ಕನ್ಯಾರಾಶಿಯಲ್ಲಿ ಬುಧ ಪ್ರವೇಶ,ಈ ರಾಶಿಯವರಿಗೆ ರಾಜಯೋಗ,ಬಂಗಾರವಾಗುತ್ತೆ ಬದುಕು

First Published | Sep 29, 2023, 1:23 PM IST

ಅಕ್ಟೋಬರ್‌ 1 ರಂದು ರಾತ್ರಿ 8.39 ಕ್ಕೆ ಬುಧನು ಸಿಂಹ ರಾಶಿಯಿಂದ ಕನ್ಯಾರಾಶಿಗೆ ಪ್ರವೇಶಿಸುತ್ತಾನೆ. ಬುಧನ ಪ್ರವೇಶದಿಂದ ಭದ್ರ ರಾಜಯೋಗವು ರೂಪುಗೊಳ್ಳುತ್ತದೆ. ಅದಲ್ಲದೆ ಸೂರ್ಯ ಮತ್ತು ಬುಧ ಸಂಯೋಗ ಉಂಟಾಗುತ್ತದೆ. ಇದರಿಂದ ಬುಧಾದಿತ್ಯ ರಾಜಯೋಗವು ರೂಪುಗೊಳ್ಳುತ್ತದೆ.

ಕನ್ಯಾ ರಾಶಿಯಲ್ಲಿ ಬುಧ ಪ್ರವೇಶವು ಸಿಂಹ ರಾಶಿಯ ಜನರಿಗೆ ಮಂಗಳಕರವೆಂದು ಪರಿಗಣಿಸಲಾಗಿದೆ.ಹೂಡಿಕೆಗೆ ದೊಡ್ಡ ವ್ಯವಹಾರವನ್ನು ಪಡೆಯಬಹುದು. ಆರೋಗ್ಯದಲ್ಲೂ ಸುಧಾರಣೆ ಕಂಡುಬರಲಿದೆ. ಮಕ್ಕಳೊಂದಿಗೆ ಸಮಯ ಕಳೆಯುವುದು ನಿಮಗೆ ಒಳ್ಳೆಯದು. 

ಮಿಥುನ ರಾಶಿಯಲ್ಲಿ ರೂಪುಗೊಂಡ ಬುಧಾದಿತ್ಯ ರಾಜಯೋಗ ಮತ್ತು ಭದ್ರ ರಾಜಯೋಗವು ಇವರಿಗೆ ಪ್ರಯೋಜನಕಾರಿಯಾಗಿದೆ.ಕೆಲಸದ ನಿಮಿತ್ತ ವಿದೇಶ ಪ್ರವಾಸ ಮಾಡಬೇಕಾಗಬಹುದು.ಆರ್ಥಿಕವಾಗಿ ಲಾಭವಿರುತ್ತದೆ.ಈ ಸಮಯ ವಿದ್ಯಾರ್ಥಿಗಳಿಗೆ ಮಂಗಳಕರವಾಗಿದೆ.

Tap to resize

ಮಕರ ರಾಶಿಯವರಿಗೆ ಬುಧ ಸಂಚಾರದಿಂದ ಲಾಭವಾಗಲಿದೆ. ರಾಜಯೋಗದಿಂದ ನಿಮ್ಮ ಆದಾಯ ಹೆಚ್ಚುತ್ತದೆ. ಕುಟುಂಬದಲ್ಲಿ ಸಂತೋಷ ಮತ್ತು ಸಂಪತ್ತು ಇರುತ್ತದೆ. ಹಿಂದೆ ಮಾಡಿದ ಹೂಡಿಕೆಯಿಂದ ಒಳ್ಳೆ ಸುದ್ದಿ ಇರುತ್ತದೆ.

Latest Videos

click me!