ಶಿವರಾತ್ರಿಯ ದಿನ ಈ ವಸ್ತುಗಳನ್ನು ಶಿವನಿಗೆ ಅರ್ಪಿಸಬೇಡಿ

Suvarna News   | Asianet News
Published : Mar 07, 2021, 03:44 PM ISTUpdated : Mar 07, 2021, 04:04 PM IST

ಈ ವರ್ಷ ಮಾರ್ಚ್ 11 ರಂದು ಮಹಾ ಶಿವರಾತ್ರಿ ಆಚರಿಸಲಾಗುತ್ತದೆ.  ಭಕ್ತರು ಉಪವಾಸವಿದ್ದು ಶಿವನನ್ನು ಆರಾಧಿಸುತ್ತಾರೆ. ಶಿವನ ನೆಚ್ಚಿನ ಸಸ್ಯ ಬಿಲ್ವ ಪತ್ರೆ ಎಂದು ಅನೇಕರಿಗೆ ತಿಳಿದಿರುತ್ತದೆ, ಮತ್ತು ಭಂಗ್, ಧತೂರ, ಹಾಲು, ಗಂಧ ಮತ್ತು ಬೂದಿ ಸಹ ಶಿವ ಇಷ್ಟ ಪಡುತ್ತಾರೆ. ಆದರೆ,  ತಿಳಿದುಕೊಳ್ಳಲೇಬೇಕಾದ ಕೆಲವು ಸಂಗತಿಗಳಿವೆ. ಅಂದರೆ ಶಿವನಿಗೆ ಇಷ್ಟವಾಗದ ಕೆಲವು ಸಂಗತಿಗಳಿವೆ. ಅವುಗಳ ಬಗ್ಗೆ ಗಮನ ಹರಿಸಬೇಕು ಮತ್ತು ಶಿವನಿಗೆ ಅದನ್ನು ಅರ್ಪಿಸಬಾರದು. ಅಂತಹ ವಸ್ತುಗಳು ಯಾವುವು ನೋಡೋಣ... 

PREV
18
ಶಿವರಾತ್ರಿಯ ದಿನ ಈ ವಸ್ತುಗಳನ್ನು ಶಿವನಿಗೆ ಅರ್ಪಿಸಬೇಡಿ

ತುಳಸಿ ಎಲೆಗಳು: ತುಳಸಿ ಎಲೆಯನ್ನು ಲಕ್ಷ್ಮಿ ಎಂದೂ ಕರೆಯುತ್ತಾರೆ. ಆದ್ದರಿಂದ ಶಿವಲಿಂಗದ ಮೇಲೆ ನೈವೇದ್ಯವಾಗಿ ಈ ಎಲೆಯನ್ನು ಹಾಕಬಾರದು. ಲಕ್ಷ್ಮೀ ದೇವಿಯು ವಿಷ್ಣುವಿನ ಪತ್ನಿ. ಹಾಗಾಗಿ, ಬೇರೆ ಯಾವ ದೇವರನ್ನು ಕೂಡ ಅರ್ಪಿಸಲು ಸಾಧ್ಯವಿಲ್ಲ.

28

ಸಂಪಿಗೆ ಹೂವು : ಶಿವನಿಗೆ ಬಿಳಿ ಹೂವುಗಳನ್ನು ಹೆಚ್ಚಾಗಿ ಅರ್ಪಿಸಲಾಗುತ್ತದೆ. ಆದರೆ ಸಂಪಿಗೆ ಹೂವನ್ನು  ಶಾಪಗ್ರಸ್ತ ಎಂದು ಹೇಳಲಾಗುತ್ತದೆ ಮತ್ತು ಶಿವನ ಪೂಜೆಯ ಸಮಯದಲ್ಲಿ  ಇದನ್ನು ಅರ್ಪಿಸಬಾರದು ಎಂದು ಹೇಳಲಾಗುತ್ತದೆ.

38

ಎಳನೀರು: ದೇವರಿಗೆ ತೆಂಗಿನಕಾಯಿಯನ್ನು ಅರ್ಪಿಸಬಹುದು ಆದರೆ ಎಳನೀರು ಅರ್ಪಿಸಬೇಡಿ. ಹೌದು, ಇದು ಸ್ವಲ್ಪ ವಿಚಿತ್ರವಾಗಿ ಕಂಡರೂ, ಶಿವರಾತ್ರಿಯ ದಿನ ಶಿವನಿಗೆ ಎಳನೀರು ಅರ್ಪಿಸುವುದು ಸರಿಯಲ್ಲ. ದೇವತೆಗಳಿಗೆ ಅರ್ಪಿಸಿದ ನಂತರ ಎಳನೀರನ್ನು ಸೇವಿಸುವುದು ಕಡ್ಡಾಯವೆಂದು ಪರಿಗಣಿಸಲಾಗುವುದು, ಆದ್ದರಿಂದ ಇದನ್ನು ಶಿವನಿಗೆ ಅರ್ಪಿಸಲಾಗುವುದಿಲ್ಲ.

48

ಕೇಸರಿ ಅಥವಾ ಕುಂಕುಮ: ಶಿವಲಿಂಗಕ್ಕೆ ಕೇಸರಿ, ಕುಂಕುಮ ವನ್ನು ಅರ್ಪಿಸಬೇಡಿ. ಶಿವರಾತ್ರಿಯ ದಿನ ಮಾತ್ರವಲ್ಲ, ಸಾಮಾನ್ಯವಾಗಿ ಇದನ್ನು ಅರ್ಪಿಸಬೇಡಿ. ಕಾರಣವೇನೆಂದರೆ, ಭಗವಾನ್ ಶಿವನು ವಿರಕ್ತ, ವಿರಕ್ತರು ಹಣೆಗೆ ಬೂದಿಯನ್ನು ಹಾಕುತ್ತಾರೆ. ಶಿವ ಭಸ್ಮವನ್ನು ಹಾಕುತ್ತಾನೆ, ಕುಂಕುಮ ಹಾಕುವುದಿಲ್ಲ ಎಂಬುದು ಸಾರ್ವತ್ರಿಕ ಸತ್ಯ.

58

ಹಾಳಾದ ಬಿಲ್ವಪತ್ರೆ : ಬಿಲ್ವಪತ್ರೆ ಅತ್ಯಂತ ಪವಿತ್ರ ವೃಕ್ಷಗಳಲ್ಲಿ ಒಂದಾಗಿದೆ. ಇದು ಔಷಧೀಯ ಗುಣಗಳನ್ನು ಹೊಂದಿದ್ದು, ಇದು ತಂಪಾಗಿಸುವ ಗುಣ ಹೊಂದಿದೆ. ಬಿಲ್ವಪತ್ರೆ ಶಿವನಿಗೆ ಪ್ರಿಯ. ಆದರೆ ಅದನ್ನು ನೈವೇದ್ಯವಾಗಿ ನೀಡುವಾಗ  ಕತ್ತರಿಸಬಾರದು ಅಥವಾ ಕೀಟ ತಿಂದ ಎಲೆಗಳನ್ನು ಸಮರ್ಪಿಸುವಂತಿಲ್ಲ. 

68

ಕಂಚಿನ ಮಡಕೆ: ಶಿವಲಿಂಗಕ್ಕೆ ಹಾಲು ಅಥವಾ ಮೊಸರನ್ನು ಅರ್ಪಿಸುವಾಗ ಕಂಚಿನ ಪಾತ್ರೆಗಳಿಂದ ದೂರವಿರಿ. ಅದು ಯಾವಾಗಲೂ ತಾಮ್ರದ ಪಾತ್ರೆಯಲ್ಲಿರಬೇಕು. 

78

ಶಿವಲಿಂಗದ ಪ್ರದಕ್ಷಿಣೆ: ಶಿವಪುರಾಣದ ಪ್ರಕಾರ, ನೀವು ಶಿವಲಿಂಗದ ಸಂಪೂರ್ಣ ಸುತ್ತುಗಳನ್ನು ಎಂದಿಗೂ ತೆಗೆದುಕೊಳ್ಳಬಾರದು. ಯಾವಾಗಲೂ ಅರ್ಧ ಸುತ್ತು ತೆಗೆದುಕೊಂಡು ನೀವು ಪ್ರಾರಂಭಿಸಿದ ಸ್ಥಳಕ್ಕೆ ಯಾವಾಗಲೂ ಹಿಂದಿರುಗಿ. ನೀವು ಪೂರ್ಣ ಸುತ್ತನ್ನು ತೆಗೆದುಕೊಂಡಲ್ಲಿ ಅದನ್ನು ದೂಷಿಸಲಾಗುತ್ತದೆ.

88

ಅರಿಶಿನ: ಹೆಚ್ಚಿನ ಹಿಂದೂ ದೇವರುಗಳಿಗೆ ಅರ್ಪಿಸಲಾದ ಅರಿಶಿನವನ್ನು ಶಿವನಿಗೆ ಎಂದಿಗೂ ಅರ್ಪಿಸಬಾರದು. ಈ ಪದಾರ್ಥವನ್ನು ಸೌಂದರ್ಯ ಹೆಚ್ಚಿಸಲು ಬಳಕೆ ಮಾಡಲಾಗುತ್ತದೆ. ಆದರೆ ಶಿವನು  ಸಂತನಾಗಿರುವುದರಿಂದ ಲೌಕಿಕ ಸುಖಗಳನ್ನು ಶಿವ ಬಹಳ ಹಿಂದೆಯೇ ಬಿಟ್ಟಿದ್ದರಿಂದ ಅರಿಶಿನವನ್ನು ನೀಡಬಾರದು. 

click me!

Recommended Stories