ಈ ಕೆಟ್ಟ ಬುದ್ಧಿ ಇರೋರು ಹನಮಂತನ ಕೃಪೆಗೆ ಪಾತ್ರರಾಗಲು ಆಗೋದೇ ಇಲ್ಲ ಬಿಡಿ!

First Published | Apr 23, 2024, 5:28 PM IST

ಇಂದು ಹನುಮಾನ್ ಜಯಂತಿ, ನೀವು ಸಹ ರಾಮ ಭಕ್ತ ಹನುಮಂತನನ್ನು ಮೆಚ್ಚಿಸಬೇಕು ಅಂತ ಬಯಸಿದ್ರೆ ಕೆಲವೊಂದು ಗುಣಗಳನ್ನು ನೀವು ಬದಲಾಯಿಸಬೇಕು. ಹಾಗಿದ್ರೆ ಮಾತ್ರ ಹನುಮಂತನ ಕೃಪೆ ಪಡೆಯೋಕೆ ಸಾಧ್ಯ. 
 

ಇಂದು, ಏಪ್ರಿಲ್ 23, 2024 ರ ಮಂಗಳವಾರ, ಹನುಮಾನ್ ಜಯಂತಿಯನ್ನು (Hanuman Jayanthi) ದೇಶಾದ್ಯಂತ ಬಹಳ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಬಾರಿ ಹನುಮಾನ್ ಜಯಂತಿ ಮಂಗಳವಾರ ಬರುತ್ತಿದೆ, ಆದ್ದರಿಂದ ಈ ಹಬ್ಬವು ಇನ್ನಷ್ಟು ವಿಶೇಷವಾಗಲಿದೆ. ಈ ವಿಶೇಷ ದಿನದಂದು ಹನುಮಂತನಿಗೆ ಯಾವ ವ್ಯಕ್ತಿಯ ಮೇಲೆ ಕೋಪ ಬರುತ್ತದೆ, ಯಾವ ಕೆಲಸ ಮಾಡಬಾರದು ಅನ್ನೋದನ್ನು ತಿಳಿಯೋಣ.
 

ಬಜರಂಗಬಲಿಯಿಂದ ಆಶೀರ್ವದಿಸಲ್ಪಟ್ಟ ಯಾವುದೇ ವ್ಯಕ್ತಿಯು ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರೋದಿಲ್ಲ. ಅದೇ ಸಮಯದಲ್ಲಿ, ಮಂಗಳವಾರವನ್ನು ಭಜರಂಗಬಲಿಯ ಆಶೀರ್ವಾದ (blessings from Hanuman) ಪಡೆಯಲು ಉತ್ತಮ ದಿನವೆಂದು ಪರಿಗಣಿಸಲಾಗಿದೆ.ಈ ದಿನ ನೀವು ಹನುಮಂತನನ್ನು ಪೂಜಿಸಿದರೆ ಎಲ್ಲವೂ ಒಳ್ಳೆಯದಾಗುತ್ತದೆ. ಆದರೆ ನಿಮ್ಮಲ್ಲಿ ಕೆಲವೊಂದು ಗುಣಗಳಿದ್ದರೆ, ಅಂತವರ ಮೇಲೆ ಹನುಮಂತ ಕೋಪಗೊಳ್ಳುತ್ತಾನೆ. 
 

Tap to resize

ಅಹಾಂಕರದಿಂದ ತುಂಬಿದ ಜನರು
ಅಹಂಕಾರದಿಂದ (ego) ತುಂಬಿದ ಜನರನ್ನು ಆಂಜನೇಯ ಎಂದಿಗೂ ಅನುಗ್ರಹಿಸೋದಿಲ್ಲ.  ಅಲ್ಲದೆ, ತಮ್ಮನ್ನು ತಾವು ದೊಡ್ಡವರು ಮತ್ತು ಇತರರು ಚಿಕ್ಕವರು ಎಂದು ಭಾವಿಸುವವರ ಬಗ್ಗೆಯೂ ಹನುಮಂತ ಕೋಪಗೊಳ್ಳುತ್ತಾನೆ. 
 

ಈ ಕೆಲಸವನ್ನು ಮಾಡಬೇಡಿ
ನಂಬಿಕೆಗಳ ಪ್ರಕಾರ, ಇತರರನ್ನು ನೋಡಿ ಅಸೂಯೆಪಡುವ ಮತ್ತು ಇತರರ ಯಶಸ್ಸನ್ನು ನೋಡಿ ಅಸೂಯೆಪಡುವ ಜನರು ಹನುಮಂತನ ಕೋಪವನ್ನು(angry of Hanuman) ಸಹ ಎದುರಿಸಬೇಕಾಗುತ್ತದೆ. ಆದ್ದರಿಂದ, ಒಬ್ಬರು ಎಂದಿಗೂ ಇತರರ ಬಗ್ಗೆ ಅಸೂಯೆ ಪಡಬಾರದು.

ಇಂತಹ ಆಲೋಚನೆಗಳಿಂದ ದೂರ ಇರಿ
ಯಾವಾಗಲೂ ನಕಾರಾತ್ಮಕ ವಿಷಯಗಳ (negative things) ಬಗ್ಗೆ ಯೋಚಿಸುವ ಮತ್ತು ಇತರರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಜನರ ಮೇಲೆ ಹನುಮಂತ ಕೋಪಗೊಳ್ಳುತ್ತಾನೆ. ಈ ಕಾರಣದಿಂದಾಗಿ ಈ ಜನರು ಹನುಮಂತನ ಅನುಗ್ರಹವನ್ನು ಎಂದಿಗೂ ಪಡೆಯುವುದಿಲ್ಲ. ಆದ್ದರಿಂದ, ನೀವು ಈ ಅಭ್ಯಾಸವನ್ನು ಆದಷ್ಟು ಬೇಗ ಬಿಡಬೇಕು.
 

ಈ ಅಭ್ಯಾಸಗಳನ್ನು ಸುಧಾರಿಸಿ
ಜೀವನದಲ್ಲಿ ಮುಂದೆ ಸಾಗುವ ಬಗ್ಗೆ ತಲೆಕೆಡಿಸಿಕೊಳ್ಳದವರ ಮೇಲೆ ಆಂಜನೇಯನ ಅನುಗ್ರಹ ಇರೋದೆ ಇಲ್ಲ. ಅಷ್ಟೇ ಅಲ್ಲ ಹನುಮಂತ ಯಾವಾಗಲೂ ಧರ್ಮದ ಮಾರ್ಗವನ್ನು ಅನುಸರಿಸದ ಮತ್ತು ಇತರರಿಗೆ ಕಿರುಕುಳ ನೀಡುವ ಅಥವಾ ತಪ್ಪು ಕೆಲಸಗಳನ್ನು ಮಾಡುವವರ ಮೇಲೆ ಕೋಪಗೊಳ್ಳುತ್ತಾರೆ.

ನಿಮ್ಮ ಸ್ವಭಾವವನ್ನು ಬದಲಿಸಿ
ನೀವು ಸಹ ನಿಮ್ಮ ಜೀವನದಲ್ಲಿ ಹನುಮಂತನ ಅನುಗ್ರಹವನ್ನು ಬಯಸಿದರೆ, ಹಿರಿಯರನ್ನು ಎಂದಿಗೂ ಅವಮಾನಿಸಬೇಡಿ, ಅನಗತ್ಯವಾಗಿ ಕೋಪಗೊಳ್ಳಬೇಡಿ. ಏಕೆಂದರೆ ಈ ಸ್ವಭಾವದ ವ್ಯಕ್ತಿಯನ್ನು ಆಂಜನೇಯ ಇಷ್ಟ ಪಡೋದಿಲ್ಲ.
 

Latest Videos

click me!