ಗರುಡ ಪುರಾಣದಲ್ಲಿ ತಿಳಿಸಿದ ಈ ಅಭ್ಯಾಸ ಶ್ರೀಮಂತನನ್ನೂ ಸಹ ಬಡವನನ್ನಾಗಿಸುತ್ತೆ!

Published : Dec 10, 2023, 05:29 PM IST

ಗರುಡ ಪುರಾಣದಲ್ಲಿ ನಮ್ಮ ಜೀವನದಲ್ಲಿ ಹೇಗಿರಬೇಕು? ಏನು ಮಾಡಿದರೆ ಏನು ಶಿಕ್ಷೆ ಅನುಭವಿಸಬೇಕಾಗಿ ಬರುತ್ತೆ ಅನ್ನೋದರ ಬಗ್ಗೆ ಎಲ್ಲಾ ವಿವರವಾಗಿ ಹೇಳಲಾಗಿದೆ. ಅದರಲ್ಲೂ ಕೆಲವೊಂದು ಅಭ್ಯಾಸಗಳನ್ನು ನಾವು ಪಾಲಿಸಿದರೆ ಅದರಿಂದ ಶ್ರೀಮಂತ ಸಹ ಬಡವನಾಗುತ್ತಾನೆ ಎಂದು ತಿಳಿಸಿದೆ. ಅಂತಹ ಅಭ್ಯಾಸ ಯಾವುದು ಅನ್ನೋದನ್ನು ತಿಳಿಯೋಣ. 

PREV
16
ಗರುಡ ಪುರಾಣದಲ್ಲಿ ತಿಳಿಸಿದ ಈ ಅಭ್ಯಾಸ ಶ್ರೀಮಂತನನ್ನೂ ಸಹ ಬಡವನನ್ನಾಗಿಸುತ್ತೆ!

ಗರುಡ ಪುರಾಣವು (Garuda Purana) ಹಿಂದೂ ಧರ್ಮದ ಪ್ರಮುಖವಾದ ಪುರಾಣಗಳಲ್ಲಿ ಒಂದಾಗಿದೆ. ಇದರಿಂದ ಮಾನವರು ಕೆಲವೊಂದು ಅಭ್ಯಾಸಗಳನ್ನು ಪಾಲಿಸಬಾರದು ಎಂದು ಹೇಳುತ್ತಾರೆ. ಅಲ್ಲದೇ ಕೆಲವೊಂದು ಅಭ್ಯಾಸಗಳನ್ನು ಪಾಲಿಸಿದರೆ, ಜೀವನದಲ್ಲಿ ನೆಮ್ಮದಿಯೇ ಇಲ್ಲದಂತಾಗುತ್ತೆ, ಜೊತೆಗೆ ಶ್ರೀಮಂತ ಸಹ ಬಡವನಾಗುವಂತೆ ಮಾಡುತ್ತದೆ ಎಂದು ತಿಳಿಸಿದೆ. 

26

ಹಾಗಿದ್ರೆ ಯಾವೆಲ್ಲಾ ವಿಷಯಗಳು ಶ್ರೀಮಂತನನ್ನೂ ಸಹ ಬಡವನನ್ನಾಗಿ ಮಾಡುತ್ತೆ ಅನ್ನೋದನ್ನು ತಿಳಿಯೋಣ : 
ದಾನ ಮಾಡುವುದು ಪ್ರತಿಯೊಬ್ಬ ಮನುಷ್ಯನ ಧರ್ಮವಾಗಿದೆ. ಒಂದು ವೇಳೆ ದಾನ ಮಾಡದೇ ಇದ್ದರೆ ಸಮಸ್ಯೆಗಳು ಹೆಚ್ಚಾಗುತ್ತಂತೆ. ಅಲ್ಲದೇ ಶ್ರೀಮಂತನೂ (rich person) ಬಡವನಾಗುತ್ತಾನೆ ಎನ್ನುತ್ತೆ ಗರುಡಪುರಾಣ. 

36

ಯಾವ ವ್ಯಕ್ತಿ ದಾನ (donate) ಮಾಡೋದೆ ಇಲ್ಲವೋ, ಅಂತಹ ವ್ಯಕ್ತಿ ಎಷ್ಟು ಬೇಕಾದರೂ ಸಂಪಾದನೆ ಮಾಡಲು, ಎಂತದ್ದೇ ಸಂಪಾದನೆ ಮಾಡಿದರೂ ಸಹ ಹಣದ ಕೊರತೆ ಕಾಡದೇ ಇರೋದಿಲ್ಲವಂತೆ. ಜೊತೆಗೆ ಚಿಂತೆ ಸಹ ಅವರನ್ನು ಕಾಡುತ್ತದೆ. 

46

ಇನ್ನು ಯಾವತ್ತೂ ಶ್ರೀಮಂತ ವ್ಯಕ್ತಿ ಕಂಜೂಸ್ ಅಥವಾ ಜಿಪುಣರಂತೆ ವರ್ತಿಸಬಾರದು ಎಂದು ಗರುಡ ಪುರಾಣ ಹೇಳುತ್ತೆ. ಯಾಕೆಂದರೆ ಜಿಪುಣ ವ್ಯಕ್ತಿಯು ಎಷ್ಟೇ ಶ್ರೀಮಂತನಾಗಿದ್ದರೂ ಅವನು ಬಡವನಿಗೆ ಸಮಾನನಾಗಿರುತ್ತಾನೆ. 

56

ಅಷ್ಟೇ ಅಲ್ಲ ಯಾವ ವ್ಯಕ್ತಿಗೆ ಹಣದ ಬಗ್ಗೆ ಹೆಚ್ಚು ಅಹಂಕಾರ ಇರುತ್ತದೆಯೋ, ಅಂತಹ ವ್ಯಕ್ತಿಯ ಬಳಿ ಹಣ ಯಾವತ್ತೂ ಉಳಿಯೋದಿಲ್ಲ ಎಂದು ಹೇಳಲಾಗುತ್ತದೆ. ಅಂತಹ ವ್ಯಕ್ತಿಯ ಮೇಲೆ ಲಕ್ಷ್ಮೀ (Godess Lakshmi) ಕೋಪಗೊಳ್ಳುತ್ತಾಳೆ, ಅಲ್ಲದೇ ಅವರಿಗೆ ಒಂದಲ್ಲ ಒಂದು ಸಮಸ್ಯೆ ಕಾಡದೆ ಇರಲಾರದು ಎನ್ನಲಾಗುತ್ತದೆ. 

66

ಗರುಡ ಪುರಾಣದ ಅನುಸಾರ ಯಾವ ವ್ಯಕ್ತಿ ಹಣದ ದುರಾಸೆಯಿಂದಾಗಿ ಇನ್ನೊಬ್ಬ ವ್ಯಕ್ತಿಗೆ ಮೋಸ ಮಾಡುತ್ತಾನೋ, ಅವರು ಯಾವಾಗಲೂ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಎನ್ನಲಾಗುತ್ತದೆ. ಹಾಗಾಗಿ ಯಾವ ವ್ಯಕ್ತಿಯೂ ಸಹ ಯಾರಿಗೂ ಹಣದ ಮೋಸ ಮಾಡಬಾರದು. 

Read more Photos on
click me!

Recommended Stories