ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಚಕ್ರ ಚಿಹ್ನೆಗಳ ಜನರು ಎಷ್ಟೇ ಪ್ರಯತ್ನಿಸಿದ್ರೂ ಇತರರೊಂದಿಗೆ ಹೊಂದಿಕೊಳ್ಳಲು ಸಾಧ್ಯವಿಲ್ಲ. ಅವರು ಎಲ್ಲಿಗೆ ಹೋದರೂ ಯಾವಾಗಲೂ ಯಾವುದೋ ವಿಷಯಕ್ಕಾಗಿ ಜಗಳಗಳು ನಡೆಯುತ್ತಲೇ ಇರುತ್ತವೆ. ಅವರು ಇಷ್ಟಪಡದ ವಸ್ತುಗಳನ್ನು ಅಥವಾ ಜನರನ್ನು ನೋಡಿದಾಗ ಕಿರಿಕಿರಿಗೊಳ್ಳುತ್ತಾರೆ. ಕೋಪ ಬಂದ್ರಂತೂ ಯಾರ ಮಾತನ್ನೂ ಕೇಳುವುದಿಲ್ಲ. ಗ್ರಹಗಳು ಮತ್ತು ನಕ್ಷತ್ರಗಳನ್ನು ಆಧರಿಸಿ ಅವರ ಗುಣಲಕ್ಷಣಗಳು ವಿಭಿನ್ನವಾಗಿರುವುದರಿಂದ ಈ ರೀತಿ ವರ್ತಿಸುತ್ತಾರೆ . ಸ್ನೇಹಿತರನ್ನು ಸಹ ಪ್ರತಿಸ್ಪರ್ಧಿಗಳೆಂದು ಪರಿಗಣಿಸುತ್ತಾರೆ ಮತ್ತು ಜಗಳವಾಡುತ್ತಾರೆ. ಹಾಗಾದರೆ ಯಾವ ರಾಶಿಚಕ್ರ ಚಿಹ್ನೆಯವರಿಗೆ ಈ ಸ್ವಭಾವವಿದೆ, ಯಾರನ್ನು ಪ್ರತಿಸ್ಪರ್ಧಿಗಳೆಂದು ಪರಿಗಣಿಸುತ್ತಾರೆ? ಎಂಬುದರ ಕುರಿತು ಆಸಕ್ತಿದಾಯಕ ಸಂಗತಿಗಳನ್ನು ನೋಡೋಣ.