ಅಕ್ಷಯ ತೃತೀಯದಂದು ಚಿನ್ನ ಮಾತ್ರ ಅಲ್ಲ… ಈ ವಸ್ತುಗಳನ್ನ ಖರೀದಿಸಿದ್ರೂ ಅದೃಷ್ಟ

Published : Apr 18, 2025, 10:35 AM ISTUpdated : Apr 18, 2025, 11:50 AM IST

ಅಕ್ಷಯ ತೃತೀಯವನ್ನು ಬಹಳ ಮುಖ್ಯ ಮತ್ತು ವಿಶೇಷವೆಂದು ಪರಿಗಣಿಸಲಾಗಿದೆ. ಈ ದಿನ ಚಿನ್ನ ಖರೀದಿಸುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಚಿನ್ನ ಅಲ್ಲದೇ ಈ ವಸ್ತುಗಳನ್ನು ಈ ದಿನ ಖರೀದಿಸೋದು ಸಹ ಶುಭವಾಗಿದೆ.   

PREV
15
ಅಕ್ಷಯ ತೃತೀಯದಂದು ಚಿನ್ನ ಮಾತ್ರ ಅಲ್ಲ… ಈ ವಸ್ತುಗಳನ್ನ ಖರೀದಿಸಿದ್ರೂ ಅದೃಷ್ಟ

ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಅಕ್ಷಯ ತೃತೀಯ (Akshaya Thritiya) ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನದಂದು ಯಾವುದೇ ಶುಭ ಕೆಲಸ ಮಾಡಲು ಮುಹೂರ್ತ ನೋಡುವ ಅಗತ್ಯವಿಲ್ಲದ ಕಾರಣ ಇದನ್ನು ಹಿಂದೂ ಧರ್ಮದಲ್ಲಿ ಅದ್ಭುತವಾದ ಮುಹೂರ್ತ ಎಂದೂ ಕರೆಯುತ್ತಾರೆ. ವೈದಿಕ ಕ್ಯಾಲೆಂಡರ್ ಪ್ರಕಾರ, ಈ ವರ್ಷ ಅಕ್ಷಯ ತೃತೀಯವನ್ನು ಏಪ್ರಿಲ್ 30, 2025 ರಂದು ಆಚರಿಸಲಾಗುತ್ತದೆ. 
 

25

ಅಕ್ಷಯ ತೃತೀಯ ದಿನದಂದು ದಾನ ಮಾಡುವುದು ತುಂಬಾನೆ ಪುಣ್ಯವಾದ ಕೆಲಸ ಪರಿಗಣಿಸಲಾಗುತ್ತದೆ ಮತ್ತು ಈ ದಿನದಂದು ಚಿನ್ನವನ್ನು ಖರೀದಿಸುವುದು (buying gold) ವಿಶೇಷವಾಗಿ ಮಂಗಳಕರವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಕ್ಷಯ ತೃತೀಯ ದಿನದಂದು ಚಿನ್ನವನ್ನು ಹೊರತುಪಡಿಸಿ ಇತರ ವಸ್ತುಗಳನ್ನು ಖರೀದಿಸುವುದು ಸಹ ಶುಭವೆಂದು ಪರಿಗಣಿಸಲಾಗಿದೆ. ಅಕ್ಷಯ ತೃತೀಯ ದಿನದಂದು ಏನನ್ನು ಖರೀದಿಸಬಹುದು ನೋಡೋಣ. 
 

35

ಮನೆ ಕೊಳ್ಳುವುದು ಅದೃಷ್ಟ!
ನೀವು ಹೊಸ ಮನೆ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಅಕ್ಷಯ ತೃತೀಯ ದಿನವು ತುಂಬಾ ವಿಶೇಷವಾಗಿದೆ. ಈ ದಿನದಂದು ಹೊಸ ಮನೆ ಖರೀದಿಸುವುದು ಶುಭ ಮತ್ತು ಸಮೃದ್ಧಿಯನ್ನು ತರುತ್ತದೆ. ಅಕ್ಷಯ ತೃತೀಯ ದಿನದಂದು ಮನೆ ಖರೀದಿಸುವುದರಿಂದ  (buying new home)ಸಂತೋಷ ಮತ್ತು ಸಮೃದ್ಧಿ ಬರುತ್ತದೆ. ಇದಲ್ಲದೆ, ಅಕ್ಷಯ ತೃತೀಯ ದಿನವು ಹೊಸ ಮನೆ ಪ್ರವೇಶಿಸಲು ತುಂಬಾ ಶುಭವಾಗಿದೆ. ಇದಕ್ಕಾಗಿ ನೀವು ಪಂಡಿತರಿಂದ ಶುಭ ಸಮಯವನ್ನು ಪಡೆಯುವ ಅಗತ್ಯವಿಲ್ಲ.

45

ಹೊಸ ವಾಹನ ಖರೀದಿಸುವುದು
ಧಾರ್ಮಿಕ ನಂಬಿಕೆಗಳ ಪ್ರಕಾರ ಚಿನ್ನದ ಆಭರಣ ಮತ್ತು ನಾಣ್ಯಗಳನ್ನು ಖರೀದಿಸುವುದರ ಜೊತೆಗೆ, ನೀವು ಹೊಸ ವಾಹನವನ್ನು ಸಹ ಖರೀದಿಸಬಹುದು. ನೀವು ಮನೆಗೆ ಹೊಸ ವಾಹನ ತರುವ ಬಗ್ಗೆ ಯೋಚಿಸುತ್ತಿದ್ದರೆ, ಅಕ್ಷಯ ತೃತೀಯವು ತುಂಬಾ ಶುಭ ದಿನವಾಗಿದೆ. ಈ ದಿನ ಹೊಸ ವಾಹನ ತರುವುದು ಶುಭವೆಂದು ಪರಿಗಣಿಸಲಾಗಿದೆ ಮತ್ತು ಇದಕ್ಕೆ ಯಾವುದೇ ಮುಹೂರ್ತದ ಅಗತ್ಯವಿಲ್ಲ. ಏಕೆಂದರೆ ಅಕ್ಷಯ ತೃತೀಯ ಶುಭ ಸಮಯ. ಅಕ್ಷಯ ತೃತೀಯ ದಿನದಂದು ಹೊಸ ವಾಹನವನ್ನು ಖರೀದಿಸಿ ಮತ್ತು ಅದನ್ನು ವಿಧಿವಿಧಾನಗಳ ಪ್ರಕಾರ ಪೂಜಿಸಿ.

55

ಬೆಳ್ಳಿ ಆಭರಣಗಳು
ಸಾಮಾನ್ಯವಾಗಿ ಜನರು ಅಕ್ಷಯ ತೃತೀಯ ದಿನದಂದು ಚಿನ್ನಾಭರಣ ಖರೀದಿಸುತ್ತಾರೆ. ಆದರೆ ಏರುತ್ತಿರುವ ಚಿನ್ನದ ಬೆಲೆಯನ್ನು ಪರಿಗಣಿಸಿದರೆ, ಚಿನ್ನ ಖರೀದಿಸುವುದು ಎಲ್ಲರಿಗೂ ಸಾಧ್ಯವಿಲ್ಲ. ಆದ್ದರಿಂದ, ಅಕ್ಷಯ ತೃತೀಯ ದಿನದಂದು ಚಿನ್ನವನ್ನು ಹೊರತುಪಡಿಸಿ, ಬೆಳ್ಳಿ ಆಭರಣಗಳನ್ನು (silver jewellery) ಸಹ ಖರೀದಿಸಬಹುದು. ಈ ದಿನ ಬೆಳ್ಳಿ ಆಭರಣಗಳನ್ನು ಮನೆಗೆ ತರೋದರಿಂದ ನಕಾರಾತ್ಮಕತೆ ದೂರವಾಗುತ್ತದೆ ಮತ್ತು ಸಂತೋಷ ಮತ್ತು ಸಮೃದ್ಧಿ ಬರುತ್ತದೆ.

Read more Photos on
click me!

Recommended Stories