ದೀರ್ಘಾಯುಷ್ಯಕ್ಕಾಗಿ ಮಹಾತ್ಮ ವಿದುರನ ಈ ಸಲಹೆಗಳನ್ನು ಅನುಸರಿಸಿ!

First Published Jan 12, 2023, 2:37 PM IST

ವಿದುರ ನೀತಿಯ ಪ್ರಕಾರ, ಕೆಲವು ಜನರು ತಮ್ಮ ವಯಸ್ಸಿಗಿಂತ ಕಡಿಮೆ ಸಮಯ ಬದುಕುತ್ತಾರೆ. ಅಂದರೆ ದೈಹಿಕವಾಗಿ ಬದುಕಿದ್ದರೂ, ಮಾನಸಿಕವಾಗಿ ಅವರು ಸಾವನ್ನಪ್ಪಿರುತ್ತಾರೆ. ಯಾವ ರೀತಿಯ ವ್ಯಕ್ತಿ ಅವರ ವಯಸ್ಸಿಗಿಂತ ಕಡಿಮೆ ಜೀವಿಸುತ್ತಾನೆ ಎಂದು ತಿಳಿಯೋಣ. ವಿದುರ ನೀತಿಯು ಜನರ ನಡವಳಿಕೆಯನ್ನು ಮೌಲ್ಯಮಾಪನ ಮಾಡುತ್ತೆ ಮತ್ತು ಯಾವ ಜನರು ಯಾವ ವಯಸ್ಸಿನಲ್ಲಿ ಸಾವನ್ನಪ್ಪುತ್ತಾರೆ ಅನ್ನೋದನ್ನು ತಿಳಿಸುತ್ತೆ.

ವಿದುರ ನೀತಿಯು (Vidur niti) ವಿದುರ ಮತ್ತು ಮಹಾಭಾರತ ಕಾಲದ ಬುದ್ಧಿವಂತನಾದ ಧೃತರಾಷ್ಟ್ರನ ನಡುವಿನ ಸಂಭಾಷಣೆ. ವಿದುರ ನೀತಿಯಲ್ಲಿ ಅನೇಕ ರೀತಿಯ ಜನರನ್ನು ವಿವರಿಸಲಾಗಿದೆ. ಇಲ್ಲಿ ಕೆಲವು ಜನರ ಬಗ್ಗೆ ತಿಳಿಯೋಣ. ವ್ಯಕ್ತಿಯ ನಡವಳಿಕೆಯ ಬಗ್ಗೆ ಚರ್ಚಿಸುವಾಗ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಣಯಿಸಲಾಗುತ್ತೆ. ವಿದುರ ನೀತಿ ಪ್ರಕಾರ ಯಾವ ಗುಣಗಳುಳ್ಳ ಜನರು ದೀರ್ಘಕಾಲ ಬಾಳಲು ಸಾಧ್ಯವಿಲ್ಲ ಅನ್ನೋದನ್ನು ನೋಡೋಣ. ನಿಮ್ಮ ಆಯಸ್ಸು ದೀರ್ಘವಾಗಿದೆಯೇ ಅಥವಾ ಇಲ್ಲವೇ ಎಂದು ಇಲ್ಲಿ ತಿಳಿಯಿರಿ. 

ದೀರ್ಘಾಯುಷ್ಯಕ್ಕಾಗಿ(Long life) ಈ ಸಲಹೆಯನ್ನು ಅನುಸರಿಸಿ.

ವಿದುರನ ಪ್ರಕಾರ, ಯಾವಾಗಲೂ ತನ್ನ ಬಗ್ಗೆ ಹೊಗಳಿಕೆಯ ಮಾತುಗಳನ್ನು ಕೇಳಲು ಬಯಸುವ ಅಥವಾ ತನ್ನನ್ನು ತಾನು ಅತಿಯಾಗಿ ಬುದ್ಧಿವಂತನೆಂದು ಭಾವಿಸುವ ವ್ಯಕ್ತಿಯ ಆಯಸ್ಸು ಕಡಿಮೆಯಾಗುತ್ತೆ ಎನ್ನುತ್ತಾರೆ. ಅಂತಹ ಜನರು ತಮ್ಮ ಮುಂದೆ ಎಲ್ಲರನ್ನೂ ತಿರಸ್ಕಾರ ಮಾಡುತ್ತಾರೆ. ಅವರು ತಮ್ಮನ್ನು ತಾವು ಅತ್ಯುತ್ತಮರೆಂದು ಪರಿಗಣಿಸುತ್ತಾರೆ. 

ವಿದುರನ ಪ್ರಕಾರ, ಹೆಚ್ಚು ಮಾತನಾಡುವ ವ್ಯಕ್ತಿಯ ಆಯಸ್ಸು ಸಹ ಕಡಿಮೆ. ಹೆಚ್ಚು ಮಾತನಾಡುವ ವ್ಯಕ್ತಿಯು(Talkative) ತಾನು ಹೇಳಬಾರದ ಕೆಲವು ವಿಷಯಗಳನ್ನು ಆಗಾಗ್ಗೆ ಹೇಳುತ್ತಾನೆ. ಅಂತಹ ಜನರು ತಮ್ಮ ಜೀವನದುದ್ದಕ್ಕೂ ತಮ್ಮ ಬಾಯಿಂದ ಹೊರಬರುವ ತಪ್ಪು ವಿಷಯದ ಭಾರವನ್ನು ಅನುಭವಿಸುತ್ತಾರೆ. ಆದ್ದರಿಂದ ಜನರು ಚಿಂತನಶೀಲವಾಗಿ ಮಾತನಾಡಬೇಕು. 

ನೀವು ಸಮಾಜದಲ್ಲಿ ಸಂತೋಷ ಮತ್ತು ಶಾಂತಿಯನ್ನು(Peace) ಕಾಪಾಡಿಕೊಳ್ಳಲು ಬಯಸೋದಾದ್ರೆ, ತನ್ನೊಳಗಿನ ಕೆಟ್ಟ ಭಾವನೆಗಳನ್ನು ಮೊದಲಿಗೆ ತ್ಯಜಿಸಬೇಕು. ಸಮಯಕ್ಕೆ ಸರಿಯಾಗಿ ತ್ಯಾಗ ಮಾಡದ ವ್ಯಕ್ತಿಯ ಆಯಸ್ಸು ಕಡಿಮೆಯಾಗುತ್ತೆ. ಅಂತಹ ಜನರ ಜೀವನವು ತುಂಬಾ ದೀರ್ಘವಾಗಿರೋದಿಲ್ಲ.
 

ಸಮಾಜವು ಪರಸ್ಪರರ ತ್ಯಾಗದಿಂದ ಮಾತ್ರ ಸುಗಮವಾಗಿ ಕಾರ್ಯನಿರ್ವಹಿಸುತ್ತೆ. ಪ್ರತಿಯೊಬ್ಬ ಮನುಷ್ಯನಲ್ಲಿಯೂ ತ್ಯಾಗದ ಮನೋಭಾವ ಹೆಚ್ಚಾದರೆ, ಒಬ್ಬರಿಗೊಬ್ಬರು ಸಹಾಯ (Help) ಮಾಡುತ್ತಾ ಬಾಳಿದರೆ, ಆವಾಗ ಸಮಾಜದಲ್ಲಿ ಒಳ್ಳೆತನವನ್ನು ಬೇಗನೆ ಹರಡುತ್ತದೆ ಅನ್ನೋದರಲ್ಲಿ ಸಂಶಯವಿಲ್ಲ.. 

ದುರಾಸೆಯಿಂದ ಬದುಕುವ ವ್ಯಕ್ತಿಯ ಜೀವನವು ಸಹ ದೀರ್ಘವಾಗಿರೋದಿಲ್ಲ ಎಂದು ವಿದುರನು ಹೇಳುತ್ತಾನೆ. ದುರಾಸೆಯುಳ್ಳ ವ್ಯಕ್ತಿಯು ತಾನು ದೀರ್ಘಕಾಲ ಬದುಕಬೇಕೆಂದು ಬಯಸಿದ್ರೂ ಸಹ ಹೆಚ್ಚು ಕಾಲ ಬದುಕಲು ಸಾಧ್ಯವಿಲ್ಲ. ಅಂತಹ ಜನರು ದೈಹಿಕವಾಗಿ (Physically)ಮಾತ್ರ ಬದುಕುಳಿಯುತ್ತಾರೆ ಮತ್ತು ಮಾನಸಿಕವಾಗಿ ಅಲ್ಲ. 

 ಹಿಂದೂ ಧರ್ಮಗ್ರಂಥಗಳ ಪ್ರಕಾರ, ದುರಾಸೆ ಮತ್ತು ಸ್ವಾರ್ಥವನ್ನು (Selfish) ಮನುಷ್ಯನ ಅತಿದೊಡ್ಡ ಶತ್ರುಗಳು(Enemy) ಎಂದು ಪರಿಗಣಿಸಲಾಗಿದೆ. ಹಾಗಾಗಿ, ಸ್ವಾರ್ಥವನ್ನು ಬಿಟ್ಟು ತ್ಯಾಗ ಮಾಡಬೇಕು. ತ್ಯಾಗವು ಮಾನವರು ಪರಸ್ಪರರ ಬಗ್ಗೆ ತೋರಿಸಬಹುದಾದ ಮತ್ತು ಸಮಾಜದಲ್ಲಿ ಹೊಂದಾಣಿಕೆ ಮಾಡಬಹುದಾದ ಏಕೈಕ ಭಾವನೆಯಾಗಿದೆ.

click me!