ಮಂಗಳಮುಖಿಯರು ನಿಮ್ಮ ತಲೆ ಮೇಲೆ ಕೈ ಇಟ್ಟರೆ ಅದೃಷ್ಟವೋ ಅಂತಾರಲ್ಲಿ ಹೌದಾ?

First Published | Apr 23, 2024, 6:39 PM IST

ಹಿಂದೂ ಧರ್ಮದಲ್ಲಿ ಮಂಗಳಮುಖಿಯರಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಮಂಗಳಮುಖಿಯರು ನಿಮ್ಮ ತಲೆ ಮೇಲೆ ಕೈ ಇಟ್ಟರೆ ಅದರಿಂದ ಜೀವನದಲ್ಲಿ ಬಹಳ ಬದಲಾವಣೆ ಆಗುತ್ತದೆ ಎಂದು ಹೇಳಲಾಗುತ್ತದೆ. ಏನು ಬದಲಾಗುತ್ತೆ ನೋಡೋಣ. 
 

ಹಿಂದೂ ಧರ್ಮದಲ್ಲಿ ತೃತೀಯ ಲಿಂಗಿಗಳಿಗೆ (transgender) ವಿಶೇಷ ಮಹತ್ವವಿದೆ. ಅವರ ಇತಿಹಾಸ ಬಹಳ ಹಳೆಯದು. ಮಂಗಳಮುಖಿಯರು ಯಾರನ್ನಾದರೂ ಸಂತೋಷದಿಂದ ಆಶೀರ್ವದಿಸಿದರೆ, ಅವನ ಅದೃಷ್ಟ ರಾತ್ರೋರಾತ್ರಿ ಬದಲಾಗುತ್ತದೆ. ಮಂಗಳಮುಖಿಯರು ಇನ್ನೊಬ್ಬರ ತಲೆ ಮೇಲೆ ಕೈ ಇಟ್ಟರೆ, ಆ ವ್ಯಕ್ತಿಯು ಶ್ರೀಮಂತನಾಗುತ್ತಾನೆ ಎನ್ನುವ ನಂಬಿಕೆ ಇದೆ. ಇದರಿಂದ ಬೇರೆ ಏನೇನು ಆಗುತ್ತದೆ ನೋಡೋಣ. 
 

ಆಸೆ ಈಡೇರುತ್ತದೆ
ಒಬ್ಬ ಮಂಗಳಮುಖಿಯರು ಸಂತೋಷದಿಂದ ನಿಮ್ಮ ತಲೆ ಮೇಲೆ ಕೈಯಿಟ್ಟು ನಿಮ್ಮನ್ನು ಆಶೀರ್ವದಿಸಿದರೆ, ಅದರಿಂದ ನಿಮ್ಮ ಪ್ರತಿಯೊಂದು ಆಸೆ ಪೂರೈಕೆಯಾಗುತ್ತದೆ. ಮಂಗಳಮುಖಿಯರ ಆಶೀರ್ವಾದ ಬಹಳ ಬೇಗ ಈಡೇರುತ್ತದೆ. 

Tap to resize

ಬುಧ ಬಲಶಾಲಿಯಾಗುತ್ತಾನೆ
ಮಂಗಳಮುಖಿಯರು ನಿಮ್ಮ ತಲೆ ಮೇಲೆ ಕೈ ಇಟ್ಟರೆ, ಅದು ನಿಮ್ಮ ಜಾತಕದಲ್ಲಿ ಬುಧ ಗ್ರಹದ ಸ್ಥಾನವನ್ನು ಬಲಪಡಿಸುತ್ತದೆ. ಇದರಿಂದ  ಶುಭ ಫಲಿತಾಂಶ ನಿಮ್ಮದಾಗುತ್ತೆ. 

ಹಣದ ಕೊರತೆ ನಿವಾರಣೆ
ಮಂಗಳಮುಖಿಯರು ಆರ್ಥಿಕ ಬಿಕ್ಕಟ್ಟನ್ನು (Financial Crisis) ಎದುರಿಸುತ್ತಿರುವ ವ್ಯಕ್ತಿಯ ತಲೆ ಮೇಲೆ ಕೈ ಇಟ್ಟರೆ, ಅವನ ಆರ್ಥಿಕ ಸಮಸ್ಯೆಗಳು ಬೇಗ ನಿವಾರಣೆಯಾಗುತ್ತೆ. ಈ ಕಾರಣದಿಂದಾಗಿ, ಲಕ್ಷ್ಮಿ ದೇವಿಯ (Goddess Lakshmi) ಕೃಪೆಯೂ ವ್ಯಕ್ತಿ ಮೇಲೆ ಉಳಿಯುತ್ತದೆ. 

ರೋಗಗಳಿಂದ ಪರಿಹಾರ 
ಯಾರಾದರೂ ದೀರ್ಘಕಾಲದಿಂದ ಅನಾರೋಗ್ಯದಿಂದ (health issues) ಬಳಲುತ್ತಿದ್ದರೆ ಮತ್ತು ಅಂತಹ ವ್ಯಕ್ತಿ ತಲೆಯ ಮೇಲೆ ಮಂಗಳಮುಖಿಯರು ಕೈಯನ್ನು ಇಟ್ಟರೆ, ಅವರು ರೋಗಗಳಿಂದ ಮುಕ್ತರಾಗಬಹುದು. ಇದರಿಂದ ಅವರ ಆರೋಗ್ಯವೂ ಉತ್ತಮವಾಗುತ್ತದೆ.

ಮದುವೆಯ ಯೋಗ ನಿಮ್ಮದಾಗುವುದು
ಏನೇ ಮಾಡಿದರೂ ನಿಮ್ಮ ಮದುವೆ (marriage) ಆಗದೇ ಇದ್ದರೆ, ಮಂಗಳಮುಖಿಯರ ಆಶೀರ್ವಾದ ನಿಮ್ಮ ಅದೃಷ್ಟವನ್ನು (Luck) ಬದಲಾಯಿಸಬಹುದು. ಅವರ ಆಶೀರ್ವಾದದಿಂದ, ನಿಮ್ಮ ವಿವಾಹವು ಸಾಧ್ಯವಾಗುತ್ತದೆ. 

ಅದೃಷ್ಟವು ಬಲವಾಗಿರುತ್ತದೆ
ಮಂಗಳಮುಖಿಯರು ತನ್ನ ಕೈಯನ್ನು ನಿಮ್ಮ ತಲೆ ಮೇಲೆ ಇಟ್ಟರೆ, ಅದು ನಿಮ್ಮ ಅದೃಷ್ಟವನ್ನು ಹೆಚ್ಚಿಸುತ್ತದೆ. ಇದು ಅದೃಷ್ಟ ಹೆಚ್ಚಿಸುತ್ತದೆ ಮತ್ತು ಯಶಸ್ಸಿಗೆ ಕಾರಣವಾಗುತ್ತದೆ.  
 

ಯಶಸ್ಸು ನಿಮ್ಮದಾಗುತ್ತದೆ
ನೀವು ಯಶಸ್ಸನ್ನು ಪಡೆಯದಿದ್ದರೆ, ಮಂಗಳಮುಖಿಯರ ಆಶೀರ್ವಾದವು ನಿಮ್ಮ ಯಶಸ್ಸಿಗೆ (success) ದಾರಿ ಮಾಡಿ ಕೊಡುತ್ತದೆ. ಇದು ನಿಮ್ಮನ್ನು ಪ್ರಗತಿಯತ್ತ ಕೊಂಡೊಯ್ಯುತ್ತದೆ.  

Latest Videos

click me!