Published : Apr 17, 2025, 06:11 PM ISTUpdated : Apr 18, 2025, 08:58 AM IST
ಮಾನವರ ಅಲ್ಪಾಯುಷ್ಯಕ್ಕೆ ಕಾರಣವೇನೆಂದು ರಾಜ ಧೃತರಾಷ್ಟ್ರನು ಮಹಾತ್ಮ ವಿದುರನನ್ನು ಕೇಳಿದಾಗ. ವಿಧುರ ಈ ಬಗ್ಗೆ ವಿವರಣೆ ನೀಡಿದ್ದರು. ವಿಧುರ ನೀತಿಯಲ್ಲಿರುವ ಅಲ್ಪಾಯುಷ್ಯಕ್ಕೆ ಕಾರಣಗಳನ್ನು ತಿಳಿಯಿರಿ.
ಧೃತರಾಷ್ಟ್ರನು ವಿಧುರನ ಬಳಿ ಅಲ್ಪಾಯುಷ್ಯಕ್ಕೆ ಕಾರಣಗಳನ್ನು ಕೇಳಿದಾಗ, ಆ ಕುರಿತು ವಿಧುರ ವಿವರಣೆ ನೀಡಿದ್ದರು. ಆ ವಿವರಣೆಗಳನ್ನು ವಿಧುರ ನೀತಿಯಲ್ಲಿ (Vidhura Niti) ಉಲ್ಲೇಖಿಸಲಾಗಿದೆ. ಈ ನೀತಿಯ ಪ್ರಕಾರ, ಈ ಆರು ಕಾರಣಗಳಿಂದ ವ್ಯಕ್ತಿಯ ಜೀವಿತಾವಧಿ ಕಡಿಮೆಯಾಗಬಹುದು.
28
Vidura Niti
ಪ್ರತಿಯೊಬ್ಬ ವ್ಯಕ್ತಿಯ ಜನನದ ಸಮಯದಲ್ಲಿ ಅವನ ಮರಣದ ಸಮಯವನ್ನು ಬರೆಯಲಾಗುತ್ತದೆ ಎಂದು ಶಾಸ್ತ್ರಗಳು ಮತ್ತು ಪುರಾಣಗಳಲ್ಲಿ ಹೇಳಲಾಗಿದೆ. ಆದರೆ ಈ ಅವಧಿಯಲ್ಲಿ ಅವರು ಮಾಡುವ ತಪ್ಪುಗಳಿಂದಾಗಿ ಜನರ ಜೀವಿತಾವಧಿ ಕಡಿಮೆಯಾಗುತ್ತೆ. ಆ ತಪ್ಪುಗಳು ಯಾವುವು ಅನ್ನೋದನ್ನು ನೋಡೋಣ.
38
ಮೊದಲನೇಯದಾಗಿ ಅಹಂಕಾರ (ego). ಅಹಂಕಾರವು ವ್ಯಕ್ತಿಯ ಆಯುಷ್ಯವನ್ನು ಕಡಿಮೆ ಮಾಡುತ್ತದೆ. ಯಾವ ವ್ಯಕ್ತಿಯು ಹೆಚ್ಚು ಅಹಂಕಾರ ಪಡುತ್ತಾನೋ, ಆತ ಹೆಚ್ಚು ಕಾಲ ಜೀವಿಸೋದಕ್ಕೆ ಸಾಧ್ಯ ಇಲ್ಲ.
48
ಇನ್ನು ಕೋಪ (getting angry) ಅನ್ನೋದು ತುಂಬಾನೆ ಕೆಟ್ಟದ್ದು, ನಿಮ್ಮ ಕೋಪ ನಿಮಗೆ ಮುಳುವಾಗಬಹುದು ಅನ್ನೋದು ನಿಮಗೆ ಗೊತ್ತೆ ಇದೆ. ಅದೇ ರೀತಿ ಕೋಪಗೊಳ್ಳುವುದರಿಂದ ನಿಮ್ಮ ಜೀವಿತಾವಧಿಯೂ ಕಡಿಮೆಯಾಗಬಹುದು.
58
ಇನ್ನು ಹೆಚ್ಚು ಮಾತನಾಡುವವರ ಜೀವಿತಾವಧಿ (lifespan) ಕೂಡ ಕಡಿಮೆಯೇ. ಹೌದು ಹೆಚ್ಚು ಮಾತನಾಡುವ ಜನರು ಕಡಿಮೆ ಮಾತನಾಡುವವರಿಗಿಂತ ಕಡಿಮೆ ಜೀವಿತಾವಧಿಯನ್ನು ಹೊಂದಿರುತ್ತಾರೆ ಎಂದು ಶಾಸ್ತ್ರಗಳು ತಿಳಿಸಿದೆ.
68
ಇನ್ನು ಕೆಟ್ಟ ಕೆಲಸ ಮಾಡುವ ಮೂಲಕ ಸಮಾಜದಲ್ಲಿ ಮರ್ಯಾದೆ, ಗೌರವವನ್ನು ಕಳೆದುಕೊಂಡು ಬದುಕುವ ಜನರು ಕೂಡ ಹಲವರು ಇರುತ್ತಾರೆ. ಯಾರು ಸಮಾಜದಲ್ಲಿ ಕಳಂಕಿತರಾಗಿರುತ್ತಾರೆಯೋ ಅವರ ಜೀವಿತಾವಧಿ ಕೂಡ ಕಡಿಮೆಯಾಗುತ್ತದೆ.
78
ತಂದೆ ತಾಯಿ ಹಾಗೂ ಕುಟುಂಬದ ಸದಸ್ಯರನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳುವುದು ಮುಖ್ಯ, ಇದರಿಂದ ಜೀವನ ಚೆನ್ನಾಗಿರುತ್ತೆ. ಆದರೆ ನೀವು ನಿಮ್ಮ ಕುಟುಂಬದ ಜನರಿಗೆ ಹಿರಿಯರಿಗೆ ಗೌರವ ಕೊಡುವುದಿಲ್ಲವೋ, ಅವರನ್ನು ಕೆಟ್ಟದಾಗಿ ನಡೆಸುತ್ತೀರೋ ಆವಾಗ ನಿಮ್ಮ ಆಯುಷ್ಯವನ್ನು ಕಡಿಮೆಯಾಗುತ್ತೆ.
88
ಇದಲ್ಲದೇ ಸ್ವಾರ್ಥಿಯಾಗಿರುವುದು (selfish) ಒಳ್ಳೆಯದಲ್ಲ. ಸ್ವಾರ್ಥದಿಂದ ನೀವು ಎಲ್ಲವನ್ನೂ ಕಳೆದುಕೊಳ್ಳುತ್ತೀರಿ. ನಿಮ್ಮ ಅತಿಯಾದ ಸ್ವಾರ್ಥದಿಂದಾಗಿ ನಿಮ್ಮ ವಯಸ್ಸು ಹಲವಾರು ವರ್ಷಗಳಷ್ಟು ಕಡಿಮೆಯಾಗುತ್ತೆ, ಅಂದ್ರೆ ನೀವು ಬೇಗನೆ ಸಾಯ್ತಿರಿ.