ಮಹಾಶಿವರಾತ್ರಿ (Maha Shivaratri) ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು ವಿಶೇಷವಾಗಿ ಶಿವ ಭಕ್ತರಿಗೆ ಅತ್ಯಂತ ಪ್ರಮುಖ ಹಬ್ಬವೆಂದು ಪರಿಗಣಿಸಲಾಗಿದೆ. ಈ ದಿನಾಂಕದಂದು ಶಿವ ಮತ್ತು ಮಾತಾ ಪಾರ್ವತಿ ವಿವಾಹ ಬಂಧನಕ್ಕೆ ಒಳಗಾದರು ಎಂದು ನಂಬಲಾಗಿದೆ. ಧರ್ಮಗ್ರಂಥಗಳ ಪ್ರಕಾರ, ಸೃಷ್ಟಿಯು ಈ ದಿನದಿಂದ ಪ್ರಾರಂಭವಾಯಿತು. ಈ ವರ್ಷ, ಹಬ್ಬವನ್ನು ಫೆಬ್ರವರಿ 18, ಶನಿವಾರದಂದು ಆಚರಿಸಲಾಗುತ್ತದೆ.
ಶಿವರಾತ್ರಿಯ ದಿನದಂದು, ಭಕ್ತರು ತಮ್ಮ ಮನೆಯಲ್ಲಿ ಸಮೃದ್ಧಿ ಉಳಿಯಲು ಶಿವನಿಗೆ ಅನೇಕ ರೀತಿಯಲ್ಲಿ ಪೂಜೆಯನ್ನು ಮಾಡಲಾಗುತ್ತೆ. ಈ ದಿನದಂದು, ಶಿವಲಿಂಗಕ್ಕೆ ನೀರನ್ನು ಅರ್ಪಿಸುವುದು ಮತ್ತು ಶಿವಲಿಂಗವನ್ನು ಬಿಲ್ವಪತ್ರದಿಂದ ಅಲಂಕರಿಸುವುದು ಮುಖ್ಯವೆಂದು ಪರಿಗಣಿಸಲಾಗಿದೆ, ಜೊತೆಗೆ ಶಿವ ಭಕ್ತಿಯಲ್ಲಿ ಮುಳುಗುವ ಮೂಲಕ ಉಪವಾಸ (fasting) ಮಾಡುವುದು ಉತ್ತಮ.
ಈ ದಿನದಂದು ಯಾರು ಶಿವನನ್ನು ಪೂಜಿಸುತ್ತಾರೋ ಮತ್ತು ಧ್ಯಾನಿಸುತ್ತಾರೋ ಅವರ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ನಂಬಲಾಗಿದೆ. ಮತ್ತೊಂದೆಡೆ, ಈ ದಿನ ನೀವು ಜ್ಯೋತಿಷ್ಯದ ಕೆಲವು ಸುಲಭ ಸಲಹೆಗಳನ್ನು ಪ್ರಯತ್ನಿಸಿದರೆ, ಸಂಪತ್ತನ್ನು ಹೆಚ್ಚಿಸುವುದರ ಜೊತೆಗೆ ನೀವು ಉತ್ತಮ ಆರೋಗ್ಯವನ್ನೂ ಸಹ ಪಡೆಯುವಿರಿ. ಇದಲ್ಲದೆ, ನಿಮ್ಮ ದಾಂಪತ್ಯದಲ್ಲಿ (married life) ಅಡೆತಡೆಗಳು ಮತ್ತು ವೈವಾಹಿಕ ಜೀವನದಲ್ಲಿ ಉದ್ವಿಗ್ನತೆ ಇದ್ದರೆ, ಶಿವ ರಾತ್ರಿಯ ದಿನದಂದು ಇಲ್ಲಿ ಉಲ್ಲೇಖಿಸಲಾದ ಪರಿಹಾರಗಳನ್ನು ಖಂಡಿತವಾಗಿ ಪ್ರಯತ್ನಿಸಿ.
ಶಿವಲಿಂಗದ ಮೇಲೆ ಅಕ್ಕಿಯನ್ನು ಅರ್ಪಿಸಿ
ನೀವು ಶಿವಲಿಂಗದ ಮೇಲೆ ಅಕ್ಕಿಯನ್ನು ಅರ್ಪಿಸಿದರೆ, ನಿಮ್ಮ ಮನೆಯಲ್ಲಿ ಎಂದಿಗೂ ಹಣದ ಕೊರತೆಯಿರೋದಿಲ್ಲ. ಅಕ್ಕಿಯನ್ನು ಅರ್ಪಿಸಲು, ಶಿವಲಿಂಗದ ಮೇಲೆ ಹಸಿ ಅಕ್ಕಿಯನ್ನು ಎಂದಿಗೂ ಅರ್ಪಿಸಬಾರದು ಎಂಬಂತಹ ಕೆಲವು ವಿಷಯಗಳ ಬಗ್ಗೆ ನೀವು ಕಾಳಜಿ ವಹಿಸಬೇಕು.
ವಿಶೇಷವಾಗಿ ಶಿವರಾತ್ರಿಯ ದಿನದಂದು ನೀವು ಶಿವಲಿಂಗದ ಮೇಲೆ ಅಕ್ಕಿಯನ್ನು ಅರ್ಪಿಸಿದರೆ, ಅದರೊಂದಿಗೆ ಬೆರೆಸಿದ ಕುಂಕುಮವನ್ನು ಅರ್ಪಿಸುವುದರಿಂದ ಜೀವನದ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಬಹುದು. ನಿಮ್ಮ ಮನೆಯಲ್ಲಿ ಅನಗತ್ಯವಾಗಿ ಹಣ ನಷ್ಟವಾಗಿದ್ದರೆ (money loss), ಶಿವರಾತ್ರಿಯ ದಿನದಂದು, ಶಿವಲಿಂಗದ ಮೇಲೆ ಸ್ವಲ್ಪ ಅಕ್ಕಿಯ ಜೊತೆಗೆ ಒಂದು ರೂಪಾಯಿ ನಾಣ್ಯವನ್ನು ಸಹ ಅರ್ಪಿಸಬೇಕು.
ಶಿವಲಿಂಗದ ಮೇಲೆ 11 ಬಿಲ್ಪಪತ್ರಗಳನ್ನು ಅರ್ಪಿಸಿ
ಯಾವುದೇ ಆಸೆಗಳನ್ನು ಪೂರೈಸಲು ಬಯಸಿದರೆ, ಮಹಾಶಿವರಾತ್ರಿ ದಿನದಂದು, ಶಿವನಿಗೆ ಅವರ ನೆಚ್ಚಿನ ಬಿಲ್ವಪತ್ರೆಗಳನ್ನು ಅರ್ಪಿಸಿ. ನೀವು ಶಿವನಿಗೆ 11 ಬಿಲ್ವಪತ್ರೆ ಅರ್ಪಿಸಿದರೆ, ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ. ಬಿಲ್ವಪತ್ರೆಗಳನ್ನು ನೀಡುವಾಗ, ಅದರ ಎಲೆಗಳನ್ನು ತುಂಡಾಗಿರಬಾರದು ಅನ್ನೋದನ್ನು ನೆನಪಿಡಿ. ಈ ದಿನ ನೀವು ಹಸು ಅಥವಾ ಗೂಳಿಗೆ ಹಸಿರು ಮೇವನ್ನು ನೀಡಿದರೆ, ಹಲವು ಪ್ರಯೋಜನ ಪಡೆಯುವಿರಿ.
ಶಿವಲಿಂಗಕ್ಕೆ ಅಭಿಷೇಕ ಮಾಡಿ
ನಿಮ್ಮ ಜಾತಕದಲ್ಲಿ ಗ್ರಹಗಳ ದೋಷವಿದ್ದರೆ ಮತ್ತು ಅವರ ಸ್ಥಾನ ದುರ್ಬಲವಾಗಿದ್ದರೆ, ನೀವು ಅನೇಕ ನಷ್ಟಗಳನ್ನು ಎದುರಿಸಬೇಕಾಗಬಹುದು. ಉದಾಹರಣೆಗೆ, ನೀವು ಕೆಲಸದಲ್ಲಿ ಏರಿಳಿತಗಳನ್ನು ಅನುಭವಿಸಬಹುದು. ಮಹಾಶಿವರಾತ್ರಿಯ ದಿನದಂದು, ನೀವು ಶಿವಲಿಂಗಕ್ಕೆ ನೀರಿನಿಂದ ಅಭಿಷೇಕ ಮಾಡಿದರೆ ಮತ್ತು ಓಂ ನಮಃ ಶಿವಾಯ ಮಂತ್ರವನ್ನು 108 ಬಾರಿ ಪಠಿಸಿದರೆ, ನಿಮ್ಮ ಕೆಲಸದಲ್ಲಿನ ಅಡೆತಡೆಗಳನ್ನು (problems in work) ನಿವಾರಿಸಬಹುದು.
ಗಂಡ ಮತ್ತು ಹೆಂಡತಿ ಒಟ್ಟಿಗೆ ರುದ್ರಾಭಿಷೇಕ ಮಾಡಬೇಕು
ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಶಿವರಾತ್ರಿಯ ದಿನದಂದು, ಪತಿ - ಪತ್ನಿ ಜೊತೆಯಾಗಿ ರುದ್ರಾಭಿಷೇಕ ಮಾಡಬೇಕು ಮತ್ತು ಉತ್ತಮ ಜೀವನವನ್ನು ಬಯಸಬೇಕು. ಇದರಿಂದ ಸಮಸ್ಯೆಗಳು ಬೇಗನೆ ದೂರವಾಗುತ್ತವೆ. ಇದರೊಂದಿಗೆ, ನಿಮ್ಮ ಮದುವೆ ವಿಳಂಬವಾಗುತ್ತಿದ್ದರೆ, ಮಾತಾ ಪಾರ್ವತಿಗೆ ಕೆಂಪು ಬಳೆ ಮತ್ತು ಸಿಂಧೂರ ಅರ್ಪಿಸಿ.
ಶಿವಲಿಂಗದ ಮೇಲೆ ಹಾಲನ್ನು ಅರ್ಪಿಸಿ
ನೀವು ಆರೋಗ್ಯವಾಗಿರಲು ಬಯಸಿದರೆ, ಮಹಾ ಶಿವರಾತ್ರಿಯ ದಿನದಂದು, ಶಿವಲಿಂಗದ ಮೇಲೆ ಹಾಲಿನ ಅಭಿಷೇಕ ಮಾಡಬೇಕು. ಈ ದಿನ, ನೀವು ಶಿವಲಿಂಗದ ಮೇಲೆ ಹಾಲನ್ನು ಅರ್ಪಿಸಿದರೆ, ನೀವು ಶಿವನ ಅನುಗ್ರಹವನ್ನು ಪಡೆಯುತ್ತೀರಿ ಮತ್ತು ಉತ್ತಮ ಆರೋಗ್ಯದ ಆಶೀರ್ವಾದವನ್ನು ಪಡೆಯುತ್ತೀರಿ. ತಾಮ್ರದ ಪಾತ್ರೆಯಿಂದ ಶಿವಲಿಂಗದ ಮೇಲೆ ಎಂದಿಗೂ ಹಾಲನ್ನು ಅರ್ಪಿಸಬಾರದು ಎಂಬುದನ್ನು ನೆನಪಿನಲ್ಲಿಡಿ.