ಕನಸಲ್ಲಿ ನಗ್ನ ವ್ಯಕ್ತಿಯನ್ನು ನೋಡೋದರ ಅರ್ಥವೇನು?

Published : Nov 20, 2023, 02:35 PM IST

ಕನಸಿನಲ್ಲಿ ಏನನ್ನಾದರೂ ನೋಡುವುದು ವಿಶೇಷ ಅರ್ಥವನ್ನು ಹೊಂದಿದೆ. ಹೆಣ ನೋಡಿದ್ರೆ ಶುಭ, ರಕ್ತ ನೋಡಿದ್ರೆ ಅಶುಭ ಎಂದೆಲ್ಲಾ ಹೇಳಲಾಗುವುದು. ಆದರೆ ಕನಸಿನಲ್ಲಿ ನಗ್ನ ವ್ಯಕ್ತಿಯನ್ನು ನೋಡುವುದರ ಅರ್ಥವೇನು ಗೊತ್ತಾ?   

PREV
18
ಕನಸಲ್ಲಿ ನಗ್ನ ವ್ಯಕ್ತಿಯನ್ನು ನೋಡೋದರ ಅರ್ಥವೇನು?

ಜ್ಯೋತಿಷ್ಯ ಶಾಸ್ತ್ರದಲ್ಲಿ (Atrology) ಕನಸುಗಳಿಗೆ ವಿಶೇಷ ಅರ್ಥವಿದೆ. ಹೆಚ್ಚಾಗಿ ನಾವು ಕನಸಿನಲ್ಲಿ ಏನೇನೋ ನೋಡುತ್ತೇವೆ. ಈ ಕನಸುಗಳಲ್ಲಿ ಒಂದು ನಗ್ನ ವ್ಯಕ್ತಿಯನ್ನು ಅಂದರೆ ಬಟ್ಟೆಯಿಲ್ಲದ ವ್ಯಕ್ತಿಯನ್ನು ನೋಡುವುದು, ಇದು ಕೆಲವು ಶುಭ ಮತ್ತು ಅಶುಭ ಚಿಹ್ನೆಗಳನ್ನು ನೀಡುತ್ತದೆ. ಅದರ ಬಗ್ಗೆ ತಿಳಿಯೋಣ. 

28

ವಿಷಯವನ್ನು ಮರೆಮಾಚುತ್ತಿದ್ದೀರಿ ಎಂದರ್ಥ
ಕನಸಿನಲ್ಲಿ ನಿಮ್ಮನ್ನು ನಗ್ನವಾಗಿ (naked person) ನೋಡುವುದು ಎಂದರೆ ನೀವು ನಿಮ್ಮ ಹತ್ತಿರದ ಯಾರಿಂದಲಾದರೂ ದೊಡ್ಡ ವಿಷಯವನ್ನು ಮರೆಮಾಡುತ್ತಿದ್ದೀರಿ ಎಂದರ್ಥ. ಅಂತಹ ಕನಸು ಮತ್ತೆ ಮತ್ತೆ ಬಂದರೆ, ರಹಸ್ಯವನ್ನು ಅವರ ಬಳಿ ಹೇಳೋದು ಉತ್ತಮ.       

38

ಮಾನಸಿಕ ಉದ್ವೇಗ
ಅನೇಕ ಬಾರಿ ಅಂತಹ ಕನಸು ಎಂದರೆ ನೀವು ಮಾನಸಿಕ ಒತ್ತಡವನ್ನು (Mental Stress) ಹೊಂದಿದ್ದೀರಿ ಎಂದರ್ಥ. ಈ ರೀತಿಯ ಕನಸು ನಿಮ್ಮ ಕಳಪೆ ಮಾನಸಿಕ ಸ್ಥಿತಿಯನ್ನು (mental stress) ಸೂಚಿಸುತ್ತದೆ.  ಆದುದರಿಂದ ಅಂತಹ ಮಾನಸಿಕ ಉದ್ವೇಗದಿಂದ ಹೊರಬನ್ನಿ.

48

ಅಭದ್ರತೆಯ ಸಂಕೇತ  
ಬಟ್ಟೆಗಳಿಲ್ಲದ ವ್ಯಕ್ತಿಯ ಬಗ್ಗೆ ನೀವು ಕನಸು ಕಂಡರೆ, ನೀವು ಅಸುರಕ್ಷಿತ ಭಾವನೆ (insecure feel) ಹೊಂದಿದ್ದೀರಿ ಎಂದರ್ಥ. ಈ ಕನಸು ಮಾನಸಿಕ ಸ್ಥಿತಿಯನ್ನು ಸೂಚಿಸುತ್ತದೆ.  ಅಂತಹ ಅಸುರಕ್ಷಿತ ಭಾವನೆಗಳಿಂದ ಹೊರಬರಲು ಟ್ರೈ ಮಾಡಿ. 

58

ದೌರ್ಬಲ್ಯವನ್ನು ಸೂಚಿಸುವುದು 
ಕನಸಿನಲ್ಲಿ (dream) ನಿಮ್ಮನ್ನು ನಗ್ನವಾಗಿ ನೋಡುವುದು ನಿಮ್ಮ ದೌರ್ಬಲ್ಯಗಳನ್ನು (weakness) ಬಹಿರಂಗಪಡಿಸುತ್ತದೆ. ನೀವು ಮುಜುಗರಕ್ಕೊಳಗಾಗಿರಬಹುದು ಮತ್ತು ನಿಮ್ಮ ಮನಸ್ಸಿನಲ್ಲಿ ದ್ರೋಹದ ಭಯವನ್ನು ಹೊಂದಿರಬಹುದು. 
 

68

ಹಣದ ಲಾಭ 
ಕನಸಿನಲ್ಲಿ ನಿಮ್ಮನ್ನು ನಗ್ನವಾಗಿ ನೋಡುವುದು ಯಾವಾಗಲೂ ನಕಾರಾತ್ಮಕ ಸಂಕೇತವನ್ನು (negative effect) ನೀಡುವುದಿಲ್ಲ. ಅಂತಹ ಕನಸು ದಾನದ ಫಲಿತಾಂಶಗಳನ್ನು ಸಹ ತರುತ್ತದೆ. ಅಂದರೆ ಇದರಿಂದ ಹಣದ ಲಾಭ ಸಹ ಉಂಟಾಗುತ್ತದೆ. 

78

ನಕಾರಾತ್ಮಕ ಪರಿಸ್ಥಿತಿ  
ಅನೇಕ ಬಾರಿ ಕನಸಿನಲ್ಲಿ ನಿಮ್ಮನ್ನು ನಗ್ನವಾಗಿ ನೋಡುವುದು ಮಿಶ್ರ ಚಿಹ್ನೆಗಳನ್ನು ತರುತ್ತದೆ. ಅಂತಹ ಕನಸು ಕೆಲವೊಮ್ಮೆ ನಕಾರಾತ್ಮಕ ಪರಿಸ್ಥಿತಿಯನ್ನು (negative situation) ಸಹ ಸೂಚಿಸುತ್ತದೆ. ಇದರ ಬಗ್ಗೆ ನೀವು ಎಚ್ಚರಿಕೆಯಿಂದ ಇರಬೇಕು. 

88

ಕಳಪೆ ಆರ್ಥಿಕ ಸ್ಥಿತಿ 
ಕನಸಿನಲ್ಲಿ ನಗ್ನ ವ್ಯಕ್ತಿಯನ್ನು (naked person) ನೋಡುವುದು ಕಳಪೆ ಆರ್ಥಿಕ ಸ್ಥಿತಿಯ ಸಂಕೇತ. ಅಂತಹ ಕನಸು ಹಣದ ನಷ್ಟವನ್ನು ಸೂಚಿಸುತ್ತದೆ. ಇದು ಭವಿಷ್ಯದಲ್ಲಿ ಹಾನಿಯನ್ನುಂಟು ಮಾಡುತ್ತದೆ. 

click me!

Recommended Stories