ಕನಸುಗಳು ನಮ್ಮ ಸುಪ್ತಾವಸ್ಥೆಯ ನಕ್ಷೆಯಾಗಿವೆ. ಅವು ನಮ್ಮ ಜೀವನದ ಗುಪ್ತ ಅಂಶಗಳಿಗೆ ನಮ್ಮನ್ನು ಕರೆದೊಯ್ಯುವ ಮಾರ್ಗವಾಗಿವೆ. ನಮ್ಮ ಕನಸನ್ನು ಅರ್ಥ ಮಾಡಿಕೊಳ್ಳಲು ನಾವು ಸ್ವಲ್ಪ ಸಮಯ ತೆಗೆದುಕೊಳ್ಳಬೇಕು.
ಮನಶಾಸ್ತ್ರದ ಪ್ರಕಾರ ಕನಸಿನಲ್ಲಿ ಚಂದ್ರನು ಸಾಮಾನ್ಯವಾಗಿ ವ್ಯಕ್ತಿಯ ನಿಗೂಢ ಮತ್ತು ಗುಪ್ತ ಅಂಶಗಳೊಂದಿಗೆ ಸಂಬಂಧ ಹೊಂದಿದ್ದಾನೆ. ಕೆಲವೊಮ್ಮೆ, ಕನಸಿನಲ್ಲಿ ಚಂದ್ರನು ಅಂತಃಪ್ರಜ್ಞೆಯನ್ನು ಸೂಚಿಸುತ್ತಾನೆ. ಆತ ನಮ್ಮ 6ನೇ ಇಂದ್ರಿಯದ ಭಾಗವಾಗಿಯೂ ಕಾಣಿಸುತ್ತಾನೆ. ಅಂದರೆ, ಮನಃಶಾಸ್ತ್ರದಲ್ಲಿ ಕೂಡಾ ಚಂದ್ರ ಮುಂದಾಗುವ ವಿಷಯದ ಬಗ್ಗೆ ಬೆಳಕು ಚೆಲ್ಲುತ್ತಾನೆ. ಇನ್ನು ಜ್ಯೋತಿಷ್ಯದ ಪ್ರಕಾರ, ಕನಸಿನಲ್ಲಿ ಚಂದ್ರನು ಕಾಣಿಸಿಕೊಂಡರೆ ಅದರರ್ಥ ಏನು ನೋಡೋಣ..
ಕನಸಿನ ವಿಜ್ಞಾನದ ಪ್ರಕಾರ, ಕನಸುಗಳು ನಮಗೆ ಭವಿಷ್ಯದ ಘಟನೆಗಳ ಸೂಚನೆಯನ್ನು ನೀಡುತ್ತವೆ. ಕನಸಿನಲ್ಲಿ ಚಂದ್ರನನ್ನು ನೋಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಕನಸಿನಲ್ಲಿ ಚಂದ್ರ ಬಂದರೆ ನಿಮ್ಮ ಜೀವನದಲ್ಲಿ ಸಂತೋಷವು ಶೀಘ್ರದಲ್ಲೇ ಬರಲಿದೆ ಎಂದರ್ಥ.
ಸ್ವಪ್ನಶಾಸ್ತ್ರದಲ್ಲಿ ಚಂದ್ರನ ಕನಸನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ ಎಂದರ್ಥ. ನೀವು ಶೀಘ್ರದಲ್ಲೇ ಯಶಸ್ಸನ್ನು ಪಡೆಯಲಿದ್ದೀರಿ.
ಅರ್ಧ ಚಂದ್ರ
ನಿಮ್ಮ ಕನಸಿನಲ್ಲಿ ಅರ್ಧ ಚಂದ್ರನನ್ನು ನೀವು ನೋಡಿದರೆ, ಶೀಘ್ರದಲ್ಲೇ ನೀವು ವ್ಯವಹಾರ ಅಥವಾ ಉದ್ಯೋಗದಲ್ಲಿ ಯಶಸ್ಸನ್ನು ಪಡೆಯುತ್ತೀರಿ ಎಂದರ್ಥ. ನಿಮ್ಮ ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ.
ಸಮುದ್ರತೀರದ ಚಂದ್ರ
ಸಮುದ್ರತೀರದಲ್ಲಿ ನಿಂತು ಚಂದ್ರನನ್ನು ನೋಡಿದಂತೆ ಕನಸು ಬಿದ್ದರೆ ಸಹ ಒಳ್ಳೆಯ ಕನಸು ಎಂದು ಪರಿಗಣಿಸಲಾಗುತ್ತದೆ. ಸಮುದ್ರ ತೀರದಲ್ಲಿ ಚಂದ್ರನನ್ನು ಕನಸಿನಲ್ಲಿ ನೋಡುವುದು ಸಂಗಾತಿಯೊಂದಿಗಿನ ಪ್ರೀತಿಯನ್ನು ಪ್ರತಿನಿಧಿಸುತ್ತದೆ. ಇದರರ್ಥ ನಿಮ್ಮಿಬ್ಬರ ನಡುವಿನ ಸಂಬಂಧವು ಗಟ್ಟಿಯಾಗಲಿದೆ.
ರಕ್ತ ಚಂದ್ರ
ಮತ್ತೊಂದೆಡೆ, ಕನಸಿನಲ್ಲಿ ಕೆಂಪು ಚಂದ್ರನನ್ನು ನೋಡುವುದು ಕೆಟ್ಟ ಕನಸು ಎಂದು ಪರಿಗಣಿಸಲಾಗುತ್ತದೆ. ಈ ಕನಸು ನೀವು ಶೀಘ್ರದಲ್ಲೇ ಜಗಳದಲ್ಲಿ ತೊಡಗಬಹುದು ಮತ್ತು ನೀವು ಜಾಗರೂಕರಾಗಿರಬೇಕು ಎಂದು ಸೂಚಿಸುತ್ತದೆ.
ಬಿದಿಗೆ ಚಂದ್ರ
ಕನಸಿನಲ್ಲಿ ಬಿದಿಗೆ ಚಂದ್ರನನ್ನು ನೋಡುವುದು ಒಳ್ಳೆಯದೆಂದು ಪರಿಗಣಿಸಲಾಗುವುದಿಲ್ಲ. ಕನಸಿನಲ್ಲಿ ತೆಳು ಗೆರೆಯಂಥ ಚಂದ್ರನನ್ನು ನೋಡುವುದು ಆರೋಗ್ಯ ಹದಗೆಡುವ ಸಂಕೇತವಾಗಿದೆ. ಈ ಕನಸು ನಿಮ್ಮ ಅಥವಾ ನಿಮ್ಮ ಮನೆಯ ಯಾವುದೇ ಸದಸ್ಯರ ಆರೋಗ್ಯವು ಹದಗೆಡಬಹುದು ಎಂದು ಸೂಚಿಸುತ್ತದೆ. ಅದಕ್ಕಾಗಿಯೇ ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.
ಹುಣ್ಣಿಮೆ ಚಂದ್ರ
ಕನಸಿನಲ್ಲಿ ಹುಣ್ಣಿಮೆಯನ್ನು ನೋಡುವುದು ತುಂಬಾ ಶುಭ. ಕನಸಿನಲ್ಲಿ ಹುಣ್ಣಿಮೆಯನ್ನು ನೋಡಲು ನಿಮ್ಮ ಎಲ್ಲಾ ಸ್ಥಗಿತಗೊಂಡ ಕೆಲಸಗಳು ಶೀಘ್ರದಲ್ಲೇ ಪೂರ್ಣಗೊಳ್ಳುತ್ತವೆ. ಈ ಕನಸು ಎಂದರೆ ನೀವು ಶೀಘ್ರದಲ್ಲೇ ಸಂತೋಷ ಮತ್ತು ಶಾಂತಿಯನ್ನು ಪಡೆಯುತ್ತೀರಿ.