ಕ್ಯಾನ್ಸರ್ ( ಜೂನ್21-ಜುಲೈ 22)
ಕ್ಯಾನ್ಸರ್ ರಾಶಿ ಅವರು ಲೈಫಲ್ಲಿ ತುಂಬಾ ರೋಮ್ಯಾಂಟಿಕ್. ತನ್ನ ಸಂಗಾತಿ ತನ್ನೊಟ್ಟಿಗೆ ಸದಾ ಇರಬೇಕೆಂದು ಬಯಸುವವರು. ಸಮಯ ಸಿಕ್ಕರೆ ಸಾಕು ಜಾಲಿ ರೈಡ್ ಮಾಡಲು ಕಾಯುತ್ತಿರುತ್ತಾರೆ.
ಪೈಸಿಸ್ (ಫೆಬ್ರವರಿ 19- ಮಾರ್ಚ್ 20 )
ಈ ರಾಶಿ ಅವರು ಸಂಗಾತಿಯನ್ನು ತನ್ನ ಕುಟುಂಬದವರೊಟ್ಟಿಗೆ ಇರಿಸಿಕೊಳ್ಳಲು ಬಯಸುತ್ತಾರೆ. ಜೀವನದಲ್ಲಿ ತನ್ನದೇ ಕನಸಿನ ಮನೆ ಕಟ್ಟಬೇಕೆಂದು ಸಾಧಿಸುವವರೆಗೂ ಕನಸು ಕಾಣುತ್ತಾರೆ.
ಸ್ಕಾರ್ಪಿಯೋ ( ಅಕ್ಟೋಬರ್ 23 - ನವೆಂಬರ್ 21)
ನೋಡಲು ಒರಟು ಆದರೂ ಮನಸ್ಸು ಹೂವಿನಷ್ಟೇ ಮೃದು . ಇವರಿಗೆ ಸಂಗಾತಿ ಯಾರೆಂದು ತಿಳಿದರೆ ಸಾಕು ಅವರಿಗೆ ಇಷ್ಟವಾದ ಯಾವ ಗಿಫ್ಟ್ ಕೊಡಬೇಕು, ಎಲ್ಲಿಗೆ ಒಟ್ಟಾಗಿ ಹೋಗುವುದು ಎಂದೆಲ್ಲಾ ಮುಂಚಿತವಾಗಿ ಪ್ಲಾನ್ ಮಾಡುತ್ತಾರೆ.
ವಿರ್ಗೂ (ಆಗಸ್ಟ್ 23 - ಸೆಪ್ಟೆಂಬರ್ 22)
ಜೀವನದಲ್ಲಿ ಯಾವುದೇ ಗೊಂದಲವಿಲ್ಲದೆ ಬಾಳಬೇಕು ಎನ್ನುವುದು ಇವರ ಪಾಲಿಸಿ. ಕೆಲವೊಮ್ಮೆ ಅವಸರ ಮಾಡುತ್ತಾರೆ ಆದರೆ ಅದು ಸಂಗಾತಿಯ ಅನುಕೂಲಕ್ಕೆ ಹೊರತು ತೊಂದರೆಯಲ್ಲ.