ಮೇಷ ರಾಶಿ (Aries): ಈ ರಾಶಿಯವರು ಹಿಂದಿನ ಜನ್ಮದಲ್ಲಿ ಕವಿಯಾಗಿದ್ದರು. ಅಲ್ಲದೇ ಈ ರಾಶಿಯವರು ಸಹಾನುಭೂತಿಯಿಂದ ತುಂಬಿದವರು ಮತ್ತು ಜನರು ಸಹಾಯಕ್ಕಾಗಿ ಈ ರಾಶಿಯವರ ಬಳಿ ಬರುತ್ತಿದ್ದರು.
ವೃಷಭ (Taurus): ಈ ರಾಶಿಯವರು ಹಿಂದಿನ ಜನ್ಮದಲ್ಲಿ ಆಕ್ರಮಣಶೀಲತೆಯಿಂದ ತುಂಬಿದ ಯೋಧರಾಗಿದ್ದರು. ಫಲಿತಾಂಶ ಏನೇ ಇರಲಿ, ಇವರು ನಂಬಿಕೆಯಿಂದ ಹೋರಾಡುವುದನ್ನು ಮಾತ್ರ ಬಿಡುತ್ತಿರಲಿಲ್ಲ.
ಮಿಥುನ (Gemini): ಈ ರಾಶಿಯವರು ಆರಾಮವಾಗಿ ಅಭಿವೃದ್ಧಿ ಹೊಂದಿದ ಶ್ರೀಮಂತ ಉದ್ಯಮಿಯಾಗಿದ್ದರು. ಅಷ್ಟೇ ಅಲ್ಲ ಈ ರಾಶಿಯವರು ಹಿಂದಿನ ಜನ್ಮದಲ್ಲಿ ಜೀವನದ ಸುಖಭೋಗಗಳಲ್ಲಿಯೂ ಮುಳುಗಿಹೋಗಿದ್ದರು.
ಕರ್ಕಾಟಕ (Cancer): ಕರ್ಕಾಟಕ ರಾಶಿಯವರು ಹಿಂದಿನ ಜನ್ಮದಲ್ಲಿ ಹಾಸ್ಯಮಯ, ಬಹುಮುಖ ಮತ್ತು ಬುದ್ಧಿಜೀವಿಯಾಗಿದ್ದ ಬರಹಗಾರರಾಗಿದ್ದರು. ಇವರು ಉತ್ತಮ ರೀತಿಯಲ್ಲಿ ಬರೆಯುತ್ತಿದ್ದರು.
ಸಿಂಹರಾಶಿ (Leo): ಸಿಂಹ ರಾಶಿ, ಈ ರಾಶಿಯವರು ಬಹುಶಃ ಸೂಲಗಿತ್ತಿ ಅಥವಾ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗುತ್ತದೆ. ಅಂದರೆ ಯಾವುದೇ ಕೆಲಸಗಳಲ್ಲಿ ಇವರು ಸಹಾಯ ಮಾಡುವ ವೃತ್ತಿಯನ್ನು ಹೊಂದಿದ್ದರು.
ಕನ್ಯಾರಾಶಿ (Virgo): ಕನ್ಯಾ ರಾಶಿಯವರು ಹಿಂದಿನ ಜನ್ಮದಲ್ಲಿ ರಾಜಮನೆತನದವರಾಗಿದ್ದರು ಎನ್ನಲಾಗುತ್ತದೆ, ಅವರು ಅತಿ ಅಹಂಕಾರದ ಸ್ವಭಾವವನ್ನು ಸಹ ಹೊಂದಿದ್ದರು. ಜೊತೆಗೆ ಸೆಂಟರ್ ಆಫ್ ಅಟ್ರಾಕ್ಷನ್ ಆಗಲು ಇಷ್ಟಪಡುತ್ತಿದ್ದರು.
ತುಲಾ ರಾಶಿ (Libra): ತುಲಾ ರಾಶಿಯವರೇ, ನೀವು ನಿಮ್ಮ ಹಿಂದಿನ ಜನ್ಮದಲ್ಲಿ ವೈದ್ಯರಾಗಿ ಕೆಲಸ ಮಾಡಿದ್ದೀರಿ. ಇತರರ ಸೇವೆಗಾಗಿ ನೀವು ನಿಮ್ಮ ಜೀವನದಲ್ಲಿ ಅನೇಕ ತ್ಯಾಗಗಳನ್ನು ಮಾಡಿದ್ದೀರಿ ಮತ್ತು ಸಾಕಷ್ಟು ಗುಣಪಡಿಸುವ ಮತ್ತು ನೈಸರ್ಗಿಕ ಔಷಧಿಗಳನ್ನು ತಯಾರಿಸಿದ್ದರು.
ವೃಶ್ಚಿಕ (Scorpio): ನಿಮ್ಮ ಹಿಂದಿನ ಜೀವನದಲ್ಲಿ, ನೀವು ಕಲಾವಿದರಾಗಿದ್ದಿರಿ. ನೀವು ಸೃಜನಶೀಲತೆಯನ್ನು ಹೊಂದಿದ ವ್ಯಕ್ತಿಯಾಗಿದ್ದೀರಿ. ಅಲ್ಲದೇ ತುಂಬಾ ಸೂಕ್ಷ್ಮ ಸ್ವಭಾವದ ವ್ಯಕ್ತಿತ್ವ ಕೂಡ ಇವರದ್ದಾಗಿತ್ತು ಎನ್ನಲಾಗುತ್ತೆ.
ಧನು (Sagitarius): ಧನು ರಾಶಿಯವರು ಹಿಂದಿನ ಜನ್ಮದಲ್ಲಿ ಬಹುಶಃ ವಿಜ್ಞಾನಿ ಮತ್ತು ಬಹಳ ನಿಗೂಢ ವ್ಯಕ್ತಿಯಾಗಿದ್ದಿರಿ. ಸಂಶೋಧನೆಗಳನ್ನು ಮಾಡುತ್ತಾ ಅಥವಾ ಏನೋ ಒಂದು ಹೊಸತನ್ನು ಹುಡುಕುತ್ತ ಕಳೆದು ಹೋಗಿರುವಂತಹ ವ್ಯಕ್ತಿತ್ವ ಇವರದ್ದು.
ಮಕರ (Capricorn): ಮಕರ ರಾಶಿಯವರು ಹಿಂದಿನ ಜನ್ಮದಲ್ಲಿ ಖಂಡಿತವಾಗಿಯೂ ಪ್ರಯಾಣಿಕರಾಗಿದ್ದಿರಿ. ಟ್ರಾವೆಲ್ ಮಾಡೋದು ಅಂದ್ರೆ ಈ ರಾಶಿಯರಿಗೆ ತುಂಬಾನೆ ಇಷ್ಟವಾಗುತ್ತಿತ್ತು. ಇವರು ಹೆಚ್ಚಾಗಿ ಟ್ರಾವೆಲ್ ಮಾಡಿ ಖುಷಿ ಪಡುತ್ತಿದ್ದರು.
ಕುಂಭ (Aquarius): ನಿಮ್ಮ ಹಿಂದಿನ ಜೀವನದಲ್ಲಿ, ನೀವು ಅತ್ಯಂತ ಮಹತ್ವಾಕಾಂಕ್ಷೆಯ ಮತ್ತು ನಿಮ್ಮ ಕೆಲಸವನ್ನು ಹೇಗೆ ಮಾಡಬೇಕೆಂದು ತಿಳಿದಿರುವ ಅತ್ಯಂತ ದೃಢನಿಶ್ಚಯವುಳ್ಳ ವ್ಯಕ್ತಿಯಾಗಿದ್ದಿರಿ. ಶ್ರದ್ಧೆಯಿಂದ ಕೆಲಸ ಮಾಡುವ ವ್ಯಕ್ತಿತ್ವ ಇವರದ್ದಾಗಿತ್ತು.
ಮೀನ ರಾಶಿ (Pisces): ಮೀನ ರಾಶಿಯವರು ತಮ್ಮ ಹಿಂದಿನ ಜನ್ಮಗಳಲ್ಲಿ ದಂಗೆಕೋರರಾಗಿದ್ದರು. ಜಗಳ, ದರೋಡೆ, ಪ್ರತಿಭಟನೆ ಮೊದಲಾದ ಕೆಲಸಗಳಲ್ಲಿ ಇವರು ಎಂದಿಗೂ ಮುಂದೆ ಇದ್ದರು.