ಶನಿ ದೇವನು (Shani Dev) ನ್ಯಾಯವನ್ನು ನೀಡುವವನು ಎಂದು ಹೇಳಲಾಗುತ್ತದೆ. ಶನಿ ದೇವನು ಒಬ್ಬ ವ್ಯಕ್ತಿಗೆ ಅವನ ಕಾರ್ಯಗಳಿಗೆ ಅನುಗುಣವಾಗಿ ಫಲಗಳನ್ನು ನೀಡುತ್ತಾನೆ. ಶನಿಯು ಯಾವುದೇ ವ್ಯಕ್ತಿಯನ್ನು ಆತನ ಕಾರ್ಯಗಳಿಂದ ರಾಜನನ್ನಾಗಿ ಅಥವಾ ಕಡು ಬಡವನನ್ನಾಗಿಯೂ ಮಾಡಬಹುದು. ಆದ್ದರಿಂದ, ನಿಮ್ಮ ಕಾರ್ಯಗಳನ್ನು ಉತ್ತಮವಾಗಿಡುವುದು ಬಹಳ ಮುಖ್ಯ.
ಶನಿ ದೇವರನ್ನು ಮೆಚ್ಚಿಸಲು ಶನಿವಾರ ಅತ್ಯಂತ ಪ್ರಮುಖ ದಿನ. ಈ ದಿನ ಶನಿ ದೇವರನ್ನು ಪೂಜಿಸುವುದರ ಜೊತೆಗೆ, ಕೆಲವು ವಿಷಯಗಳನ್ನು ನೋಡಿಕೊಳ್ಳಬೇಕು. ನೀವು ಶನಿವಾರ ರಾತ್ರಿ (Saturday night) ಕೆಲವೊಂದು ಕೆಲಸಗಳನ್ನು ಮಾಡಲೇಬಾರದು. ಈ ಕೆಲಸಗಳನ್ನು ಮಾಡಿದ್ರೆ ಶನಿಯ ಕೆಟ್ಟ ಪರಿಣಾಮ ಎದುರಿಸಬೇಕಾಗಿ ಬರುತ್ತೆ. ಅವುಗಳ ಬಗ್ಗೆ ತಿಳಿಯೋಣ.
ಮಾಂಸ, ಆಲ್ಕೋಹಾಲ್ ಮತ್ತು ತಾಮಸಿಕ ಆಹಾರವನ್ನು ತಪ್ಪಿಸಿ: ಜ್ಯೋತಿಷ್ಯದ ಪ್ರಕಾರ, ವ್ಯಕ್ತಿಯು ಶನಿವಾರ ರಾತ್ರಿ ತಾಮಸಿಕ ಆಹಾರವನ್ನು (Tamasik food) ತಿನ್ನುವುದನ್ನು ತಪ್ಪಿಸಬೇಕು. ಅಲ್ಲದೆ, ನೀವು ಮಾಂಸ ಮತ್ತು ಆಲ್ಕೋಹಾಲ್ ನಿಂದ ದೂರವಿರಬೇಕು. ತಾಮಸಿಕ ಆಹಾರವನ್ನು ಸೇವಿಸುವ ಜನರು ಶನಿಯ ಅಶುಭ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ವಿಶೇಷವಾಗಿ ಶನಿಯ ಸ್ಥಾನದಲ್ಲಿರುವ ವ್ಯಕ್ತಿಯು ಶನಿವಾರ ತಾಮಸಿಕ ಆಹಾರವನ್ನು ಸೇವಿಸಬಾರದು.
ಶನಿವಾರ ಜೂಜಾಟ, ಬೆಟ್ಟಿಂಗ್ ಆಡಬೇಡಿ: ಜೂಜಾಟ ಮತ್ತು ಬೆಟ್ಟಿಂಗ್ (betting) ಅಭ್ಯಾಸವನ್ನು ಹೊಂದಿರುವವರು ಶನಿ ದೇವರ ಅಶುಭ ಪರಿಣಾಮಗಳನ್ನು ಸಹ ಎದುರಿಸಬೇಕಾಗುತ್ತದೆ. ವಿಶೇಷವಾಗಿ ಶನಿವಾರ, ನೀವು ಈ ರೀತಿಯ ಅಭ್ಯಾಸಗಳಿಂದ ದೂರವಿರಲೇಬೇಕು.
ಮನೆಯ ಹಿರಿಯರಿಗೆ ಅಗೌರವ ತೋರಿಸಬೇಡಿ: ಯಾರನ್ನಾದರೂ ಅಗೌರವಿಸುವ ಜನರ ಮೇಲೆ ಶನಿ ತುಂಬಾ ಕೋಪಗೊಳ್ಳುತ್ತಾನೆ. ವಿಶೇಷವಾಗಿ ನಿಮ್ಮ ಮನೆಯಲ್ಲಿರುವ ಹಿರಿಯರಿಗೆ ಅಗೌರವ ತೋರಿಸಬೇಡಿ. ಅಲ್ಲದೆ, ಯಾವುದೇ ಸಣ್ಣ ಉದ್ಯೋಗಿಗಳೊಡನೆ ಕೆಟ್ಟದಾಗಿ ವರ್ತಿಸಬೇಡಿ. ನೀವು ಶನಿವಾರ ಮನೆಯಿಂದ ಹೊರಬಂದಾಗಲೆಲ್ಲಾ, ಹಿರಿಯರ ಆಶೀರ್ವಾದದೊಂದಿಗೆ ಹೊರಡಿ.
ಶನಿವಾರ ಕಬ್ಬಿಣ, ಎಣ್ಣೆ, ಕಪ್ಪು ಬಟ್ಟೆ, ಎಳ್ಳನ್ನು ತೆಗೆದುಕೊಳ್ಳಬೇಡಿ: ಶನಿವಾರ ಕಬ್ಬಿಣ, ಎಣ್ಣೆ, ಕಪ್ಪು ಬಟ್ಟೆಗಳನ್ನು (black dress) ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ, ಆದರೆ ಶನಿವಾರ ಈ ಎಲ್ಲಾ ವಸ್ತುಗಳನ್ನು ಯಾರಿಂದಲೂ ಎರವಲು ಪಡೆಯಬೇಡಿ ಅಥವಾ ನೀವೇ ಖರೀದಿಸಬೇಡಿ. ನಂಬಿಕೆಗಳ ಪ್ರಕಾರ, ಶನಿವಾರ ಈ ಯಾವುದೇ ವಸ್ತುಗಳನ್ನು ಶಾಪಿಂಗ್ ಮಾಡೋದ್ರಿಂದ ವ್ಯಕ್ತಿಯು ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ.
ಶನಿವಾರ ಸಂಜೆ ಯಾರೊಂದಿಗೂ ವಹಿವಾಟು ನಡೆಸಬೇಡಿ: ನಂಬಿಕೆಗಳ ಪ್ರಕಾರ, ಯಾವುದೇ ವ್ಯಕ್ತಿಯು ಶನಿವಾರದಂದು ಸಾಲ (loan) ನೀಡುವ ವಹಿವಾಟುಗಳನ್ನು ಮಾಡುವುದನ್ನು ತಪ್ಪಿಸಬೇಕು. ಶನಿ ಹಣ ಸಾಲ ಕೊಟ್ಟರೆ ಆ ಹಣ ಏನಾದರು ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಳ್ಳಬಹುದು ಅಥವಾ ಹಣವನ್ನು ಮರಳಿ ಪಡೆಯದಿರುವ ಚಾನ್ಸಸ್ ಕೂಡ ಇದೆಯಂತೆ.