ಪ್ರತಿಯೊಬ್ಬರಿಗೂ ಕನಸುಗಳಿರುತ್ತವೆ. ಅವುಗಳನ್ನು ನನಸಾಗಿಸಲು ಪ್ರಯತ್ನಿಸುತ್ತಾರೆ. ಆದರೆ ಕೆಲವರು ಮಾತ್ರ ಯಶಸ್ವಿಯಾಗುತ್ತಾರೆ. ಕೆಲವರು ಸಮಸ್ಯೆ ಬಂದಾಗ ಕನಸನ್ನೇ ಬಿಟ್ಟುಬಿಡ್ತಾರೆ. ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಯವರು ಎಷ್ಟೇ ಅಡ್ಡಿಗಳು ಬಂದ್ರೂ ಗುರಿ ಮುಟ್ಟುತ್ತಾರೆ.
25
1.ಮೇಷ ರಾಶಿ..
ಮೇಷ ರಾಶಿಯವರು ಕನಸುಗಾರರು. ಆದರೆ ಕನಸು ಕಾಣುವುದಷ್ಟೇ ಅಲ್ಲ, ಅದನ್ನು ನನಸಾಗಿಸಲು ಶ್ರಮಿಸುತ್ತಾರೆ. ಎಷ್ಟೇ ಸವಾಲುಗಳಿದ್ದರೂ, ಸೋಲನ್ನ ಒಪ್ಕೊಳ್ಳದೆ ಮುಂದೆ ಸಾಗುತ್ತಾರೆ.
35
2.ವೃಶ್ಚಿಕ ರಾಶಿ..
ವೃಶ್ಚಿಕ ರಾಶಿಯವರಿಗೆ ಛಲ ಹೆಚ್ಚು. ಒತ್ತಡವನ್ನು ನಿಭಾಯಿಸುವ ಶಕ್ತಿ ಇದೆ. ಬದಲಾವಣೆಗಳಿಗೆ ಹೊಂದಿಕೊಳ್ಳುತ್ತಾರೆ. ತಡವಾದರೂ ಗುರಿ ಮುಟ್ಟುತ್ತಾರೆ.
45
3.ಮಕರ ರಾಶಿ...
ಮಕರ ರಾಶಿಯವರು ಶಿಸ್ತಿಗೆ ಹೆಸರುವಾಸಿ. ಯೋಜನೆ ರೂಪಿಸಿ, ಸಮಯ ವ್ಯರ್ಥ ಮಾಡದೆ ಗುರಿ ತಲುಪಲು ಶ್ರಮಿಸುತ್ತಾರೆ.
55
4.ಸಿಂಹ ರಾಶಿ...
ಸಿಂಹ ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚು. ಜೀವನವನ್ನು ಚೆನ್ನಾಗಿ ಬಾಳಬೇಕೆಂಬ ಹಂಬಲ. ಉತ್ಸಾಹದಿಂದ ಗುರಿ ತಲುಪುವವರೆಗೂ ಪ್ರಯತ್ನಿಸುತ್ತಾರೆ. ಸೋತರೂ ಮತ್ತೆ ಏಳುವ ಛಲ ಇವರಲ್ಲಿದೆ.