ಈ ವಸ್ತುಗಳನ್ನುಬೆರೆಸಿ ಸೂರ್ಯನಿಗೆ ಅರ್ಘ್ಯ ನೀಡಿದ್ರೆ ಶೀಘ್ರ ವಿವಾಹ ಯೋಗ

First Published | Jun 19, 2023, 11:54 AM IST

ಸನಾತನ ಧರ್ಮದ ಪ್ರಕಾರ, ಸೂರ್ಯ ದೇವರು ನಿಜವಾದ ದೇವರು, ಅಂದರೆ, ನೀವು ಅವನನ್ನು ನಿಜವಾದ ರೂಪದಲ್ಲಿ ನೋಡಬಹುದು. ಸೂರ್ಯದೇವನನ್ನು ಎಲ್ಲಾ ರೋಗಗಳ ವಿನಾಶಕ ಎಂದು ಪರಿಗಣಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಸೂರ್ಯ ದೇವರಿಗೆ ನೀರನ್ನು ಅರ್ಪಿಸುವಾಗ, ಅದಕ್ಕೆ ಕೆಲವು ವಸ್ತುಗಳನ್ನು ಸೇರಿಸುವುದು ವಿಶೇಷ ಪ್ರಯೋಜನಗಳನ್ನು ನೀಡುತ್ತದೆ.

ಹಿಂದೂ ಧರ್ಮದಲ್ಲಿ (Hindu region), ಸೂರ್ಯನನ್ನು ದೇವರಂತೆ ಪೂಜಿಸಲಾಗುತ್ತದೆ. ಭಾನುವಾರವನ್ನು ಸೂರ್ಯ ದೇವರಿಗೆ ಸಮರ್ಪಿಸಲಾಗಿದೆ. ಈ ದಿನ, ನೀವು ಸೂರ್ಯನಿಗೆ ನೀರನ್ನು ಅರ್ಪಿಸಿದರೆ, ಸೂರ್ಯ ದೇವರ ವಿಶೇಷ ಕೃಪೆ ನಿಮ್ಮ ಮೇಲೆ ಉಳಿಯುತ್ತದೆ ಎಂದು ಹೇಳಲಾಗುತ್ತದೆ. ಬೆಳಿಗ್ಗೆ ನಿಮ್ಮ ದೇಹದಲ್ಲಿ ಶಾಂತಿ ಮತ್ತು ಶಕ್ತಿ ಇರುತ್ತೆ ಎಂದು ನಂಬಲಾಗಿದೆ, ಆದ್ದರಿಂದ ಈ ಸಮಯದಲ್ಲಿ ಅರ್ಘ್ಯವನ್ನು ನೀಡುವ ಸಂಪೂರ್ಣ ಪ್ರಯೋಜನವನ್ನು ನೀವು ಪಡೆಯುತ್ತೀರಿ.

ಹೂ ಬೆರೆಸಿದ ಅರ್ಘ್ಯ
ಸನಾತನ ಧರ್ಮದಲ್ಲಿ, ಹೂವು ಬಳಕೆಯು ವಿಶೇಷವಾಗಿ ದೇವರು ಮತ್ತು ದೇವತೆಗಳ ಪೂಜೆಯಲ್ಲಿದೆ. ಸೂರ್ಯ ದೇವರಿಗೆ ನೀರನ್ನು ಅರ್ಪಿಸುವಾಗ, ನೀರಿನ ಪಾತ್ರೆಯಲ್ಲಿ ಹೂವುಗಳನ್ನು ಹಾಕಬೇಕು. ಹೀಗೆ ಮಾಡೋದ್ರಿಂದ ನೀವು ಸೂರ್ಯದೇವನ (Surya Dev) ಆಶೀರ್ವಾದ ಪಡೆಯುತ್ತೀರಿ ಮತ್ತು ನಿಮ್ಮ ಎಲ್ಲಾ ಕಾರ್ಯಗಳು ಪೂರ್ಣಗೊಳ್ಳುತ್ತವೆ.

Tap to resize

ಸಂತೋಷ ಮತ್ತು ಶಾಂತಿಗಾಗಿ
ಅಕ್ಷತೆಯನ್ನು ಹಿಂದೂ ಧರ್ಮದಲ್ಲಿ ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಅಕ್ಷತೆಯನ್ನು ಮುಖ್ಯವಾಗಿ ದೇವರು ಮತ್ತು ದೇವತೆಗಳ ಪೂಜೆಯಲ್ಲಿ ಮತ್ತು ಯಾವುದೇ ಶುಭ ಕಾರ್ಯದಲ್ಲಿ ಬಳಸಲಾಗುತ್ತೆ. ಜ್ಯೋತಿಷ್ಯದ ಪ್ರಕಾರ, ನೀರಿನಲ್ಲಿ ಅಕ್ಕಿಯನ್ನು ಹಾಕಿ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸೋದ್ರಿಂದ, ಜೀವನದಲ್ಲಿ ಸಂತೋಷ ಮತ್ತು ಶಾಂತಿ ಸದಾ ಇರುತ್ತೆ.

ಕುಂಕುಮ ಹಾಕುವ ಮೂಲಕ ಅರ್ಘ್ಯ ಅರ್ಪಿಸಿ
ನೀರಿನಲ್ಲಿ ಸ್ವಲ್ಪ ಕುಂಕುಮ ಹಾಕುವ ಮೂಲಕ ಸೂರ್ಯನನ್ನು ಪೂಜಿಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯದ ಪ್ರಕಾರ, ಇದನ್ನು ಮಾಡುವುದರಿಂದ ಸೂರ್ಯನ ದೋಷಗಳು ನಿವಾರಣೆಯಾಗುತ್ತವೆ. ಇದು ಆರೋಗ್ಯವನ್ನು ಸಹ ಸುಧಾರಿಸುತ್ತದೆ. ಕುಂಕುಮದ ಕೆಂಪು ಬಣ್ಣವು ಸೂರ್ಯನ ಕಿರಣಗಳಿಗೆ ನಮ್ಮನ್ನು ಸಂಪರ್ಕಿಸುತ್ತದೆ ಮತ್ತು ಇದು ದೇಹದಲ್ಲಿ ರಕ್ತ ಪರಿಚಲನೆಯನ್ನು (blood circulation) ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.

ಮದುವೆಯ ಯೋಗ
ಅರಿಶಿನವನ್ನು (turmeric) ಸನಾತನ ಧರ್ಮದಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಅರಿಶಿನವನ್ನು ಮುಖ್ಯವಾಗಿ ಮದುವೆ ಮುಂತಾದ ಮಂಗಳ ಸಮಾರಂಭಗಳಲ್ಲಿ ಬಳಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ನೀರಿಗೆ ಅರಿಶಿನವನ್ನು ಸೇರಿಸಿ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸೋದರಿಂದ ಬೇಗನೆ ಮದುವೆಯಾಗುವ ಯೋಗ ಕೂಡಿ ಬರುತ್ತೆ.

ನೀರಿಗೆ ಕಲ್ಲು ಸಕ್ಕರೆ ಸೇರಿಸುವ ಪ್ರಯೋಜನಗಳು
ಕಲ್ಲು ಸಕ್ಕರೆಯನ್ನು ದೇವರ ಅರ್ಘ್ಯದಲ್ಲಿ ಬಳಸಲಾಗುತ್ತದೆ. ಪ್ರಸಾದದಲ್ಲಿ ಕಲ್ಲು ಸಕ್ಕರೆ ಅರ್ಪಿಸುವ ಮೂಲಕ ದೇವರು ಸಂತೋಷಪಡುತ್ತಾನೆ ಎಂದು ನಂಬಲಾಗಿದೆ. ಜ್ಯೋತಿಷ್ಯದ ಪ್ರಕಾರ, ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವಾಗ, ನೀರಿನೊಂದಿಗೆ ಕಲ್ಲುಸಕ್ಕರೆ ಬೆರೆಸಿದ ನೀರನ್ನು ಅರ್ಪಿಸುವುದು ಸೂರ್ಯ ದೇವರ ಅನುಗ್ರಹ ಹೆಚ್ಚುವಂತೆ ಮಾಡುತ್ತೆ. ಇದು ನಿಮ್ಮ ಜೀವನದಲ್ಲಿ ಸಂತೋಷವನ್ನು ಸಹ ಇಡುತ್ತದೆ.

Latest Videos

click me!