ಆದರೆ ವಾಸ್ತುವಿನ ಅನುಸಾರ ತುಳಸಿಯನ್ನು ಮನೆಯ ಕೆಲವೊಂದು ಮುಖ್ಯವಾದ ತಾಣದಲ್ಲಿ ಇಡಬೇಕಾಗುತ್ತದೆ. ಇದರಿಂದ ಮನೆಗೆ ಶುಭವಾಗುತ್ತದೆ ಎಂದು ವಿಷ್ಣು ಪುರಾಣದಲ್ಲಿ ಹೇಳಲಾಗಿದೆ.
ಮುಖ್ಯ ದ್ವಾರದ ಎದುರು ತುಳಸಿ ಗಿಡ : ಮನೆಯ ಅಂಗಳದಲ್ಲಿ ಮುಖ್ಯ ಬಾಗಿಲಿನ ಎದುರುಗಡೆ ತುಳಸಿ ಗಿಡವನ್ನು ನೆಡಬೇಕು. ಈ ಜಾಗದಲ್ಲಿ ತುಳಸಿ ಗಿಡವನ್ನು ನೆಟ್ಟರೆ ಮನೆಗೆ ನಕಾರಾತ್ಮಕ ಶಕ್ತಿಯ ಪ್ರವೇಶ ಆಗೋದಿಲ್ಲ.
ಪ್ರತಿದಿನ ನೀರು ಹಾಕಿ : ವಿಷ್ಣು ಪುರಾಣದಲ್ಲಿ ಹೇಳಿದಂತೆ ಮನೆಯ ಮುಂದಿರುವ ತುಳಸಿಗೆ ಪ್ರತಿದಿನ ಮುಂಜಾನೆ ನೀರು ಹಾಕಬೇಕು ಹಾಗು ಸಂಜೆಯ ಹೊತ್ತು ದೀಪ ಹಚ್ಚಿ ಅದರ ಬಳಿ ಇಡಬೇಕು. ಇದರಿಂದ ಮನೆಯಲ್ಲಿ ಸುಖ ಸಮೃದ್ಧಿ ಹೆಚ್ಚುತ್ತದೆ.
ವಾಸ್ತು ದೋಷ ದೂರ ಮಾಡಲು :ಮನೆಯಲ್ಲಿ ಯಾವುದೇ ರೀತಿಯ ವಾಸ್ತು ದೋಷ ಕಂಡು ಬಂದರೆ ತುಳಸಿಯನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ನೆಡಿ. ಇದರಿಂದ ಎಲ್ಲಾ ನಕಾರಾತ್ಮಕ ಶಕ್ತಿ ಹೀರಿಕೊಂಡು ಮನೆಗೆ ಒಳಿತಾಗುತ್ತದೆ.
ತುಳಸಿ ಲಕ್ಷ್ಮಿ ದೇವಿಯ ಅವತಾರ : ಪುರಾಣಗಳಲ್ಲಿ ತುಳಸಿಯನ್ನು ವಿಷ್ಣುವಿನ ಪತ್ನಿ ಎಂದು ಕರೆಯಾಲಾಗುತ್ತದೆ. ಶ್ರೀಹರಿ ಮೋಸದಿಂದ ತುಳಸಿಯನ್ನು ಮದುವೆಯಾಗಿದ್ದನಂತೆ.
ಇದರಿಂದ ಕೋಪಗೊಂಡ ತುಳಸಿ ಶ್ರೀ ಹರಿಗೆ ಕಲ್ಲಾಗು ಎಂದು ಶಾಪ ಕೊಟ್ಟ ಕಾರಣ ಶ್ರೀ ಹರಿ ಸಾಲಿಗ್ರಾಮದ ರೂಪದಲ್ಲಿ ಜನ್ಮಿಸಿದರು. ತುಳಸಿ ಇಲ್ಲದೆ ಸಾಲಿಗ್ರಾಮದ ಪಂಜೆ ಯಾವತ್ತೂ ಪೂರ್ಣಗೊಳ್ಳುವುದೇ ಇಲ್ಲ.
ಇನ್ನು ವರ್ಷದಲ್ಲಿ ಒಂದು ಬಾರಿ ದೀಪಾವಳಿ ಕಳೆದು 15 ದಿನಗಳಲ್ಲಿ ತುಳಸಿ ಪೂಜೆ ಆಥವಾ ತುಳಸಿ ವಿವಾಹ ಕಾರ್ಯ ನಡೆಯುತ್ತದೆ.