ಸನಾತನ ಧರ್ಮದಲ್ಲಿ, (Sandatana Dharma) ಹುಟ್ಟಿನಿಂದ ಮರಣದವರೆಗೆ 16 ಸಂಸ್ಕಾರಗಳನ್ನು ಉಲ್ಲೇಖಿಸಲಾಗಿದೆ ಮತ್ತು ಅವುಗಳಲ್ಲಿ ಪ್ರಮುಖವಾದ ಸಂಸ್ಕಾರವೆಂದರೆ ಮದುವೆ. ಧಾರ್ಮಿಕ ಗ್ರಂಥಗಳಲ್ಲಿ, ಮದುವೆಯನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಯಾಕಂದ್ರೆ ಇಬ್ಬರು ವ್ಯಕ್ತಿಗಳು ಮದುವೆಯಾದಾಗ, ಅವರು ಜೀವನದಲ್ಲಿ ಒಬ್ಬರಿಗೊಬ್ಬರು ಪೂರಕರಾಗಿ ಬದುಕುತ್ತಾರೆ . ಗಂಡ ಮತ್ತು ಹೆಂಡತಿ ಪ್ರತಿಯೊಂದು ಸಂತೋಷ ಮತ್ತು ದುಃಖದಲ್ಲಿ ಪರಸ್ಪರ ಬೆಂಬಲಿಸುತ್ತಾರೆ ಮತ್ತು ಪರಸ್ಪರರಿಲ್ಲದೆ ಅಪೂರ್ಣವೆಂದು ಪರಿಗಣಿಸಲಾಗುತ್ತದೆ.