ಈ 4 ರಾಶಿಯವರು ಪ್ರೀತಿ ವಿಷ್ಯದಲ್ಲಿ UNLUCKY ಅಂತೆ… ನಿಮ್ಮ ರಾಶಿ ಯಾವುದು?

Published : Feb 01, 2023, 05:42 PM IST

ಪ್ರೀತಿ ಅನ್ನೋದು ಯಾವಾಗ? ಹೇಗೆ ಆಗುತ್ತೆ ಅನ್ನೋದೆ ಗೊತ್ತಾಗೋದಿಲ್ಲ. ಆದಾಗಲೇ ಅದರ ಆಳ, ಮಾಧುರ್ಯ ಅರಿವಾಗೋದು. ರಾಶಿ ಚಕ್ರದ ಪ್ರಕಾರ ಹೇಳಿದ್ರೆ, ಕೆಲವು ರಾಶಿಯವರ ಲವ್ ಲೈಫ್ ತುಂಬಾನೆ ಚೆನ್ನಾಗಿರುತ್ತೆ. ಆದರೆ ಇನ್ನೂ ಕೆಲ ರಾಶಿಯವರ (zodiac sign) ಪ್ರೀತಿಯ ಜೀವನ ದುರಾದೃಷ್ಟಕರವಾಗಿರುತ್ತೆ. ನೀವೂ ಅವರಲ್ಲಿ ಒಬ್ಬರೇ ನೋಡೋಣ… 

PREV
18
ಈ 4 ರಾಶಿಯವರು ಪ್ರೀತಿ ವಿಷ್ಯದಲ್ಲಿ UNLUCKY ಅಂತೆ… ನಿಮ್ಮ ರಾಶಿ ಯಾವುದು?

ಜೀವನದಲ್ಲಿ ಪ್ರೀತಿಯನ್ನು ಯಾರು ಬಯಸುವುದಿಲ್ಲ? ಕೆಲವು ಜನರು ಪ್ರೀತಿಸಲು ಬದುಕುತ್ತಾರೆ ಮತ್ತು ತಮ್ಮ ಹೃದಯಗಳನ್ನು ಕೈಯಲ್ಲೇ ಹಿಡಿದುಕೊಂಡು ನಡೆಯುತ್ತಾರೆ ಎನ್ನುವಂತೆ ಪ್ರೀತಿಯಲ್ಲಿ ಬೀಳುತ್ತಾರೆ. ಪ್ರೀತಿಯಲ್ಲಿ ಅದೃಷ್ಟಶಾಲಿಗಳಾಗಿ (lucky people) ಉಳಿಯುವ ಲಕ್ಕಿ ವ್ಯಕ್ತಿಗಳು ಇದ್ದಾರೆ, ಪ್ರೀತಿಯಲ್ಲಿ ಮೋಸ ಹೋಗುವವರೂ ಇದ್ದಾರೆ. ಪ್ರೀತಿಯಲ್ಲಿ ದುರದೃಷ್ಟವಂತರಾಗಿರುವ 4 ರಾಶಿಚಕ್ರ ಚಿಹ್ನೆಗಳು ಇಲ್ಲಿವೆ. ಇನ್ನಷ್ಟು ತಿಳಿದುಕೊಳ್ಳಲು ಮುಂದೆ ಓದಿ. 
 

28
ಕರ್ಕಾಟಕ ರಾಶಿ (cancer)

ಕರ್ಕಾಟಕ ರಾಶಿಯವರು ತಮ್ಮ ಎಲ್ಲಾ ಭಾವನೆಗಳನ್ನು ಒಂದೇ ಕಡೆ ರಾಶಿ ಹಾಕುವ ಅಭ್ಯಾಸವನ್ನು ಹೊಂದಿದ್ದಾರೆ. ಎಲ್ಲಾ ದಾರಿಯಲ್ಲಿ ಹೋಗಿ ತಮ್ಮ ಭಾವನೆಗಳನ್ನು ಅಕ್ಷರಶಃ ಪ್ರದರ್ಶಿಸುವುದು ಅವರ ಸ್ವಭಾವ. ಇದರಿಂದ ಹೆಚ್ಚಾಗಿ ಅವರು ಪ್ರೀತಿಯಲ್ಲಿ ದುರಾದೃಷ್ಟರಾಗಿಯೇ ಉಳಿಯುತ್ತಾರೆ.

38

ತುಂಬಾ ಮೃದು ಮತ್ತು ಕರುಣಾಮಯಿ ಗುಣ ಹೊಂದಿರುವ ಇವರು ಪ್ರೀತಿಯ ವಿಷಯದಲ್ಲಿ ಬೀಳಲು ಮತ್ತು ಅದರಿಂದ ಹೊರ ಬರಲು ತುಂಬಾ ಸಮಯ ತೆಗೆದುಕೊಳ್ಳುತ್ತಾರೆ.. ಅವರ ಸಂಬಂಧ ಮುರಿದು ಹೋದರೆ ಅವರು ಗುಣಮುಖರಾಗಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ.

48
ಕನ್ಯಾರಾಶಿ (virgo)

ಒಂದೋ ಅವರು ತುಂಬಾ ಅದೃಷ್ಟವಂತರು ಅಥವಾ ತುಂಬಾನೆ ದುರಾದೃಷ್ಟವನ್ನು ಹೊಂದಿರುವ ರಾಶಿಯ ಜನರು ಇವರಾಗಿರುತ್ತಾರೆ. ಅವರು ಯಾರನ್ನಾದರೂ ಪ್ರೀತಿಸಿದರೆ ತುಂಬಾ ಆಳವಾಗಿ ಪ್ರೀತಿಸುತ್ತಾರೆ. ಆದರೆ ಪ್ರೀತಿಯಲ್ಲಿ ಮೋಸ ಹೋದರೆ ಮಾತ್ರ ಮತ್ತೆ ಪ್ರೀತಿಯಲ್ಲಿ ಬೀಳಲು ಅವರಿಗೆ ಕಷ್ಟವಾಗಬಹುದು.

58

ಒಂದು ವೇಳೆ ಇವರಿಗೆ ಪ್ರೀತಿಯಲ್ಲಿ ಮೋಸವಾದರೆ ಯಾರನ್ನಾದರೂ ಮತ್ತೆ ಪ್ರೀತಿಸುವ ಅದೇ ಪ್ರಕ್ರಿಯೆಯ ಮೂಲಕ ಹೋಗುವುದು ಇವರಿಗೆ ತುಂಬಾ ಕಷ್ಟ. ಅವರು ಆಶಾವಾದಿಗಳಾಗಿ ಉಳಿಯುತ್ತಾರೆ ಆದರೆ ಯಾವುದು ಟ್ರೂ ಲವ್ ಅನ್ನೋದು ಅವರಿಗೆ ತಿಳಿದಿರುತ್ತದೆ, ಅದರ ಹುಡುಕಾಟದಲ್ಲಿ ಅವರು ಹೆಚ್ಚಿನ ಸಮಯ ಕಳೆಯುತ್ತಾರೆ.

68
ಮಕರ ರಾಶಿ (capricorn)

ಶನಿಯಿಂದ ಆಳಲ್ಪಡುವ ಈ ರಾಶಿಚಕ್ರ ಚಿಹ್ನೆಯು ತುಂಬಾ ಗಂಭೀರವಾದ ವ್ಯಕ್ತಿತ್ವವನ್ನು ಹೊಂದಿದೆ.  ಅವರು ಪ್ರೀತಿಯಲ್ಲಿ ದುರದೃಷ್ಟರು ಎಂದು ನಾವು ಹೇಳಲಾಗುವುದಿಲ್ಲ ಆದರೆ ಅವರು ತಪ್ಪಾದ ಸಮಯದಿಂದಾಗಿ ಅನ್ ಲಕ್ಕಿಯಾಗಿ ಉಳಿಯುತ್ತಾರೆ. ಅವರು ಸರಿಯಾದ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆಯಿದೆ ಆದರೆ ತಪ್ಪು ಸಮಯದಿಂದಾಗಿ ಮೋಸ ಮಾಡುವವರ ಬಲೆಯಲ್ಲಿ ಬೀಳುತ್ತಾರೆ.

78
ಮೀನ ರಾಶಿ (Pisces)

ಮೀನ ರಾಶಿಯವರು ತುಂಬಾ unlucky ಏಕೆಂದರೆ ಅವರು ಜನರ ಕೆಟ್ಟ ಮನಸ್ಸನ್ನು ಅರ್ಥಮಾಡಿಕೊಳ್ಳಲು ಅಥವಾ ಅವರು ಮೋಸ ಮಾಡುತ್ತಾರೆಯೇ ಎನ್ನುವುದನ್ನು ತಿಳಿಯದೆಯೇ ಪ್ರೀತಿ ಮಾಡುತ್ತಾರೆ. ಇವರು ಹೆಚ್ಚಾಗಿ ಪ್ರೀತಿಗಾಗಿ ತಮ್ಮ ಸಂತೋಷವನ್ನೇ ತ್ಯಾಗ ಮಾಡುತ್ತಾರೆ. ಅದೃಷ್ಟವಶಾತ್, ಮೀನ ರಾಶಿಯವರು ಬೇಗನೆ ಚೇತರಿಸಿಕೊಳ್ಳುತ್ತಾರೆ.

88

ಇನ್ನು ಮೇಷ, ವೃಷಭ, ಮಿಥುನ, ಸಿಂಹ, ತುಲಾ, ವೃಶ್ಚಿಕ, ಧನು ಮತ್ತು ಕುಂಭ ರಾಶಿಯವರು ಉತ್ತಮ ಲವ್ ಲೈಫ್ ಹೊಂದಿರುತ್ತಾರೆ. ಇವರಿಗೂ ಬ್ರೇಕ್ ಅಪ್ ಆಗುವ ಸಾಧ್ಯತೆ ಇದೆ, ಅಥವಾ ನೋವಿನಿಂದ ಕೂಡಿದ ಲವ್ ಲೈಫ್ (love life) ಕೂಡ ಇರುವ ಚಾನ್ಸ್ ಇದೆ. ಆದರೆ ಮೇಲೆ ತಿಳಿಸಿದ ರಾಶಿಗಳಿಗೆ ಹೋಲಿಕೆ ಮಾಡಿದರೆ ಇವರು ಅಷ್ಟೊಂದು ದುರಾದೃಷ್ಟವಂತರಲ್ಲ.

Read more Photos on
click me!

Recommended Stories