ಜ್ಯೋತಿಷ್ಯದ ಪ್ರಕಾರ, ನೀವು ಏಕಾದಶಿ ಉಪವಾಸವನ್ನು ಆಚರಿಸುತ್ತಿದ್ದರೆ, ಉಪವಾಸವನ್ನು ಮುರಿದ ನಂತರ ಬ್ರಾಹ್ಮಣರಿಗೆ ಆಹಾರವನ್ನು ನೀಡಬೇಕು. ಅವರಿಗೆ ಸ್ವಲ್ಪ ದಕ್ಷಿಣೆ (ಉಡುಗೊರೆ) ಸಹ ನೀಡಲಾಗುತ್ತದೆ. ಇದಲ್ಲದೆ, ಈ ದಿನದಂದು ಆಹಾರವನ್ನು ದಾನ ಮಾಡುವುದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಏಕಾದಶಿಯಂದು ಅಕ್ಕಿ, ಗೋಧಿ, ಜೋಳ, ರಾಗಿ, ಕಾಳು ಮತ್ತು ಬೆಲ್ಲವನ್ನು ದಾನ ಮಾಡುವುದು , ಬಟ್ಟೆಗಳನ್ನು, ಸಿಹಿ ಗೆಣಸು, ಕಬ್ಬು ಮತ್ತು ಸೀಸನಲ್ ಹಣ್ಣುಗಳನ್ನು ದಾನ ಮಾಡುವುದು ಮುಖ್ಯ ಹಾಗೂ ತುಂಬಾನೆ ಪ್ರಯೋಜನಕಾರಿಯಾಗಿದೆ.