ಪದೇ ಪದೆ ಈ ಕನಸು ಬೀಳುತ್ತಿದ್ಯಾ? ಅಂದ್ರೆ ಶೀಘ್ರದಲ್ಲೇ ಕೆಲಸ, ಪ್ರಮೋಷನ್ ಗ್ಯಾರಂಟಿ!

Published : Apr 18, 2025, 01:45 PM ISTUpdated : Apr 18, 2025, 04:51 PM IST

ನಿಮಗೆ ಪದೇ ಪದೇ ಈ ಕನಸುಗಳು ಬೀಳುತ್ತಿದ್ದರೆ, ಶೀಘ್ರದಲ್ಲೇ ನಿಮಗೆ ಪ್ರಮೋಷನ್ ಸಿಗುತ್ತೆ ಅಥವಾ ಹೊಸ ಕೆಲಸ ಸಿಗುತ್ತೆ ಅಂತ ಅರ್ಥ. ಆ ಕನಸುಗಳು ಯಾವುವು ನೋಡೋಣ.   

PREV
17
ಪದೇ ಪದೆ ಈ ಕನಸು ಬೀಳುತ್ತಿದ್ಯಾ? ಅಂದ್ರೆ ಶೀಘ್ರದಲ್ಲೇ ಕೆಲಸ, ಪ್ರಮೋಷನ್ ಗ್ಯಾರಂಟಿ!

ಕನಸು ಕಾಣದೇ ಇರೋರು ಯಾರು ಇಲ್ಲ ಅಲ್ವಾ? ಆದರೆ ನಿಮಗೆ ಬೀಳೋ ಪ್ರತಿ ಕನಸು ಕೂಡ ನಿಮಗೆ ಏನನ್ನೋ ಹೇಳಲು ಹೊರಟಿದೆ ಅನ್ನೋದು ನಿಮಗೆ ಗೊತ್ತಾ? ಹೌದು ನಿಮ್ಮ ಕನಸಿನಲ್ಲಿ (dreams) ಹೂವು ಅರಳುವುದು, ಸ್ವಸ್ತಿಕ, ಓಂ ಕಂಡರೆ ಕೆಲಸಕ್ಕೆ ಸಂಬಂಧಿಸಿದಂತೆ ನಿಮಗೆ ಸಿಹಿ ಸುದ್ದಿ ಸಿಗಲಿದೆ ಅನ್ನೋದನ್ನು ಸೂಚಿಸುತ್ತೆ. 
 

27

ಮೊದಲನೇಯದಾಗಿ ನಿಮ್ಮ ಕನಸಿನಲ್ಲಿ ನೀವು ಒಂದು ಸ್ಪರ್ಧೆಯನ್ನು ಗೆಲ್ಲುವುದನ್ನು ನೋಡಿದರೆ, ಜೀವನದಲ್ಲಿ ವಿಶೇಷ ಸ್ಥಾನವನ್ನು ಪಡೆಯಬಹುದು ಎಂದರ್ಥ. ಅಂದ್ರೆ ಕೆಲಸದಲ್ಲಿ ಪ್ರೊಮೋಷನ್ ಸಿಗಬಹುದು ಅಥವಾ ಸಮಾಜದಲ್ಲಿ ಗೌರವ ಸಿಗಬಹುದು ಎಂದು ಅರ್ಥ. 
 

37

ಸ್ವಪ್ನ ಶಾಸ್ತ್ರದ  ಪ್ರಕಾರ, ಒಂದು ವೇಳೆ ನಿಮಗೆ ಕನಸಿನಲ್ಲಿ ಸ್ವಸ್ತಿಕ ಅಥವಾ ಓಂ ಚಿಹ್ನೆಗಳು (Swastik and Om)  ಕಾಣಿಸಿಕೊಂಡರೆ ಖಂಡಿತವಾಗಿಯೂ ಶೀಘ್ರದಲ್ಲೇ ನಿಮಗೆ ಕೆಲಸದಲ್ಲಿ ಬಡ್ತಿ ಸಿಗುವ ಸಾಧ್ಯತೆಗಳಿವೆ. ಹಾಗಾಗಿ ಖುಷಿಯಾಗಿರಿ. 
 

47

ಸಾಮಾನ್ಯವಾಗಿ ನಮ್ಮ ಕನಸಿನಲ್ಲಿ ಪ್ರಾಣಿಗಳು ಕಾಣಿಸಿಕೊಳ್ಳುತ್ತವೆ.  ಇತರ ಪ್ರಾಣಿಗಳ ಬಗ್ಗೆ ಚಿಂತೆ ಬಿಡಿ, ಒಂದು ವೇಳೆ ನಿಮ್ಮ ಕನಸಿನಲ್ಲಿ ಬಿಳಿ ಕುದುರೆ ಅಥವಾ ಬಿಳಿ ಹೋರಿ ಕಂಡರೆ ನಿಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಕೆಲವು ಗುಡ್ ನ್ಯೂಸ್ ಸಿಗಲಿದೆ ಅನ್ನೋದನ್ನು ಇದು ಸೂಚಿಸುತ್ತೆ. 
 

57

ಇದಲ್ಲದೇ ನಿಮ್ಮ ಕನಸಿನಲ್ಲಿ ಹೂವು ಅರಳುತ್ತಿರುವುದನ್ನು ನೀವು ನೋಡಿದರೆ, ನಿಮ್ಮ ಕೆಲಸಕ್ಕೆ ಸಂಬಂಧಿಸಿದ ಒಳ್ಳೆಯ ಸುದ್ದಿಯನ್ನು ನೀವು ಪಡೆಯುತ್ತೀರಿ ಎಂದು ಅರ್ಥ. ಈ ಒಳ್ಳೆ ಸುದ್ದಿಯಲ್ಲಿ ಉನ್ನತ ಉದ್ಯೋಗವೂ ಇರಬಹುದು. ಪ್ರಮೋಷನ್ (job promotion) ಕೂಡ ಇರಬಹುದು, ನಿಮಗಿಷ್ಟದ ಜಾಗಕ್ಕೆ ಟ್ರಾನ್ಸ್ ಫರ್ ಸಹ ಇರಬಹುದು. 
 

67

ಇದಿಷ್ಟೇ ಅಲ್ಲ ನೀವು ಕನಸಿನಲ್ಲಿ ಕಿರೀಟ ಅಥವಾ ರಾಜನ ಉಡುಪನ್ನು ಧರಿಸಿರುವುದನ್ನು ನೋಡಿದರೆ, ನಿಮಗೆ ಕೆಲವು ಶುಭ ಫಲಿತಾಂಶಗಳು ಸಿಗುತ್ತವೆ. ಸ್ಯಾಲರಿ ಹೆಚ್ಚಾಗುವ, ಉನ್ನತ ಹುದ್ದೆಗೇರುವ ಸಾಧ್ಯತೆ ತುಂಬಾನೆ ಹೆಚ್ಚಾಗಿದೆ. 
 

77

ಇನ್ನು ಕೊನೆಯದಾಗಿ ನಿಮ್ಮ ಕನಸಿನಲ್ಲಿ ಸಂತರು ಅಥವಾ ಮಹಾತ್ಮರು ಕಂಡರೆ ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ಹಾಗಾಗಿ ಈ ಎಲ್ಲಾ ಕನಸು ಬಿದ್ರೆ, ಖುಷಿ ಪಡಿ, ಜೊತೆಗೆ ನಿಮ್ಮ ಕನಸು ನನಸಾಗಿಸೋದಕ್ಕೆ ನೀವು ಕೂಡ ಶ್ರಮಿಸಿ, ಎಲ್ಲವೂ ಸಾಧ್ಯ ಆಗುತ್ತೆ. 
 

Read more Photos on
click me!

Recommended Stories