ಇಸ್ಲಾಂ ಧರ್ಮದಲ್ಲಿ ಕೆಲವು ಆಹಾರ, ಪಾನೀಯ ಮತ್ತು ಚಟುವಟಿಕೆಗಳನ್ನು ಹರಾಮ್ ಎಂದು ಪರಿಗಣಿಸಲಾಗಿದೆ. ಪುರುಷರು ಚಿನ್ನ ಧರಿಸುವುದು ಮತ್ತು ಅಂಗವಿಕಲರನ್ನು ಟೀಕಿಸುವುದನ್ನು ಸಹ ನಿಷೇಧಿಸಲಾಗಿದೆ.
ಪ್ರತಿಯೊಂದು ಧರ್ಮದಲ್ಲಿ ಕೆಲವೊಂದು ನಿಯಮಗಳಿರುತ್ತವೆ. ಆಯಾ ಧರ್ಮದವರು ತಮ್ಮ ಧಾರ್ಮಿಕ ನಿಯಮಗಳನ್ನು ಅನುಸರಿಸುತ್ತಾರೆ. ಹಾಗೆಯೇ ಇಸ್ಲಾಂನಲ್ಲಿ ಕೆಲವೊಂದು ಆಹಾರ ಮತ್ತು ಪಾನೀಯಗಳ ಮೇಲೆ ನಿಷೇಧ ವಿಧಿಸಲಾಗಿದೆ. ಯಾವುದೇ ಕಾರಣಕ್ಕೂ ಮುಸ್ಲಿಂ ಸಮುದಾಯದ ಜನರು ನಿಷೇಧಿತ ಕೆಲಸ ಮಾಡಲಾರು ಮತ್ತು ನಿಷೇಧಿತ ಆಹಾರಗಳನ್ನು ಸೇವಿಸಲ್ಲ.
26
ಇಸ್ಲಾಂನಲ್ಲಿ ಕೆಲವು ಆಹಾರ, ಪಾನೀಯ ಮತ್ತು ಚಟುವಟಿಕೆಗಳನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ಹರಾಮ್ ಎಂದು ಪರಿಗಣಿಸಲಾಗುತ್ತದೆ. ಹರಾಮ್ ಎಂದು ಸೂಚಿಸಲಾಗಿರುವ ವಸ್ತುಗಳಿಂದ ದೂರವಿರಲು ಸೂಚನೆ ನೀಡಲಾಗಿರುತ್ತದೆ. ಹಾಗಾದ್ರೆ ಇಸ್ಲಾಂನಲ್ಲಿ ನಿಷೇಧಿತ ಅಥವಾ ಹರಾಮ್ ಎಂದು ಹೇಳಿರುವ ಆಹಾರ ಮತ್ತು ಪಾನೀಯಗಳು ಯಾವವು ಎಂದು ನೋಡೋಣ ಬನ್ನಿ.
36
1.ಸತ್ತ ಪ್ರಾಣಿಗಳ ಕೊಳೆಯುತ್ತಿರುವ ಮಾಂಸ ಮತ್ತ ಹಂದಿ ಮಾಂಸ
ಇಸ್ಲಾಂನಲ್ಲಿ ದುರ್ಘಟನೆಯಲ್ಲಿ ಅಂದ್ರೆ ಅಪಘಾತ ಅಥವಾ ಅನಾರೋಗ್ಯದಿಂದ ಸಾವನ್ನಪ್ಪುವ ಪ್ರಾಣಿಗಳ ಮಾಂಸ ಸೇವನೆಯನ್ನು ನಿಷೇಧಿಸಲಾಗಿದೆ. ಹಾಗೆಯೇ ಹಂದಿ ಮಾಂಸದ ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಮಾಂಸದಿಂದ ಹರಿಯುವ ರಕ್ತ ಸೇವನೆಯನ್ನು ಸಹ ನಿಷೇಧಿಸಲಾಗಿದೆ. ಈ ನಿಯಮವನ್ನು ಖುರಾನ್ ಸ್ಪಷ್ಟಪಡಿಸುತ್ತದೆ. ಅಲ್ಲಾಹನಲ್ಲದೆ ಇತರರ ಹೆಸರಿನಲ್ಲಿ ವಧೆ ಮಾಡಲಾದ ಪ್ರಾಣಿಗಳ ಮಾಂಸ ಸೇವನೆಯನ್ನು ಸಹ ನಿಷೇಧಿಸಲಾಗಿದೆ.
56
3.ಮದ್ಯಪಾನ, ನಶೆ ಪದಾರ್ಥ
ಇಸ್ಲಾಂನಲ್ಲಿ ಮದ್ಯಪಾನ ಮಾಡುವುದು ನಿಷಿದ್ಧವಾಗಿದೆ. ಅಂದ್ರೆ ನಶೆ ಅಥವಾ ಅಮಲು ಉಂಟು ಮಾಡುವ ಪದಾರ್ಥಗಳನ್ನು ಇಸ್ಲಾಂನಲ್ಲಿ ನಿಷೇಧ ಮಾಡಲಾಗಿದೆ. ಈ ಮೇಲಿನ ಮೂರು ಪದಾರ್ಥಗಳ ಸೇವನೆಯನ್ನು ಕಟ್ಟನಿಟ್ಟಾಗಿ ನಿಷೇಧಿಸಲಾಗಿದೆ.
66
ಇನ್ನುಳಿದಂತೆ ಇಸ್ಲಾಮಿಕ್ ಧಾರ್ಮಿಕ ದೃಷ್ಟಿಕೋನದಿಂದ ಪುರುಷರು ಚಿನ್ನಾಭರಣ ಧರಿಸೋದು ನಿಷಿದ್ಧವಾಗಿದೆ. ಅಂಗವಿಕಲರನ್ನು ಟೀಕಿಸೋದು ನಿಷಿದ್ಧವಾಗಿದೆ. ಅಂಗವಿಕಲತೆಯನ್ನು ಉದ್ದೇಶಪೂರ್ವಕವಾಗಿ ಯಾರನ್ನೂ ನೋಯಿಸುವುದನ್ನು ಇಸ್ಲಾಂ ನಿಷೇಧಿಸುತ್ತದೆ.