ಸ್ಯಾಂಡಲ್‌ವುಡ್ ನಟರು ವರಮಹಾಲಕ್ಷ್ಮಿ ಹಬ್ಬ ಆಚರಿಸಿದ್ದು ಹೀಗೆ...!

First Published | Aug 20, 2021, 5:20 PM IST

ವರಮಹಾಲಕ್ಷ್ಮಿ ಹಬ್ಬವನ್ನು ಪ್ರತಿಯೊಬ್ಬರ ಮನೆಯಲ್ಲೂ ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಈ ವರ್ಷವೂ ಕನ್ನಡ ಚಿತ್ರರಂಗದ ನಟ, ನಟಿಯರು ತಮ್ಮ ಮನೆಯಲ್ಲಿ ಹೇಗೆ ಲಕ್ಷ್ಮಿ ಹಬ್ಬವನ್ನು ಆಚರಣೆ ಮಾಡಿದ್ದಾರೆ ಎಂದು ಇಲ್ಲಿದೆ ನೋಡಿ....

ಕನ್ನಡ ಚಿತ್ರರಂಗದ ಯುವರಾಜ ನಿಖಿಲ್ ಕುಮಾರಸ್ವಾಮಿ  'ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು' ಎಂದು ಬರೆದುಕೊಂಡು, ಪತ್ನಿ ಹಾಗೂ ಲಕ್ಷ್ಮಿ ಜೊತೆ ಫೋಟೋ ಹಂಚಿ ಕೊಂಡಿದ್ದಾರೆ.

ಮುದ್ದು ಮುಖದ ಚೆಲುವೆ ಹರ್ಷಿಕಾ ಪೂಣಚ್ಚ 'ಹರ್ಷಿ ಲಕ್ಷ್ಮಿ ಕಡೆಯಿಂದ ನಿಮ್ಮೆಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು,' ಎಂದು ಬರೆದುಕೊಂಡು ನೀಲಿ-ಪಿಂಕ್ ಲಂಗ ದಾವಣಿ ಧರಿಸಿದ್ದಾರೆ.

Tap to resize

ನಟಿ ಶ್ವೇತಾ ಶ್ರೀವಾಸ್ತವ್ ಹಾಗೂ ಸೆಲೆಬ್ರಿಟಿ ಕಿಡ್ ಅಶ್ಮಿತಾ ಸಾಂಪ್ರದಾಯಿಕೆ ಉಡುಗೆಯಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ಮಗಳ ಮೂಲಕ ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ್ದಾರೆ.

ಪಿಂಕ್ ಮತ್ತು ಗೋಲ್ಡ್‌ ಲಂಗ ದಾವಣಿ ಧರಿಸಿ ಪುಟ್ಟ ಹುಡುಗಿಯಂತೆ ದೇವರ ಮುಂದೆ ನಿಂತಿರುವ ಶುಭಾ ಪೂಂಜಾ ಅಭಿಮಾನಿಗಳು ಶುಭ ಹಾರೈಸಿದ್ದಾರೆ. 

ಶ್ವೇತ ವಸ್ತ್ರ ಧರಿಸಿ ದೇವಿ ರೂಪದಲ್ಲಿ ಕಾಣಿಸಿಕೊಂಡಿರುವ ದಿಯಾ ನಟಿ ಖುಷಿ ರವಿ ಫೋಟೋಶೂಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

 ಥೀಟ್ ಮಹಾಲಕ್ಷ್ಮಿ ರೀತಿ ಅಲಂಕಾರ ಮಾಡಿಕೊಂಡ ಬಿಗ್ ಬಾಸ್ ವೈಷ್ಣವಿ ಗೌಡ, ತಾಯಿ ಜೊತೆಗೆ ಖಾಸಗಿ ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಬ್ಯುಸಿ ಶೆಡ್ಯೂಲ್‌ನಲ್ಲಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. 

ಲೂಸ್ ಮಾದಾ ಯೋಗೇಶ್ ಹಾಗೂ ಪತ್ನಿ ಸಾಹಿತ್ಯಾ ಅದ್ಧೂರಿಯಾಗಿ ವರಮಹಾಲಕ್ಷ್ಮಿ ಪೂಜೆ ಮಾಡಿದ್ದಾರೆ. ಫೋಟೋದಲ್ಲಿ ಪುತ್ರಿ ಎಲ್ಲರ ಗಮನ ಸೆಳೆದಿದ್ದಾಳೆ.

Latest Videos

click me!