ರಾವಣನಿಗೆ ಪುಷ್ಪಕ ವಿಮಾನ ಸಿಕ್ಕಿದ್ದೆಲ್ಲಿ? ಕೇಳರಿಯದ ಕಥೆ ಇಲ್ಲಿದೆ

First Published | Jun 28, 2023, 12:59 PM IST

ರಾವಣನ ಪುಷ್ಪಕ ವಿಮಾನದ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಸೀತಾ ಮಾತೆಯನ್ನು ಅಪಹರಣ ಮಾಡಿದ ನಂತರ, ರಾವಣನು ಅವಳನ್ನು ಪುಷ್ಪಕ ವಿಮಾನದಲ್ಲಿ ಲಂಕೆಗೆ ಕರೆತಂದನು. ಈ ಪುಷ್ಪಕ ವಿಮಾನವನ್ನು ರಾವಣ ಎಲ್ಲಿಂದ ಪಡೆದನೆಂದು ನಿಮಗೆ ತಿಳಿದಿದೆಯೇ?
 

ರಾಮಾಯಣದಲ್ಲಿ ರಾವಣನ ಪುಷ್ಪಕ (Pushpaka Vimana) ವಿಮಾನದ ಉಲ್ಲೇಖವಿದೆ. ರಾವಣನು ಸೀತೆಯನ್ನು ಪುಷ್ಪಕ ವಿಮಾನದಲ್ಲಿ ಅಪಹರಿಸಿ ಲಂಕೆಗೆ ಕರೆದೊಯ್ದನು. ರಾವಣನ ಸಾವಿನ ನಂತರ ವಿಭೀಷಣನನ್ನು ಲಂಕಾಪತಿಯನ್ನಾಗಿ ಮಾಡಿದಾಗ, ಶ್ರೀ ರಾಮನು ಈ ವಿಮಾನದಲ್ಲಿ ಸೀತಾ, ಲಕ್ಷ್ಮಣ, ಹನುಮಾನ್  ಮತ್ತು ಇತರರೊಂದಿಗೆ ಅಯೋಧ್ಯೆಗೆ ಹೊರಟನೆಂಬ ಮಾಹಿತಿ ಲಭ್ಯವಾಗುತ್ತದೆ. 
 

ಆದಿಪುರುಷ್ ಚಿತ್ರದಲ್ಲಿ, ರಾವಣನ ಪುಷ್ಪಕ ವಿಮಾನವನ್ನು ಬಾವಲಿಯಂತೆ ತೋರಿಸಲಾಗಿದೆ. ಅದರ ಬಗ್ಗೆ ಭಾರಿ ಪ್ರಶ್ನೆಗಳು ಎದ್ದಿದ್ದವು. ರಾವಣನ ಪುಷ್ಪಕ ವಿಮಾನದ ಆಕಾರದ ಬಗ್ಗೆ ಪುರಾಣಗಳಲ್ಲಿ ಸಾಕಷ್ಟು ಹೇಳಲಾಗಿದೆ, ರಾವಣನು ಅದನ್ನು ಎಲ್ಲಿಂದ ಪಡೆದನು ಮತ್ತು ಅದರ ವಿಶೇಷತೆ ಏನು. ನಾವು ಅದನ್ನು ತಿಳಿಯೋಣ.
 

Tap to resize

ಪುಷ್ಪಕ ವಿಮಾನದ ವೈಶಿಷ್ಟ್ಯಗಳು
ರಾವಣನ (Ravana) ಈ ಪುಷ್ಪಕ ವಿಮಾನವು ಮನಸ್ಸಿನ ವೇಗದಲ್ಲಿ ಚಲಿಸುತ್ತಿತ್ತು. ಕಥೆಗಳಲ್ಲಿ, ಪುಷ್ಪಕ ವಿಮಾನದ ಆಕಾರವನ್ನು ನವಿಲು ಎಂದು ವಿವರಿಸಲಾಗಿದೆ. ಇದು ಸಾಕಷ್ಟು ಸೌಲಭ್ಯಗಳನ್ನು ಹೊಂದಿತ್ತು. ಅದರ ಗಾತ್ರದ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಈ ವಿಮಾನವನ್ನು ಚಿನ್ನದಿಂದ ತಯಾರಿಸಲಾಗಿದ್ದು ಮತ್ತು ಕೆಲವು ವಿಶೇಷ ಮಂತ್ರಗಳಿಂದ ಮಾತ್ರ ಓಡಿಸಬಹುದಾಗಿತ್ತು.

ಪುಷ್ಪಕ ವಿಮಾನವು ರಾವಣನನ್ನು ರಾವಣನು ಹೋಗಲು ಯೋಚಿಸಿದ ಸ್ಥಳಕ್ಕೆ ಕರೆದೊಯ್ಯುತ್ತಿತ್ತು ಎಂದು ನಂಬಲಾಗಿದೆ. ಈ ವಿಮಾನವು ಅನೇಕ ಶಕ್ತಿಗಳನ್ನು ಹೊಂದಿತ್ತು ಮತ್ತು ಆ ಸಮಯದಲ್ಲಿ ದೇವತೆಗಳ ಹತ್ತಿರವೂ ಅಂಥದ್ದೊಂದು ವಾಹನವಿರಲಿಲ್ಲವಂತೆ. ರಾಮಾಯಣದ (Ramayana) ಶ್ಲೋಕಗಳಲ್ಲಿ, ದೊಡ್ಡ ಸನ್ಯಾಸಿಗಳು ಮಾತ್ರ ಪುಷ್ಪಕ ವಿಮಾನವನ್ನು ಪಡೆಯಬಹುದು ಎಂದು ವಿವರಿಸಲಾಗಿದೆ.  
 

ರಾವಣನಿಗೆ ಪುಷ್ಪಕ ವಿಮಾನ ಎಲ್ಲಿಂದ ಸಿಕ್ಕಿತು?
ಪುರಾಣಗಳಲ್ಲಿ ರಾವಣನ ಪುಷ್ಪಕ ವಿಮಾನವನ್ನು ವಿಶ್ವಕರ್ಮ ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಈ ವಿಮಾನವನ್ನು ನಿರ್ಮಿಸಿ ವಿಶ್ವಕರ್ಮರು(Vishwakarma) ಅದನ್ನು ಬ್ರಹ್ಮ ದೇವನಿಗೆ ನೀಡಿದರು. ಅದರ ನಂತರ ಬ್ರಹ್ಮ ಈ ವಿಮಾನವನ್ನು ಕುಬೇರನಿಗೆ ನೀಡಿದರು. ರಾವಣನು ತನ್ನ ಶಕ್ತಿಯಿಂದ ಕುಬೇರನಿಂದ ಈ ವಿಮಾನವನ್ನು ಕಸಿದುಕೊಂಡು ಅದನ್ನು ಬಳಸಲು ಪ್ರಾರಂಭಿಸಿದನು ಎನ್ನಲಾಗಿದೆ.

ಸಂಪತ್ತಿನ ದೇವತೆಯಾದ (God of wealth) ಕುಬೇರನನ್ನು ರಾವಣನ ಹಿರಿಯ ಸಹೋದರ. ರಾವಣನು ಲಂಕಾ ನಗರವನ್ನು ಮತ್ತು ಪುಷ್ಪಕ ವಿಮಾನವನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಂಡನು ಎನ್ನಲಾಗಿದೆ. ದಂತಕಥೆಗಳ ಪ್ರಕಾರ, ಶ್ರೀ ರಾಮನು ಈ ವಿಮಾನದಲ್ಲಿ ಅಯೋಧ್ಯೆಯನ್ನು ತಲುಪಿದ ನಂತರ, ಅವನು ಈ ವಿಮಾನವನ್ನು ಕುಬೇರನಿಗೆ ಸಂಪೂರ್ಣ ಗೌರವದಿಂದ ಹಿಂದಿರುಗಿಸಿದನು ಎನ್ನುವ ಕಥೆಯೂ ಇದೆ.
 

Latest Videos

click me!