ಮೇಷ ರಾಶಿಯವರು 'ಓಂ ವಕ್ರತುಂಡಾಯ ನಮಃ' ಮಂತ್ರ ಜಪಿಸಬೇಕು. ಹೊಸ ಆರಂಭಗಳಿಗೆ ಇರುವ ಅಡೆತಡೆಗಳು ದೂರವಾಗುತ್ತವೆ. ಓದಿನಲ್ಲಿ/ಉದ್ಯೋಗದಲ್ಲಿ ಇರುವ ಸಮಸ್ಯೆಗಳು ಕಡಿಮೆಯಾಗಿ ಯಶಸ್ಸು ಸಿಗುತ್ತದೆ. ಗಣಪತಿ ಕೃಪೆಯಿಂದ ಧೈರ್ಯ, ನಿರ್ಧಾರ ಶಕ್ತಿ ಹೆಚ್ಚುತ್ತದೆ. ಬೆಳಿಗ್ಗೆ ಸ್ನಾನ ಮಾಡಿ ಗಣಪತಿ ಮುಂದೆ ದೀಪ ಹಚ್ಚಿ 11 ಬಾರಿ ಜಪಿಸಿ.
212
ವೃಷಭ ರಾಶಿ
ವೃಷಭ ರಾಶಿಯವರು 'ಓಂ ಗಂ ಗಣಪತಯೇ ನಮಃ' ಮಂತ್ರ ಜಪಿಸಬೇಕು. ಇದು ಗಣಪತಿಗೆ ಅತ್ಯಂತ ಪ್ರಿಯವಾದ ಮಂತ್ರ. ಸಂಪತ್ತು, ಐಶ್ವರ್ಯ ಪ್ರಾಪ್ತಿಯಾಗುತ್ತದೆ. ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಿ, ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ. ವ್ಯಾಪಾರದಲ್ಲಿ ಲಾಭ. ಹಳದಿ ಗಣಪತಿಯನ್ನು ಪೂಜಿಸಿ 21 ಬಾರಿ ಜಪಿಸಿ.
312
ಮಿಥುನ ರಾಶಿ
ಮಿಥುನ ರಾಶಿಯವರು “ಓಂ ಏಕದಂತಾಯ ನಮಃ” ಮಂತ್ರ ಜಪಿಸಬೇಕು. ಇದು ಜ್ಞಾನ, ವಿದ್ಯೆ, ಬುದ್ಧಿಗೆ ಸಂಕೇತ. ವಿದ್ಯಾರ್ಥಿಗಳಿಗೆ ಶ್ರೇಯಸ್ಕರ. ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಉದ್ಯೋಗದಲ್ಲಿ ಹೊಸ ಅವಕಾಶಗಳು. ಪುಸ್ತಕಗಳ ಬಳಿ ಗಣಪತಿ ಫೋಟೋ ಇಟ್ಟು ಬೆಳಿಗ್ಗೆ, ಸಂಜೆ 9 ಬಾರಿ ಜಪಿಸಿ.
412
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು “ಓಂ ಹೇರಂಬಾಯ ನಮಃ” ಮಂತ್ರ ಜಪಿಸಬೇಕು. ಇದು ಗಣಪತಿಯ ಶಕ್ತಿಶಾಲಿ ಹೆಸರು. ಕುಟುಂಬ ಕಲಹ ನಿವಾರಣೆ, ಅನಾರೋಗ್ಯ ದೂರ, ಗೃಹ ಸೌಖ್ಯ ವೃದ್ಧಿ. 12 ಬಾರಿ ಜಪಿಸಿ ನೈವೇದ್ಯ ಅರ್ಪಿಸಿ.
512
ಸಿಂಹ ರಾಶಿ
ಸಿಂಹ ರಾಶಿಯವರು ‘ಓಂ ಲಂಬೋಧರಾಯ ನಮಃ’, “ಓಂ ಸುಮುಖಾಯ ನಮಃ” ಮಂತ್ರ ಜಪಿಸಬೇಕು. ಗೌರವ, ಕೀರ್ತಿ, ಪ್ರತಿಷ್ಠೆ ಹೆಚ್ಚುತ್ತದೆ. ಉದ್ಯೋಗದಲ್ಲಿ ಬಡ್ತಿ/ಹೊಸ ಅವಕಾಶ. ನಾಯಕತ್ವ ಗುಣಗಳು ಬೆಳಕಿಗೆ. ಬೆಳಿಗ್ಗೆ ಸೂರ್ಯೋದಯಕ್ಕೆ 11 ಬಾರಿ ಜಪಿಸಿ.
612
ಕನ್ಯಾ ರಾಶಿ
ಕನ್ಯಾ ರಾಶಿಯವರು “ಓಂ ಕಪಿಲಾಯ ನಮಃ” ಮಂತ್ರ ಜಪಿಸಬೇಕು. ಮನಸ್ಸಿಗೆ ಶಾಂತಿ, ಆರೋಗ್ಯ ಸಮಸ್ಯೆಗಳು ನಿವಾರಣೆ. ವಿದ್ಯಾರ್ಥಿಗಳಿಗೆ ಏಕಾಗ್ರತೆ. ವ್ಯಾಪಾರಿಗಳಿಗೆ ಹೊಸ ಯೋಜನೆಗಳಲ್ಲಿ ಯಶಸ್ಸು. ಬುಧವಾರ 21 ಬಾರಿ ಜಪಿಸಿ.
712
ತುಲಾ ರಾಶಿ
ತುಲಾ ರಾಶಿಯವರಿಗೆ “ಓಂ ಗಜಾನನಾಯ ನಮಃ” ಮಂತ್ರ ಶ್ರೇಷ್ಠ. ಧನ, ಸೌಭಾಗ್ಯ ವೃದ್ಧಿ. ಕುಟುಂಬದಲ್ಲಿ ಆನಂದ. ನಿಂತ ಕೆಲಸಗಳು ಪೂರ್ಣ. ಶುಕ್ರವಾರ 16 ಬಾರಿ ಜಪಿಸಿ.
812
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು “ಓಂ ವಿನಾಯಕಾಯ ನಮಃ” ಮಂತ್ರ ಜಪಿಸಬೇಕು. ಧೈರ್ಯ, ಶಕ್ತಿ, ಆತ್ಮವಿಶ್ವಾಸ ಹೆಚ್ಚುತ್ತದೆ. ಶತ್ರುಗಳು ದೂರ. ಆರ್ಥಿಕ ಲಾಭ. ಸ್ನಾನದ ನಂತರ ಗಣಪತಿಗೆ ಪುಷ್ಪ ಅರ್ಪಿಸಿ 21 ಬಾರಿ ಜಪಿಸಿ.
912
ಧನಸ್ಸು ರಾಶಿ
ಧನಸ್ಸು ರಾಶಿಯವರು “ಓಂ ವಿಘ್ನರಾಜಾಯ ನಮಃ”,‘ ಓಂ ಪಾರ್ವತೀ ನಂದನಾಯ ನಮಃ’ ಮಂತ್ರ ಜಪಿಸಬೇಕು. ಅಡೆತಡೆಗಳು ದೂರ. ಓದು, ವ್ಯಾಪಾರ, ಉದ್ಯೋಗದಲ್ಲಿ ಯಶಸ್ಸು. ಬೆಲ್ಲ, ಎಲೆಗಳ ನೈವೇದ್ಯ. 12 ಬಾರಿ ಜಪಿಸಿ.
1012
ಮಕರ ರಾಶಿ
ಮಕರ ರಾಶಿಯವರು “ಓಂ ಗಣಾಧಿಪತಯೇ ನಮಃ”, ‘ಓಂ ಗಣಪತಯೇ ನಮಃ’ ಮಂತ್ರ ಜಪಿಸಬೇಕು. ನಾಯಕತ್ವ, ಧೈರ್ಯ, ಯಶಸ್ಸು ಪ್ರಾಪ್ತಿ. ಉದ್ಯೋಗದಲ್ಲಿ ಅಧಿಕಾರಿಗಳ ಸಹಕಾರ. ವ್ಯಾಪಾರದಲ್ಲಿ ಹೊಸ ಒಪ್ಪಂದಗಳ ಲಾಭ. 11 ಬಾರಿ ಜಪಿಸಿ.
1112
ಕುಂಭ ರಾಶಿ
ಕುಂಭ ರಾಶಿಯವರು “ಓಂ ವಿಘ್ನೇಶ್ವರಾಯ ನಮಃ”, ‘ಓಂ ಉಮಾ ಪುತ್ರಾಯ ನಮಃ’ ಮಂತ್ರ ಜಪಿಸಬೇಕು. ಜೀವನದ ಅಡೆತಡೆಗಳು ನಿವಾರಣೆ. ವಿದೇಶಿ ಅವಕಾಶ. ವಿದ್ಯಾರ್ಥಿಗಳಿಗೆ ಉನ್ನತ ವಿದ್ಯೆಯಲ್ಲಿ ಯಶಸ್ಸು. ದೀಪ ಹಚ್ಚಿ 21 ಬಾರಿ ಜಪಿಸಿ.
1212
ಮೀನ ರಾಶಿ
ಮೀನ ರಾಶಿಯವರು “ಓಂ ಸಿದ್ಧಿ ವಿನಾಯಕಾಯ ನಮಃ”, ‘ ಓಂ ಶೂರ್ಪಕರ್ಣಾಯ ನಮಃ’ ಮಂತ್ರ ಪಠಿಸಬೇಕು. ಧನ, ವಿದ್ಯೆ, ಜ್ಞಾನ, ಸಂತಾನ, ಸೌಭಾಗ್ಯ ಪ್ರಾಪ್ತಿ. ನಿಂತ ಕೆಲಸಗಳು ಪೂರ್ಣ. 12 ಬಾರಿ ಜಪಿಸಿ ಲಡ್ಡುಗಳ ನೈವೇದ್ಯ.