ನಗ್ ನಗ್ತಾನೇ ಮನೆ ನಾಶ ಮಾಡೋ ಇಂಥ ಮಹಿಳೆಯರ ಬಗ್ಗೆ ಹುಷಾರು ಅಂತಾನೆ ಚಾಣಕ್ಯ

First Published | Oct 11, 2023, 5:29 PM IST

ಆಚಾರ್ಯ ಚಾಣಕ್ಯನು ಮಹಿಳೆಯನ್ನು ಮನೆಯ ಲಕ್ಷ್ಮಿ ಎಂದು ಕರೆದಿದ್ದಾನೆ. ಮಹಿಳೆಯರನ್ನು ಗೌರವಿಸುವುದು ಸಮಾಜಕ್ಕೆ ಮುಖ್ಯ. ಅವರು ಕುಟುಂಬದ ಅಡಿಪಾಯ. ಆದರೆ ಯಾವ ರೀತಿಯ ಮಹಿಳೆಯಿಂದ ಮನೆ ನಾಶವಾಗುತ್ತೆ ಅನ್ನೋದನ್ನು ಚಾಣಕ್ಯ ತಿಳಿಸಿದ್ದಾನೆ. 

ಚಾಣಕ್ಯ ನೀತಿಯು (Chanakya Niti) ಪ್ರಾಚೀನ ಭಾರತೀಯ ಗ್ರಂಥವಾಗಿದ್ದು, ಇದು ಭಾರತೀಯ ರಾಜಕೀಯ ಗುರು ಮತ್ತು ಅರ್ಥಶಾಸ್ತ್ರಜ್ಞ ಕೌಟಿಲ್ಯನ ಬೋಧನೆಗಳ ಸಂಗ್ರಹ. ಈ ಗ್ರಂಥದಲ್ಲಿ ಚಾಣಕ್ಯನು ರಾಜಕೀಯ, ಆರ್ಥಿಕ ನಿರ್ವಹಣೆ (Money Management), ಸಾಮಾಜಿಕ ನೀತಿ (Social Policy), ನೈತಿಕತೆ (Morality) ಮತ್ತು ಜೀವನದ ವಿವಿಧ ಅಂಶಗಳ ಬಗ್ಗೆ ತನ್ನ ದೃಷ್ಟಿಕೋನಗಳು ಮತ್ತು ಸಲಹೆಗಳನ್ನು ತಿಳಿಸಿದ್ದಾರೆ. 
 

ಆಚಾರ್ಯ ಚಾಣಕ್ಯ (Acharya Chanakya) ಮಹಿಳೆಯನ್ನು ಮನೆಯ ಲಕ್ಷ್ಮಿ ಎಂದು ಕರೆದಿದ್ದಾನೆ. ಮಹಿಳೆಯರನ್ನು ಗೌರವಿಸುವುದು ಸಮಾಜಕ್ಕೆ ಮುಖ್ಯ. ಅವರು ಕುಟುಂಬದ ಅಡಿಪಾಯ. ಅವಳು ಮನೆಯನ್ನು ಸ್ವರ್ಗ (Heaven) ಮತ್ತು ನರಕ (Hell) ಎರಡನ್ನೂ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾಳೆ ಎಂದು ಚಾಣಕ್ಯ ತಿಳಿಸಿದ್ದಾರೆ.
 

Latest Videos


ಜೀವನ ಸಂಗಾತಿಯನ್ನು (Life partner) ಆಯ್ಕೆ ಮಾಡುವಾಗ ಎಚ್ಚರಿಕೆಯಿಂದ ಮಾಡಬೇಕು ಏಕೆಂದರೆ ದಾಂಪತ್ಯ ಅನ್ನೋದು ಜೀವನ ಪರ್ಯಂತ ನಮ್ಮ ಜೊತೆಗಿರುವಂತದ್ದು  ಮತ್ತು ನಿಮ್ಮ ಜೀವನದ ಮೇಲೆ ಅದರ ಪರಿಣಾಮ ದೀರ್ಘಕಾಲದವರೆಗೆ ಇರುತ್ತದೆ. ಹಾಗಿದ್ರೆ ಯಾವ ರೀತಿಯ ಮಹಿಳೆಯರು ಮನೆಯನ್ನು ಹಾಳುಮಾಡುತ್ತಾರೆ ಅನ್ನೋದನ್ನು ಚಾಣಕ್ಯ ನೀತಿ ತಿಳಿಸಿದೆ ನೋಡೋಣ.
 

ಸಮಾಜದಲ್ಲಿ ವ್ಯಕ್ತಿಯ ಪಾತ್ರ ಮತ್ತು ನಡವಳಿಕೆ ಬಹಳ ಮುಖ್ಯ. ಮಹಿಳೆ ಅಥವಾ ಪುರುಷ ಅಸಭ್ಯವಾಗಿ ವರ್ತಿಸಿದರೆ, ಅದು ಕುಟುಂಬ ಮತ್ತು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಚಾಣಕ್ಯ ನೀತಿಯ ಪ್ರಕಾರ, ಅಂತಹ ನಡವಳಿಕೆಯನ್ನು ಹೊಂದಿರುವ ಮಹಿಳೆಯರು ಮನೆಯನ್ನು ನಾಶಪಡಿಸುತ್ತಾರೆ. ಆದ್ದರಿಂದ, ಈ ಬಗ್ಗೆ ಜಾಗರೂಕರಾಗಿರಬೇಕು.
 

ಮನೆಯಲ್ಲಿ ಅತಿಥಿಗಳನ್ನು ಸ್ವಾಗತಿಸುವುದು ಮತ್ತು ಹಿರಿಯರನ್ನು ಗೌರವಿಸುವುದು ಮಹಿಳೆಯ ಜವಾಬ್ದಾರಿ. ಅವರು ತಮ್ಮ ಕುಟುಂಬದಿಂದ ಬಂದವರಾಗಿರಲಿ ಅಥವಾ ಬಾಹ್ಯ ಅತಿಥಿಗಳಾಗಿರಲಿ. ಮಹಿಳೆ ಅವರಿಗೆ ಆತಿಥ್ಯ ನೀಡದಿದ್ದರೆ, ಅದು ಕುಟುಂಬ ಮತ್ತು ಸಮಾಜದಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತದೆ. ಕುಟುಂಬಕ್ಕೆ ಅಪಖ್ಯಾತು ಬರುತ್ತೆ. 
 

ಶಿಕ್ಷಣ (Education), ಆರ್ಥಿಕ ನಿರ್ವಹಣೆ ಮತ್ತು ಮೌಲ್ಯಗಳು (Moral Values) ಎಲ್ಲರ ಜೀವನಕ್ಕೂ ಬಹಳ ಮುಖ್ಯವಾದ ಕೊಂಡಿಗಳಾಗಿವೆ. ಅದರ ಕೊರತೆಯಿಂದಾಗಿ, ಮಹಿಳೆಯರು ತಮ್ಮ ಕುಟುಂಬದ ಸ್ಥಿತಿಯನ್ನು ಕಡೆಗಣಿಸಿ, ತಮ್ಮ ಮಕ್ಕಳ ಬಗ್ಗೆ ಗಮನ ಹರಿಸದೆ ಅನಗತ್ಯವಾಗಿ ಹಣವನ್ನು ಖರ್ಚು ಮಾಡಿದರೆ ಕುಟುಂಬವು ಭಾರಿ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮನೆ ನಾಶವಾಗುವ ಸಾಧ್ಯತೆಯಿದೆ.
 

ದುಷ್ಟ ಮತ್ತು ದುರಾಸೆಯ ಮಹಿಳೆಯರಿಂದ ದೂರವಿರಿ. ಅಂತಹ ಮಹಿಳೆಯರು ಕುಟುಂಬಕ್ಕೆ ಸಮಸ್ಯೆಗಳನ್ನು ಸೃಷ್ಟಿಸಬಹುದು. ಇದಲ್ಲದೆ, ಮಹಿಳೆಯರು ತಮ್ಮ ಮನೆಯನ್ನು ಹೊರಗಿನವರೊಂದಿಗೆ ಹಂಚಿಕೊಳ್ಳಲು ಪ್ರಾರಂಭಿಸಿದರೆ, ನಿಮ್ಮ ಮನೆ ಕುಸಿಯುವ ಅಂಚಿನಲ್ಲಿದೆ ಎಂದು ಅರ್ಥಮಾಡಿಕೊಳ್ಳಿ.
 

click me!