Kartika Purnima : ಈ ಕೆಲಸ ಮಾಡಿದರೆ ಆರ್ಥಿಕ ಸಮಸ್ಯೆಗಳು ಮಾಯ

First Published | Nov 17, 2021, 7:44 PM IST

ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸಕ್ಕೆ (kartika purnima ಹೆಚ್ಚಿನ ಮಹತ್ವವಿದೆ. ಕಾರ್ತಿಕ ಮಾಸದ ಹುಣ್ಣಿಮೆಯು ಭಗವಾನ್ ವಿಷ್ಣು ಮತ್ತು ತುಳಸಿಯ ಆರಾಧನೆಗೆ ಅತ್ಯಂತ ಪ್ರಮುಖವಾದುದು ಎಂದು ಪರಿಗಣಿಸಲಾಗಿದೆ. ಈ ದಿನ ಮಾಡುವ ಪೂಜೆಯಿಂದ ಅನೇಕ ಪಟ್ಟು ಹೆಚ್ಚು ಫಲಗಳು ಲಭಿಸುತ್ತವೆ. ಅಲ್ಲದೆ ಕಾರ್ತಿಕ ಪೂರ್ಣಿಮೆಯ ದಿನ ಕೈಗೊಂಡ ಕ್ರಮಗಳು ಅತ್ಯಂತ ಪರಿಣಾಮಕಾರಿ ಫಲಿತಾಂಶಗಳನ್ನು ನೀಡುತ್ತವೆ.

ಈ ವರ್ಷ ಕಾರ್ತಿಕ ಪೂರ್ಣಿಮೆ ಶುಕ್ರವಾರ, ನವೆಂಬರ್ 19, 2021 ರಂದು ಬರಲಿದೆ. ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವವರಿಗೆ ಈ ದಿನವು ವಿಶೇಷ. ಈ ದಿನದಂದು ಹಣಕ್ಕೆ ಸಂಬಂಧಿಸಿದ ಕಾರ್ಯಗಳನ್ನು ನಡೆಸಿದರೆ ಬಹಳ ತ್ವರಿತ ಪರಿಣಾಮವನ್ನು ತೋರಿಸುತ್ತವೆ.  ಅವುಗಳ ಬಗ್ಗೆ ಇಲ್ಲಿ ಒಂದಷ್ಟು ಮಾಹಿತಿ ಇದೆ ತಿಳಿಯೋಣ. 

ಹಣ ಸ್ವೀಕರಿಸುವ ಕ್ರಮಗಳು 
- ಅಗ್ನಿಸ್ತೋಮ ಯಜ್ಞವನ್ನು ಮಾಡುವಷ್ಟೇ ಫಲವನ್ನು ನೀಡುವ ಕಾರ್ತಿಕ ಪೂರ್ಣಿಮೆಯಂದು ಉಪವಾಸ ಮಾಡಲು ಮರೆಯದಿರಿ. ಇದೇ ವೇಳೆ ಲಕ್ಷ್ಮೀ ಮಾತೆಯನ್ನು ಸಂತಸ ಪಡಿಸುವುದು ಮುಖ್ಯ. ಇದರಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. ಜೊತೆಗೆ ಅಂದುಕೊಂಡ ಕೆಲಸಗಳು ಸಹ ನಡೆಯುತ್ತವೆ. 

Tap to resize

- ಕಾರ್ತಿಕ ಪೂರ್ಣಿಮೆಯ ದಿನದಂದು ಖಂಡಿತವಾಗಿಯೂ ತುಳಸಿಯನ್ನು ಆರಾಧಿಸಿ. ಇದರಿಂದ ಅನೇಕ ಜನ್ಮಗಳ ಪಾಪಗಳು ನಾಶವಾಗುತ್ತವೆ. ತುಳಸಿ ಗಿಡಕ್ಕೆ (Tulasi Plant) ನೀರು ಹಾಕಿ, ದೀಪ ಬೆಳಗಿಸಿ ಪೂಜೆ ಮಾಡಿ. ತುಳಸಿಯಲ್ಲಿ ಲಕ್ಷ್ಮಿ ದೇವಿ, ಕೃಷ್ಣ ಎಲ್ಲರೂ ಇದ್ದಾರೆ ಎನ್ನಲಾಗುತ್ತದೆ. ಇದರಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. 
 

-ಲಕ್ಷ್ಮಿ ಮಾತೆ ಮನೆಗೆ ಬರಬೇಕೆಂದು ನೀವು ಬಯಸಿದರೆ, ಮನೆಯ ಮುಖ್ಯ ಬಾಗಿಲಿಗೆ ಮಾವಿನ ಎಲೆಯ (Mango leaves) ತೋರಣವನ್ನು ಹಾಕಿ. ಆರ್ಥಿಕ ಬಿಕ್ಕಟ್ಟು ಮುಗಿಯುವುದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಮನೆಯ ಮುಂದಿನ ಭಾಗವನ್ನು ಯಾವಾಗಲೂ ಕ್ಲೀನ್ ಆಗಿ ಇಟ್ಟುಕೊಳ್ಳಬೇಕು. ಜೊತೆಗೆ ರಂಗೋಲಿ ಹಾಕಿದರೂ ಸಹ ಉತ್ತಮ. 

- ಹುಣ್ಣಿಮೆಯ ದಿನ ಚಂದ್ರ  ಪೂರ್ಣಆಕಾರದಲ್ಲಿರದೆ . ಈ ದಿನ ಚಂದ್ರ ಉದಯಿಸಿದ ಕೂಡಲೇ ಕಾರ್ತಿಕ ಭಗವಾನ್ ನ ತಾಯಿ ಎಂದು ಪರಿಗಣಿಸಲಾದ ಸಂಭೂತಿ, ಪ್ರೀತಿ, ಶಾಂತಿ, ಅನುಸೂಯ ಮತ್ತು ಕ್ಷಮಾ ಎಂಬ ಆರು ಸನ್ಯಾಸಿಗಳನ್ನು ಆರಾಧಿಸಿ. ಇದರಿಂದ ಆರ್ಥಿಕ ಸಮಸ್ಯೆಗಳು ದೂರವಾಗಿ ಮನೆ ತುಂಬಾ ಹಣ ತುಂಬಿರುತ್ತದೆ ಎಂದು ಹೇಳಲಾಗುತ್ತದೆ. 

- ಕಾರ್ತಿಕ ಪೂರ್ಣಿಮೆಯಂದು ದೇವತೆಗಳು ದೀಪ ಹಚ್ಚುವ ಮೂಲಕ ದೀಪಾವಳಿಯನ್ನೂ ಆಚರಿಸುತ್ತಾರೆ. ಈ ದಿನದಂದು ದೀಪದಾನ್ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ. ಸಾಲ ಇರುವವರು ಕಾರ್ತಿಕ ಪೂರ್ಣಿಮೆಯ ದಿನದಂದು ದೀಪ ಬೆಳಗಿಸಿ ನೀರಿನಲ್ಲಿ ಬಿಡಬೇಕು. ಆಗ ಬಹುಬೇಗ ಸಾಲದಿಂದ ಮುಕ್ತರಾಗುತ್ತಾರೆ.

- ಕಾರ್ತಿಕ ಪೂರ್ಣಿಮೆಯ ದಿನ ದಾನ ಮಾಡುವುದರಿಂದ 10 ಯಜ್ಞಗಳಷ್ಟು ಫಲ ನೀಡುತ್ತದೆ. ಆದ್ದರಿಂದ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ದಾನ ಮಾಡಿ. ಅದು ಸಣ್ಣದ್ದೇ ಆಗಿರಲಿ ಅಥವಾ ದೊಡ್ಡದ್ದೇ ಆಗಿರಲಿ, ಏನಾದರೂ ವಸ್ತುಗಳನ್ನು ತುಂಬಾ ಅಗತ್ಯ ಇರುವವರಿಗೆ ದಾನ ಮಾಡಿದರೆ, ಶುಭಫಲ ದೊರೆಯುವುದು. 

Latest Videos

click me!