ಈ ರಾಶಿಗಳಿಗೆ ಮಾತೇ ಮಾಣಿಕ್ಯ, ಮಾತೇ ಮನೆದೇವ್ರು!

First Published | Nov 13, 2022, 12:51 PM IST

ಎಲ್ಲರ ಪಾಲಿಗೂ ಮಾತು ಬೆಳ್ಳಿಯೇ ಅಲ್ಲ.. ಕೆಲವರಿಗೆ ಮಾತೇ ಮಾಣಿಕ್ಯ, ಮೌನವೆಂದರೆ ಕಬ್ಬಿಣ. ಹೀಗೆ ಮಾತನ್ನು ಬಹಳ ಇಷ್ಟಪಟ್ಟು ತುಂಬಾ ಆಡುವವರು ಯಾವ ರಾಶಿಗಳಿಗೆ ಸೇರಿರುತ್ತಾರೆ ಗೊತ್ತಾ?

ಎಲ್ಲರ ಪಾಲಿಗೂ ಮಾತು ಬೆಳ್ಳಿಯೇ ಅಲ್ಲ.. ಕೆಲವರಿಗೆ ಮಾತೇ ಮಾಣಿಕ್ಯ, ಮೌನವೆಂದರೆ ಕಬ್ಬಿಣ. ಹೀಗೆ ಮಾತನ್ನು ಬಹಳ ಇಷ್ಟಪಟ್ಟು ತುಂಬಾ ಆಡುವವರು ಯಾವ ರಾಶಿಗಳಿಗೆ ಸೇರಿರುತ್ತಾರೆ ಗೊತ್ತಾ?

ಮಿಥುನ ರಾಶಿ(Gemini)
ಸಂವಹನ ಮತ್ತು ಬುದ್ಧಿಶಕ್ತಿಯ ದೇವರು ಎನಿಸಿಕೊಂಡಿರುವ ಬುಧ ಈ ಚಿಹ್ನೆಯ ಆಡಳಿತ ಗ್ರಹವಾಗಿರುವುದರಿಂದ, ಮಿಥುನ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಸರಿಯಾಗಿಯೇ ಇದೆ. ಹೊಂದಿಕೊಳ್ಳುವ ಜಾಣ್ಮೆ ಹೊಂದಿರುವ ಬುದ್ಧಿವಂತ ರಾಶಿಚಕ್ರ ಮಿಥುನ ರಾಶಿಯವರು, ಅಪರಿಚಿತರೊಂದಿಗೆ ಕೂಡಾ ಯಾವುದೇ ವಿಷಯದ ಬಗ್ಗೆ ಗಂಟೆಗಳ ಕಾಲ ಮಾತನಾಡಬಲ್ಲರು. ಅವರ ಹಾಸ್ಯಪ್ರಜ್ಞೆ ಮತ್ತು ವೈವಿಧ್ಯಮಯ ಮಾತು ಬಹಳ ನಿರರ್ಗಳವಾಗಿರುತ್ತದೆ. ಹಾಗಾಗಿ, ಅವರ ಸಂಭಾಷಣೆಗಳು ಎಂದಿಗೂ ಬಲವಂತವೆಂಬಂತೆ ತೋರುವುದಿಲ್ಲ. ಎಂಥ ಮೌನಿಗಳನ್ನೂ ಮಾತನಾಡಿಸುವ ಕಲೆ ಇವರದು. 

Tap to resize

ಧನು ರಾಶಿ(Sagittarius)
ಧನು ರಾಶಿ ಅವರು ಅರ್ಥಪೂರ್ಣ ಸಂಭಾಷಣೆಯನ್ನು ಬಹಳ ಚೆನ್ನಾಗಿ ನಿಭಾಯಿಸುತ್ತಾರೆ. ತರ್ಕಬದ್ಧ ಮಾತುಗಳಿಗೆ ಕ್ಷಣದಲ್ಲಿ ಜೀವ ತುಂಬುತ್ತಾರೆ. ಈ ಆಶಾವಾದಿ ಚಿಹ್ನೆಯು ಜೀವನದಲ್ಲಿ ಉತ್ತಮವಾದದ್ದನ್ನು ನೋಡುತ್ತದೆ ಮತ್ತು ಆದ್ದರಿಂದ ಅವರ ಸುತ್ತಲಿನ ಪ್ರಪಂಚದಿಂದ ಸುಲಭವಾಗಿ ಆಕರ್ಷಿತವಾಗುತ್ತದೆ. ಇದು ಉತ್ಸಾಹಭರಿತ ಮತ್ತು ಉತ್ತಮ ತಿಳುವಳಿಕೆಯುಳ್ಳ ಚರ್ಚೆಗಳಿಗೆ ಕಾರಣವಾಗುತ್ತದೆ. ಲಹರಿಗೆ ಇಳಿದರೆ ಧನು ರಾಶಿಯ ಮಾತನ್ನು ಮಧ್ಯದಲ್ಲಿ ನಿಲ್ಲಿಸಲು ಕಷ್ಟವಾಗುತ್ತದೆ.

ಸಿಂಹ ರಾಶಿ(Leo)
ಗಮನದ ಕೇಂದ್ರಬಿಂದುವಾಗಲು ಬಯಸುವ ಸಿಂಹಕ್ಕೆ ಮಾತನಾಡುವ ಸ್ವಭಾವವು ಸಾಮಾನ್ಯವಾಗಿ ಕೈಜೋಡಿಸುತ್ತದೆ. ನೀವು ಸಿಂಹ ರಾಶಿಯವರೊಂದಿಗೆ ಮಾತನಾಡುವಾಗ, ಕೆಲವೊಮ್ಮೆ ನೀವು ಯಾವುದೋ ಪ್ರದರ್ಶನದಲ್ಲಿರುವಂತೆ ಭಾವಿಸಿದರೂ ತಪ್ಪಿಲ್ಲ. ಏಕೆಂದರೆ, ಅವರು ಏಕಪ್ರಕಾರವಾಗಿ ಮಾತನಾಡುತ್ತಾ ಹೋಗುತ್ತಾರೆ. ನೀವದಕ್ಕೆ ಮೆಚ್ಚುಗೆ ಸೂಚಿಸಿದ ನಂತರವೇ ನಿಮ್ಮ ಅಭಿಪ್ರಾಯವನ್ನು ನೀಡಲು ಸಾಧ್ಯವಾಗುವುದು.

ಮೀನ ರಾಶಿ(Pisces)
ಮೀನ ರಾಶಿಯವರು ತಾಳ್ಮೆಯಿಂದ ಮಾತನಾಡುವವರು. ಬಹುಶಃ ಅತ್ಯಂತ ಸಹಿಷ್ಣು ಮತ್ತು ಸೂಕ್ಷ್ಮ ರಾಶಿಚಕ್ರ ಚಿಹ್ನೆಯಾಗಿ, ಮೀನ ರಾಶಿಯವರು ವ್ಯಕ್ತಿಯ ಮಾತುಗಳನ್ನು ಕೇಳಲು ಹೆಚ್ಚು ಸಂತೋಷ ಪಡುತ್ತಾರೆ. ಅವರು ಇತರರನ್ನು ಬಹು ಬೇಗ ಅರ್ಥ ಮಾಡಿಕೊಳ್ಳುತ್ತಾರೆ. ಕಾರಣ ಅವರಲ್ಲಿ  ಸಹಾನುಭೂತಿ ಹೆಚ್ಚು. ಒಮ್ಮೆ ಮಾತನಾಡಲು ವೇದಿಕೆಯನ್ನು ನೀಡಿದರೆ, ಮೀನ ರಾಶಿಯವರು ತಾವು ಸಂಗ್ರಹಿಸುತ್ತಿರುವ ಎಲ್ಲಾ ಆಲೋಚನೆಗಳು ಮತ್ತು ಸಲಹೆಗಳನ್ನು ಮೃದುಮಾತಿನಲ್ಲೇ ಅನಾವರಣಗೊಳಿಸುತ್ತಾರೆ.

ಮೇಷ ರಾಶಿ(Aries)
ಮೇಷ ರಾಶಿಯವರು ತಮ್ಮ ಪ್ರಾಬಲ್ಯವನ್ನು ಪ್ರತಿಪಾದಿಸಲು ಇಷ್ಟಪಡುತ್ತಾರೆ. ಇದಕ್ಕೆ ಮಾತನ್ನು ಕೂಡಾ ಬಳಸಿಕೊಳ್ಳುತ್ತಾರೆ. ಹೋದಲ್ಲೆಲ್ಲ ಕೇಂದ್ರಬಿಂದುವಾಗಿರಲು ಜೋರಾಗಿ ಮಾತನಾಡುತ್ತಾರೆ. ಮೇಷ ರಾಶಿಯು ಆಗಾಗ್ಗೆ ಯೋಚಿಸದೆ ಮಾತನಾಡಿ ಎಡವಟ್ಟು ಮಾಡಿಕೊಳ್ಳುತ್ತದೆ. ಕೋಪದಲ್ಲಿ ಕೂಗಾಡಿ ದ್ವೇಷ ಕಟ್ಟಿಕೊಳ್ಳುತ್ತದೆ.  ತಮ್ಮ ಅಭಿಪ್ರಾಯವನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಅವರು ಭಾವಿಸಿದರೆ, ಈ ಮೊಂಡುತನದ ರಾಶಿಚಕ್ರವು ಪ್ರತಿಯೊಬ್ಬರೂ ತಮ್ಮ ದೃಷ್ಟಿಕೋನವನ್ನು ಕೇಳುವಂತೆ ಸ್ವರ ಹೆಚ್ಚಿಸಿ ಮಾತನಾಡುತ್ತದೆ. 

ಕುಂಭ ರಾಶಿ(Aquarius)
ಅತ್ಯಂತ ಸ್ವತಂತ್ರ ರಾಶಿಚಕ್ರ ಚಿಹ್ನೆಗಳಲ್ಲಿ ಒಂದಾದ ಕುಂಭವು ಯಾವಾಗೆಂದರೆ ಆಗ ಮಾತನಾಡುವುದಿಲ್ಲ. ಕೊಂಚ ಮೂಡಿ ಸ್ವಭಾವದವರಾದ ಇವರು ಮಾತನಾಡುವ ಹುಕಿ ಬಂದರೆ ಮಾತ್ರ ನಿಲ್ಲಿಸುವವರೇ ಅಲ್ಲ. ತಮ್ಮಿಷ್ಟದ ವ್ಯಕ್ತಿಗಳೋ ಅಥವಾ ತಮಗಿಷ್ಟವಿರುವ ಹವ್ಯಾಸ, ಆಸಕ್ತಿಯನ್ನೇ ಹೊಂದಿರುವ ವ್ಯಕ್ತಿಗಳು ಸಿಕ್ಕಿದರೆ ಆಸಕ್ತಿಕರ ವಿಷಯಗಳ ಬಗ್ಗೆ ಕೊನೆತುದಿಯಿಲ್ಲದೆ ಮಾತಾಡಬಲ್ಲರು. ಬುದ್ಧಿವಂತಿಕೆಯ ಮಾತು ಇವರಿಗಿಷ್ಟ. 

Latest Videos

click me!