿಡುತ್ತೀರಿ. ಯಾವುದೋ ಮಾಯೆಯಲ್ಲಿ ಅದು ಗೊತ್ತಿಲ್ಲದೇಯೆ ಖರ್ಚೂ ಆಗುತ್ತೆ.
Pisces:ನೀವು ನಿಮಗೆ ಮಾತ್ರ ಹಣ ಖರ್ಚು ಮಾಡುವಿರಿ. ಬೇರೆಯವರ ವಿಷಯಕ್ಕೆ ಜಿಪುಣತನ ತೋರುತ್ತೀರಿ. ದುಡ್ಡು ಉಳಿಸ್ತೀರಿ ಬಿಡಿ.

Latest Videos

click me!