ಜೀವನದಲ್ಲಿ ಈ 3 ತಪ್ಪು ಮಾಡಿದ್ರೆ, ಹಣದ ಜೊತೆ ಮಾನ, ಮರ್ಯಾದೆ ಕೂಡ ಹೋಗುತ್ತೆ!
ಚಾಣಕ್ಯ ನೀತಿಯಲ್ಲಿ ತಿಳಿಸಿದ ಈ 3 ತಪ್ಪುಗಳನ್ನು ತಪ್ಪಿಯೂ ಕೂಡ ಮಾಡಬೇಡಿ, ಹಣ ಮತ್ತು ಗೌರವ ಎರಡೂ ಕಳೆದುಹೋಗುತ್ತವೆ. ಆ ಮೂರು ತಪ್ಪುಗಳು ಯಾವುವು ಅನ್ನೋದನ್ನು ನೋಡೋಣ.
ಚಾಣಕ್ಯ ನೀತಿಯಲ್ಲಿ ತಿಳಿಸಿದ ಈ 3 ತಪ್ಪುಗಳನ್ನು ತಪ್ಪಿಯೂ ಕೂಡ ಮಾಡಬೇಡಿ, ಹಣ ಮತ್ತು ಗೌರವ ಎರಡೂ ಕಳೆದುಹೋಗುತ್ತವೆ. ಆ ಮೂರು ತಪ್ಪುಗಳು ಯಾವುವು ಅನ್ನೋದನ್ನು ನೋಡೋಣ.
ಚಾಣಕ್ಯ ನೀತಿಯು (Chanakya Niti) ಜೀವನದ ಕುರಿತು ಬಹಳಷ್ಟು ಮಾಹಿತಿಯನ್ನು ನೀಡುತ್ತೆ. ಜೀವನದಲ್ಲಿ ಏನನ್ನು ಮಾಡಬಾರದು? ಏನು ಮಾಡಬೇಕು? ಎನ್ನುವ ವಿಷಯಗಳನ್ನು ಸಹ ಚಾಣಕ್ಯ ನೀತಿ ಹೊಂದಿದೆ. ಅದರಲ್ಲೂ ಮೂರು ಮುಖ್ಯವಾದ ವಿಷ್ಯಗಳನ್ನು ನಾವು ತಪ್ಪಿಯೂ ಮಾಡಬಾರದು ಎನ್ನುತ್ತೆ ಚಾಣಕ್ಯ ನೀತಿ.
ಚಾಣಕ್ಯ ನೀತಿ ನಮಗೆ ಸಂತೋಷದ ಜೀವನವನ್ನು (happy life)ನಡೆಸಲು ಕಲಿಸುತ್ತದೆ. ಇದು ತಪ್ಪಿಯೂ ಕೂಡ ಮಾಡಬಾರದ ಕೆಲವು ಕೆಲಸಗಳ ಬಗ್ಗೆ ಹೇಳುತ್ತದೆ, ಇಲ್ಲದಿದ್ದರೆ ಗೌರವದ ಜೊತೆಗೆ ಹಣವೂ ನಷ್ಟವಾಗುತ್ತದೆ. ಹಾಗಿದ್ರೆ ನೀವು ಮಾಡಬಾರದ ಆ ಕೆಲಸಗಳು ಯಾವುವು ಅನ್ನೋದನ್ನು ನೋಡೋಣ ಬನ್ನಿ.
ಗೌರವ ಮತ್ತು ಹಣ (respect and money) ಎರಡನ್ನೂ ಕಳೆದುಕೊಳ್ಳುವ ಯಾವ ತಪ್ಪುಗಳನ್ನು ನಾವು ಮಾಡಬಾರದು ಎಂಬುದನ್ನು ಇಲ್ಲಿ ತಿಳಿಸಿದ್ದೇವೆ. ಚಾಣಕ್ಯ ಹೇಳಿದ ಈ ಮೂರು ಕೆಲಸಗಳನ್ನು ನೀವು ಮಾಡದೇ ಇದ್ದರೆ, ನೀವು ಜೀವನದಲ್ಲಿ ಯಶಸ್ವಿಯಾಗಿ, ಖುಷಿಯಾಗಿ ಉಳಿಯಬಹುದು. ಒಂದು ವೇಳೆ ನೀವು ಆ ತಪ್ಪುಗಳನ್ನು ಮಾಡಿದರೆ, ನಿಮ್ಮ ಜೀವನ ನರಕ ಆಗಬಹುದು. ಆ ಮೂರು ಕೆಲಸ ಯಾವುದು ನೋಡೋಣ.
ಚಾಣಕ್ಯನ ಪ್ರಕಾರ, ಪದೇ ಪದೇ ಸಾಲ (taking loan) ಪಡೆಯುವ ಅಭ್ಯಾಸವು ವ್ಯಕ್ತಿಯನ್ನು ಬಡವನನ್ನಾಗಿ ಮಾಡಬಹುದು. ಅದಕ್ಕಾಗಿಯೇ ನಾವು ಹಣವನ್ನು ಸಾಲ ಪಡೆಯುವುದನ್ನು ತಪ್ಪಿಸಬೇಕು, ಅದು ನಿಮ್ಮ ಖ್ಯಾತಿಗೆ ಹಾನಿ ಮಾಡುತ್ತದೆ. ಸಾಲ ಪಡೆಯುತ್ತಾ ಹೋದರೆ, ಅದರ ಬಡ್ಡಿ, ಅಸಲು ಹೆಚ್ಚಾಗುತ್ತಾ, ಮುಂದೆ ನೀವು ಸಾಲ ತೀರಿಸೋದಕ್ಕಾಗಿಯೇ ಜೀವಿಸಬೇಕಾಗುತ್ತೆ.
ಎರಡನೇಯದಾಗಿ ಚಾಣಕ್ಯ ಹೇಳುತ್ತಾನೆ, ತಂದೆ-ತಾಯಿ ಮತ್ತು ಹಿರಿಯರನ್ನು (disrespecting parents) ಅವಮಾನಿಸುವವರು. ಹಣದ ಜೊತೆಗೆ ತಮ್ಮ ಗೌರವವನ್ನೂ ಕಳೆದುಕೊಳ್ಳುತ್ತಾರೆ. ತಂದೆ -ತಾಯಿಯಿಂದಲೇ ನಾವು ಇಲ್ಲಿವರೆಗೆ ಬಂದಿದ್ದೇವೆ, ತಂದೆ ತಾಯಿ ಅಂದ್ರೆ ದೇವರಿಗೆ ಸಮಾನ, ಅವರಿಗೆ ಅವಮಾನ ಮಾಡಿದರೆ, ನಮಗೆ ಉಳಿಗಾಲ ಇದೆಯೇ?
ಇನ್ನು ಕೊನೆಯದಾಗಿ ಹಣ ಪಡೆದ ನಂತರ ದುರಹಂಕಾರಿಯಾಗುವುದು ಸಹ ವ್ಯಕ್ತಿಯನ್ನು ತಪ್ಪು ದಾರಿಗೆ ಕೊಂಡೊಯ್ಯಬಹುದು. ಇಂತಹ ವ್ಯಕ್ತಿ ಕೊನೆಗೊಂದು ದಿನ ತನ್ನ ಮಾನ ಮರ್ಯಾದೆ ಎಲ್ಲವನ್ನೂ ಕೂಡ ಕಳೆದುಕೊಂಡು, ಬೀದಿಗೆ ಬರುವಂತಾಗುತ್ತದೆ. ಹಾಗಾಗಿ ಹಣ ಪಡೆದ ನಂತರ ದುರಹಂಕಾರ ತೋರಿಸಬೇಡಿ.